ಅಮೇರಿಕಾ ಆರೋಪ ತಳ್ಳಿ ಹಾಕಿದ WHO

ನ್ಯೂಯಾರ್ಕ್ : ಕೊರೊನಾ ವೈರಸ್ ಹುಟ್ಟಿದ್ದು ವುಹಾನ್ ಪ್ರಯೋಗಾಲಯದಲ್ಲೇ ಎಂದು ಆರೋಪಿಸಿದ ಬೆನ್ನಲ್ಲೇ, ವುಹಾನ್ ನಗರದಲ್ಲಿ ಏಕಾಏಕಿ ಹರಡಿದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಚೀನಾ, ತಪ್ಪಾಗಿ ನಿರ್ವಹಿಸಿದೆ ಎಂದು ಶ್ವೇತಭವನ(ಡಬ್ಲೂಹೆಚ್‌ಒ) ಆರೋಪಿಸಿದೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕೊರೊನಾ ವೈರಸ್, ಇದುವರೆಗೆ ೬೪,೦೦೦ ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ ಸುಮಾರು ೨,೪೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದಾದ್ಯಂತ ೩೪ ಲಕ್ಷ ಜನರಿಗೆ ಸೋಂಕು ತಗುಲಿಸಿದೆ. ಸದ್ಯ ಅಮೆರಿಕಾ ಸೇರಿದಂತೆ ವಿಶ್ವದ ಪ್ರಬಲ ರಾಷ್ಟ್ರಗಳಾದ, ಜರ್ಮನಿ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳು ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿರುವ ವಿಚಾರವಾಗಿ ಚೀನಾವನ್ನು ದೂಷಿಸುತ್ತಿವೆ. ಗುರುವಾರ ಯುಎಸ್ ಅಧ್ಯಕ್ಷ ಟ್ರಂಪ್, ವೈರಸ್ ಹರಡುವಿಕೆಯನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಚೀನಾವನ್ನು ಶಿಕ್ಷಿಸಲು ತೆರಿಗೆಯನ್ನು ಒಂದು ಸಾಧನವಾಗಿ ಬಳಸುವ ಬಗ್ಗೆ ಸುಳಿವು ನೀಡಿದ್ದರು. ಅದರ ಮರುದಿನವೇ ಮಾರುಕಟ್ಟೆಗಳು ಕುಸಿದಿತ್ತು. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಟ್ರಂಪ್ ಆರೋಪವನ್ನು ತಳ್ಳಿಹಾಕಿದೆ. ವೈರಸ್ ನೈಸರ್ಗಿಕ ಮೂಲದಿಂದ ಹುಟ್ಟಿದೆ ಎಂದ ಡಬ್ಲೂಹೆಚ್‌ಒ. ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿದ್ದು ಎಂಬ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸ್ಥಿತಿಯ ಮುಖ್ಯಸ್ಥರಾದ ಡಾ. ಮೈಕೆಲ್ ರಯಾನ್, ಈ ವೈರಸ್ ಯಾವುದೋ ನೈಸರ್ಗಿಕ ಮೂಲದಲ್ಲಿ ಹುಟ್ಟಿದ್ದು ಎಂದು ತಿಳಿಸಿದ್ದಾರೆ. ಜೀನ್ ಅನುಕ್ರಮಗಳು ಮತ್ತು ವೈರಸ್ ಅನ್ನು ನೋಡಿದ ಅನೇಕ ವಿಜ್ಞಾನಿಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾತನಾಡಿದ್ದು, ಈ ವೈರಸ್ ನೈಸರ್ಗಿಕ ಮೂಲದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಯಾನ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

 ಸ್ಯಾಂಡಲ್ ವುಡ್ ಗೆ ತಮನ್ನಾ ಎಂಟ್ರಿ ..?

Sat May 2 , 2020
ಮಿಲ್ಕ್ ಬ್ಯೂಟಿ ಖ್ಯಾತಿಯ ನಟಿ ತಮ್ಮನ್ನಾ ಭಾಟೀಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಿರೋ ಇನ್ ಆಗಿ ಮೇರೆಯುತ್ತಿದ್ದಾರೆ..ಬಾಲಿವುಡ್ ಗೂ ಕಾಲಿಟ್ಟು ಕೆಲವೇ ಕೆಲವು ಸಿನಿಮಾ ಮಾಡಿದ್ದಾರೆ.. ತಮನ್ನಾಗೆ ಸೌತ್ ಇಂಡಸ್ಟ್ರೀಯಲ್ಲಿ ಸಿಕ್ಕಷ್ಟು ಯಶಸ್ಸು ಬಾಲಿವುಡ್ ನಲ್ಲಿ ಸಿಕ್ಕಿಲ್ಲ..ಈಗ ಸ್ಯಾಂಡಲ್ ವುಡ್ ಗೆ ತಮನ್ನಾ ಎಂಟ್ರಿಯಾಗೋ ಎಲ್ಲಾ ಲಕ್ಷಣ ಕಾಣುತ್ತಿದೆ..ಅದ್ರಲ್ಲೂ ಕನ್ನಡ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ..ಈ ಹಿಂದೆ […]

Advertisement

Wordpress Social Share Plugin powered by Ultimatelysocial