ಅಶೋಕ್ ಗೆಹ್ಲೂಟ್‌ರಿಂದ ಪ್ರಧಾನಿಗೆ ಪತ್ರ

ರಾಜಸ್ಥಾನ ಸರ್ಕಾರ ದಿನ ದಿಂದ ದಿನಕ್ಕೆ ರಂಗೇರುತ್ತಿದೆ ಆರೋಪ ಪ್ರತ್ಯಾರೋಪ ವಂತು ತಾರಕಕ್ಕೇರಿರುವುದು ಅಂತು ಸುಳ್ಳಲ್ಲ.ಸರ್ಕಾರ ಉರುಳಿಸಲು ಹಲವು ನಾಯಕರ ಸಂಚು ಪ್ರಧಾನಿ ಮೋದಿಗೆ ಪತ್ರ ಬರೆದ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೊಟ್ ತಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಸರನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮಗೆ ಎಷ್ಟು ಅರಿವಿದೆ, ಅಥವಾ ನಿಮಗೆ ಇದರಲ್ಲಿ ಯಾರಾದರೂ ತಪ್ಪು ಮಾಹಿತಿ ನೀಡುತ್ತಿದ್ದಾರೆಯೋ ಗೊತ್ತಿಲ್ಲ, ಈ ಕೆಲಸದಲ್ಲಿ ತೊಡಗಿರುವವರನ್ನು ಮಾತ್ರ ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಪತ್ರದಲ್ಲಿ ಅಶೋಕ್ ಗೆಹ್ಲೊಟ್ ಆರೋಪಿಸಿದ್ದಾರೆ ರಾಜ್ಯದಲ್ಲಿ ಅಧಿಕಾರ ವಿಚಾರದಲ್ಲಿ ಅಶೋಕ್ ಗೆಹ್ಲೊಟ್ ಮತ್ತು ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿದ ಸಚಿನ್ ಪೈಲಟ್ ಜೊತೆಗೆ ೧೮ ಶಾಸಕರು ಬಂಡಾಯವೆದ್ದು ಹೊರನಡೆದಿರುವುದು ರಾಜಕೀಯ ಕಗ್ಗಂಟನ್ನು ಸೃಷ್ಟಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಭೀಮಾತೀರದಲ್ಲಿ ಮತ್ತೆ ಹಂತಕರ ಹಾವಳಿ ಶುರು

Thu Jul 23 , 2020
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ನಾಮದೇವ್ ಡಾಂಗೆ ಇಂಡಿಯಲ್ಲಿ ಜ್ಯೂವೆಲರಿ ಶಾಪ್ ನಡೆಸುತ್ತಿದ್ದು 5 ಕೋಟಿ ಹಣ, ಅಥವಾ 3 ಕೆ.ಜಿ ಚಿನ್ನ ಕೊಡುವಂತೆ ಮಹಾದೇವ ಸಾಹುಕಾರ್ ಭೈರಗೊಂಡ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಮದೇವ್ ಡಾಂಗೆ ಆರೋಪಿಸಿ ದೂರು ನೀಡಿದ್ದಾರೆ. ಮಹಾದೇವ್ ಸಾಹುಕಾರ್ ಭೈರಗೊಂಡ ಹಾಗೂ ಸಹಚರರು ನಾಮದೇವ್ ಡಾಂಗೆಗೆ ಧಮ್ಕಿ ಹಾಕಿದ್ದರು. ಹಣ ಅಥವಾ ಚಿನ್ನ ಕೊಡದಿದ್ದರೆ ಮನೆಗೆ ಬಂದು ತಲೆಗೆ ಗುಂಡಿಕ್ಕುವದಾಗಿ ಬೆದರಿಕೆ ಹಾಕಿದ್ದರು […]

Advertisement

Wordpress Social Share Plugin powered by Ultimatelysocial