ಅನಧಿಕೃತ ರೆಸಾರ್ಟ್​ಗಳನ್ನು ಬಂದ್​ ಮಾಡಿಸಿದ ಅಧಿಕಾರಿಗಳು!

 

ಕೊಪ್ಪಳ: ಚುನಾವಣೆ ಬಂದಾಗ ರೆಸಾರ್ಟ್​ ಶಬ್ದ ಕೇಳಿಸಿದರೆ ಸಾಕು, ಕಿವಿಗಳು ನೆಟ್ಟಗಾಗುತ್ತವೆ. ರಾಜಕೀಯದಿಂದ ಹಿಡಿದು ಅನೈತಿಕ ಚಟುವಟಿಕೆಗಳಿಗೆ ರೆಸಾರ್ಟ್​ಗಳ ಬಳಕೆಯ ಬಗ್ಗೆ ಜನರು ಹೆಚ್ಚಾಗಿ ಕೇಳಿರುವುದು ಇದಕ್ಕೆ ಕಾರಣ ಎಂದು ಹೇಳಬಹುದೋ ಏನೋ.

ಇದೀಗ ಅಧಿಕಾರಿಗಳು 60ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್​ಗಳ ಮೇಲೆ ದಾಳಿ ಮಾಡಿದ್ದು ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿ ಮಾಲೀಕರಿಗೆ ಚುರುಕು ಮುಟ್ಟಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸಣಾಪೂರ, ಜಂಗ್ಲಿ, ರಾಂಪೂರ, ಹನುಮನಹಳ್ಳಿ, ಮಲ್ಲಾಪೂರ, ಗಡ್ಡಿ, ಮುಂತಾದ ಗ್ರಾಮಗಳಲ್ಲಿ ಜನರು ಅಕ್ರಮವಾಗಿ ರೆಸಾರ್ಟ್​ಗಳನ್ನು ಕಟ್ಟಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ಮಾಡಿದ್ದು ರೆಸಾರ್ಟ್​ಗಳಿಗೆ ಅಕ್ರಮವಾಗಿ ಕಲ್ಪಿಸಲಾಗಿದ್ದ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ‌ ರೆಸಾರ್ಟ್​ಗಳನ್ನು ಬಂದ್ ಮಾಡಿಸಿದ್ದಾರೆ.

ಇದೀಗ ಒಂದು ವಾರದಲ್ಲಿ ಕಟ್ಟಡದ ತೆರವಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ,‌ ಕೊಪ್ಪಳ ಎಸಿ ಬಸವಣ್ಣೆಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಕಂದಾಯ,‌ ಅರಣ್ಯ,‌ ಜೆಸ್ಕಾಂ,‌ ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರುತ್ತಲೇ ಇದೆ ಸಾವಿನ ಸಂಖ್ಯೆ.

Fri Feb 10 , 2023
ಅಂಕಾರಾ/ಜಕಾರ್ತಾ:ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಉಂಟಾಗಿ ಗುರುವಾರಕ್ಕೆ ಮೂರು ದಿನಗಳು ಪೂರ್ತಿಯಾಗಿವೆ. ಎರಡು ದೇಶಗಳಲ್ಲಿ ಅಸುನೀಗಿದವರ ಸಂಖ್ಯೆ 19,300ನ್ನು ದಾಟಿವೆ. ಟರ್ಕಿಯ ಪ್ರಧಾನ ನಗರ ಅಂಕಾರ ಸೇರಿದಂತೆ ಹಲವೆಡೆ ಇನ್ನೂ ರಕ್ಷಣೆ ಮತ್ತು ಪರಿಹಾರ ಕಾರ್ಯ ಚುರುಕುಗೊಂಡಿಲ್ಲ. ಹಲವೆಡೆ ಜನರು ಇನ್ನೂ ಕೂಡ ಕುಸಿದ ಬಿದ್ದ ಕಟ್ಟಡಗಳ ಅವಶೇಷಗಳ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಹಲವರನ್ನು ಜೀವಂತವಾಗಿ ಪಾರು ಮಾಡಲಾಗಿದೆ. ಇದರ ನಡುವೆಯೇ, ಟರ್ಕಿಯ ಸರ್ಕಾರ […]

Advertisement

Wordpress Social Share Plugin powered by Ultimatelysocial