ಅಸಹಾಯಕರಿಗೆ ಸಹಾಯ ಮಾಡಿ: ಮೋದಿ

ನವದೆಹಲಿ: ಇವತ್ತು ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಾರಿಯರ್ಸ್ ಉದ್ದೇಶಿಸಿ ಮಾತನಾಡಿದ್ದು, ದೇಶದ ಕಷ್ಟದ ಪರಿಸ್ಥಿತಿಯಲ್ಲಿದೆ. ಭಾರತ ಇಡೀ ವಿಶ್ವಕ್ಕೆ ತನ್ನ ಮಾರ್ಗ ತೋರಿಸಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಉಳಿದಿದೆ ಎಂದರು. ದೇಶದ ಎಲ್ಲ ಜನತಗೆ ಬುದ್ಧ ಪೂರ್ಣಿಮಾದ ಶುಭಾಶಯಗಳು. ೨೦೧೫ ಮತ್ತು ೨೦೧೮ರಂದು ದೆಹಲಿಯಲ್ಲಿ ಹಾಗೂ ೨೦೧೭ರಲ್ಲಿ ಕೊಲೊಂಬೋದಲ್ಲಿ ನಿಮ್ಮ ಜೊತೆಯಲ್ಲಿದ್ದೆ. ಆದರೆ ಇಂದು ಬದಲಾದ ದಿನಗಳಲ್ಲಿ ನೇರವಾಗಿ ನಿಮ್ಮ ಜೊತೆ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಟೆಕ್ನಾಲಜಿ ಮೂಲಕ ನಿಮ್ಮ ಜೊತೆಗೆ ಬಂದಿದ್ದೇನೆ. ನಿಮ್ಮ ಜೊತೆಯಲ್ಲಿರೋದು ನನಗೆ ಖುಷಿಯ ವಿಚಾರ.
ವಿಶ್ವದ ಹಲವು ಪ್ರದೇಶಗಳಲ್ಲಿ ಬುದ್ಧ ಪೂರ್ಣಿಮಾ ಆಚರಣೆ ನೇರಪ್ರಸಾರ ಆಗುತ್ತಿರೋದು ಗಮನಿಸಿದ್ರೆ ಸಂತೋಷವಾಗುತ್ತದೆ. ಎಲ್ಲ ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ವಾರಿಯರ್ಸ್ ಗಾಗಿ ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಕೊರೊನಾದ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದಾಗಿದೆ. ಭಾರತೀಯ ಸಂಸ್ಕೃತಿ, ಜೀವನಶೈಲಿ ಇತರೆ ದೇಶಗಳಿಗೆ ಮಾದರಿಯಾಗಿದ್ದು, ನಮ್ಮ ಸಂಪ್ರದಾಯಗಳನ್ನು ಆಚರಿಸುತ್ತಿದ್ದಾರೆ. ಇಂದು ಸಮಾಜ, ವ್ಯವಸ್ಥೆ, ಜನ ಎಲ್ಲವೂ ಬದಲಾಗಿದೆ. ಆದ್ರೆ ಬುದ್ಧನ ಸಂದೇಶಗಳು ಇಂದಿಗೂ ನಮ್ಮ ಜೊತೆಯಲ್ಲಿವೆ. ಬುದ್ಧ ಅಂದ್ರೆ ತ್ಯಾಗ ಮತ್ತು ಸಮರ್ಪಣೆ, ಪವಿತ್ರ ಎಂದರ್ಥ.
ಕೊರೊನಾ ವಾರಿಯರ್ಸ್ ೨೪ ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರನ್ನು ಗೌರವಿಸಬೇಕು. ಇಡೀ ವಿಶ್ವದಲ್ಲಿ ಹತಾಶೆ, ದುಃಖ, ಸೋಲು ಕಾಣುತ್ತಿದೆ. ಇವೆಲ್ಲವೂಗಳಿಂದ ಹೊರ ಬಂದ್ರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಾವು ಸಹ ಬದಲಾದ ಜೀವನಕ್ಕೆ ಹೊಂದಿಕೊಳ್ಳಬೇಕು. ಬುದ್ಧ ಹೇಳಿದಂತೆ ದಯೆ, ಕರುಣೆ, ಸುಖದುಃಖ, ಮೂಲ ರೂಪದಲ್ಲಿರೋದನ್ನು ಸ್ವೀಕರಿಸೋದನ್ನು ನಾವು ಕಲಿಯೋಣ. ಇಂದು ಭಾರತ ನಿಸ್ವಾರ್ಥ ಮತ್ತು ಯಾರನ್ನು ವಿಂಗಡಿಸದೇ ಎಲ್ಲರ ಜೊತೆಯಲ್ಲಿ ನಿಂತಿದೆ. ನಿಮ್ಮ ಶಕ್ತಿಗನುಸಾರವಾಗಿ ದೇಶಕ್ಕಾಗಿ ಸಹಾಯ ಮಾಡಿ. ಭಾರತ ಪ್ರತಿ ನಿವಾಸಿ ಜೀವ ಉಳಿಸಲು ಪ್ರಯತ್ನಿಸುತ್ತಿದೆ. ವಿಶ್ವಮಹಾಮಾರಿಯನ್ನು ಸೋಲಿಸಲು ಭಾರತ ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಕಠಿಣ ದಿನಗಳು ನಮ್ಮನ್ನು ಸದೃಢ ಮಾಡುತ್ತವೆ. ನಾವು ಶೀಘ್ರದಲ್ಲಿಯೇ ಎಲ್ಲ ಕಷ್ಟಗಳಿಂದ ಹೊರ ಬರಲಿದ್ದೇವೆ. ಬುದ್ಧ ಸಂದೇಶಗಳನ್ನು ಕಷ್ಟದ ಸಮಯದಲ್ಲಿ ನಮ್ಮನ್ನು ಮಾರ್ಗದರ್ಶನದ ಮೂಲಕ ಉತ್ತೇಜನಗೊಳಿಸುತ್ತವೆ.

Please follow and like us:

Leave a Reply

Your email address will not be published. Required fields are marked *

Next Post

ತವರಿಗೆ ಮರಳಿದ ಸಾಕಾನೆಗಳು

Thu May 7 , 2020
ಬ್ಯಾಂಕಾಕ್ : ಕೊರೊನಾ ಸೋಂಕು ಕಾರಣದಿಂದಾಗಿ ಥೈಲ್ಯಾಂಡ್‌ನಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಈ ಕೊರೊನಾ ಬಿಸಿ ತಟ್ಟಿದೆ ಅಂರೆ ತಪ್ಪಾಗಲಾರದು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರವಾಸಿಗರನ್ನು ಅವಲಂಭಿಸಿರುವ ಆನೆಗಳು ಈಗ ಹಸಿವಿನಿಂದ ತೊಂದರೆಗೊಳಗಾಗಿವೆ. ಈ ಹಿನ್ನೆಲೆ ಅವುಗಳನ್ನು ಮತ್ತೇ ತಮ್ಮ ನೈಸರ್ಗಿಕ ವಾಸಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ೧೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ೧೫೦ ಕಿ.ಮೀ(೯೫ ಮೈಲಿ) ದೂರದ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉತ್ತರ ಪ್ರಾಂತ್ಯದ ಚಿಯಾಂಗ್ […]

Advertisement

Wordpress Social Share Plugin powered by Ultimatelysocial