ಅಮೇರಿಕಾದಲ್ಲಿ ಸ್ಥಾಪನೆಯಾಯ್ತು ಆಂಜನೇಯನ ಪ್ರತಿಮೆ

ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ತೆಲಂಗಾಣದ ವಾರಂಗಲ್‌ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ. ಇದು ಸದ್ಯ ಅಮೆರಿಕಾದಲ್ಲಿ ಸ್ಥಾಪನೆಯಾದ ಅತಿ ಎತ್ತರದ ಆಂಜನೇಯ ಪ್ರತಿಮೆ ಎಂದೇ ಖ್ಯಾತಿಯಾಗಿದ್ದು, ಈ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ ಪ್ರತಿಮೆಯನ್ನು ರೆಡಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಹಿಂದೂ ಟೆಂಪಲ್ ಆಫ್ ಡೋಲಾವೆಯರ್ ಅಸೋಸಿಯೇಷನ್ ಅಧ್ಯಕ್ಷ ಪತಿಬಂದ್ ಶರ್ಮಾ, ಇದರ ತೂಕ 45 ಟನ್ ಗಳಷ್ಟಾಗಿದ್ದು, ಇದನ್ನು ತೆಲಂಗಾಣ ರಾಜ್ಯದ ವಾರಂಗಲ್ ನಿಂದ ಆಮದು ಮಾಡಿಕೊಳ್ಳಲಾಗಿದೆ, ಇನ್ನು ಈ ಪ್ರತಿಮೆಯ ನಿರ್ಮಾಣ ಮತ್ತು ಅಮೆರಿಕಾಕ್ಕೆ ತರಲು ಬರೋಬ್ಬರಿ 1 ಲಕ್ಷ ಅಮೆರಿಕನ್ ಡಾಲರ್ ವೆಚ್ಚ ತಗುಲಿದೆ ಎಂದು ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಕರಾವಳಿಯಲ್ಲಿ ಮುಂದುವರಿದ ಮಳೇ

Wed Jun 17 , 2020
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿಯಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ ರಾತ್ರಿ ಗುಡುಗು ಸಹಿತ ಮಳೆಯಾಗಿದೆ ಇನ್ನೂ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೊಷಿಸಲಾಗಿದೆ, 19 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಜೂನ್ 19 ರ ವೇಳೆಗೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು ವಾತಾವರಣದಲ್ಲಿ ಬದಲಾಗಿ ತೇವಾಂಶದಿಂದ ಕೂಡಿದ ಗಾಳಿ ಚಲನೆ ಆಗುತ್ತಿದೆ. […]

Advertisement

Wordpress Social Share Plugin powered by Ultimatelysocial