ಅಪ್ಪ ಮಗಳಾಗಿ ಪ್ರಕಾಶ್ ರೈ-ಸಾಯಿ ಪಲ್ಲವಿ

ಓವರ್ ದಿ ಟಾಪ್ (ಓಟಿಟಿ) ವೇದಿಕೆ ದಿನಕಳೆದಂತೆ ಹಿರಿದಾಗುತ್ತಿದೆ. ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಎಲ್ಲೆಡೆ ಹಬ್ಬುತ್ತಿದೆ. ಸಿನಿಮಾದ ಸ್ಟಾರ್ ಕಲಾವಿದರೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಬಾಲಿವುಡ್‌ನಲ್ಲಂತೂ ಎ ಗ್ರೇಡ್ ನಟ, ನಟಿಯರಿಗೂ ವೆಬ್‌ಸರಣಿ ಇಷ್ಟವಾಗುತ್ತಿವೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅದರ ಘಮ ಕಮ್ಮಿ ಏನಿಲ್ಲ. ಇದೀಗ ಆ ವೇದಿಕೆ ಪ್ರವೇಶಿಸಲು ನಟಿ ಸಾಯಿ ಪಲ್ಲವಿ ಸಿದ್ಧರಾಗುತ್ತಿದ್ದಾರೆ. ಅವರೊಂದಿಗೆ ಬಹುಭಾಷಾ ನಟ ಪ್ರಕಾಶ್ ರೈ ಸಹ ಕೈ ಜೋಡಿಸಿದ್ದಾರೆ. ಅಂದಹಾಗೆ, ತಮಿಳಿನಲ್ಲಿ ಸಿದ್ಧವಾಗಲಿರುವ ಈ ವೆಬ್‌ಸಿರೀಸ್‌ನಲ್ಲಿ ಪ್ರಕಾಶ್ ರೈ ಮತ್ತು ಸಾಯಿ ಪಲ್ಲವಿ ಅಪ್ಪ-ಮಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್ ಸರಣಿ ಇದಾಗಿರಲಿದ್ದು, ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವೆಬ್‌ಸರಣಿ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ದೇಶಕರು ಹೇಳಿಕೊಂಡಿರಲಿಲ್ಲ. ಇದೀಗ ಶೂಟಿಂಗ್‌ಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಇನ್ನು ಕೆಲ ದಿನಗಳಲ್ಲಿ ಅಧಿಕೃತ ಫೋಷಣೆ ಮಾಡಲಿದ್ದಾರಂತೆ.

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ

Tue Jul 28 , 2020
ಎಲ್ಲಾ ಅಂದುಕೊoಡoತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ‘ತಲಾಖ್ ತಲಾಖ್ ತಲಾಖ್’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಚಿತ್ರಮಂದಿರಗಳೆಲ್ಲ ಬಂದ್ ಆಗಿರುವುದರಿಂದ, ಚಿತ್ರದ ಬಿಡುಗಡೆ ತಡವಾಗಿದೆ. ಈ ಮಧ್ಯೆ, ಚಿತ್ರವು ದಿ ಲಿಫ್ಟ್ ಆಪ್ ಸೆಷೆನ್ಸ್ ಹಾಲಿವುಡ್ ೨೦೨೦ ಹಾಗೂ ದಿ ಲಿಸ್ಟ್ ಆಫ್ ಯುಕೆ ೨೦೨೦ ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆದಿದೆ. ಇದಲ್ಲದೆ, ಕಾಸ್ಮೋ ಫಿಲಂ ಫೆಸ್ಟಿವಲ್ ಮೇ ೨೦೨೦ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಇಂಡೋ ಗ್ಲೋಬಲ್ ಚಿತ್ರೋತ್ಸವದಲ್ಲಿ […]

Advertisement

Wordpress Social Share Plugin powered by Ultimatelysocial