ಆಧಾರ ರಹಿತ ಆರೋಪ ರಾಜ್ಯದ ಜನ ನಂಬಲ್ಲ

ರಾಜ್ಯ ರಾಜಕಾರಣದಲ್ಲಿ ಕೊರೊನಾ ಸಂದರ್ಭ ಸಾಕಷ್ಟು ರಾಜಕೀಯ ಪ್ರಹಸನ ನಡೆಯುತ್ತಲೆ ಇದೆ. ರಾಜ್ಯ ಸರ್ಕಾರದ ವಿರುದ್ಧ ಸದಾ ಒಂದಲ್ಲಾ ಒಂದು ವಿಷಯಕ್ಕೆ ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಲೆ ಇದೆ. ಕೊರೊನಾ ಸಂದರ್ಭ ರಾಜ್ಯ ಸರ್ಕಾರ ಹಲವಾರು ಭ್ರಷ್ಟಾಚಾರ ನಡೆಸಿದೆ ಎಂದೆಲ್ಲಾ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್‌ನಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ಹೇಳಿದ್ದರು. ಕೊರೊನಾ ಚಿಕಿತ್ಸೆ ವೆಚ್ಚದ ವಿಚಾರದಲ್ಲಿ ಭ್ರಷ್ಟಚಾರವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ನಾಯಕರ ಆರೋಪವನ್ನು ಕರ್ನಾಟಕದ ಜನ ನಂಬಲ್ಲ,ಜನರಿಗೆ ಸತ್ಯಯಾವುದು ಸುಳ್ಳು ಯಾವುದು ಎಂದು ಗೊತ್ತಿದೆ. ಯಾರು ಬೇಕಾದರೂ ಲೆಕ್ಕ ಕೇಳಿದರೆ ನಮ್ಮ ಬಳಿ ಸರಿಯಾದ ದಾಖಲೆಗಳಿವೆ ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

370ನೇ ಕಲಂ ರದ್ದಾಗಿದ್ದು ಈಗ 12ನೇ ತರಗತಿಗೆ ಪಠ್ಯ

Thu Jul 23 , 2020
ಕಳೆದ ವರ್ಷ ಆ. ೫ರಂದು, ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತಲ್ಲದೆ, ಜಮ್ಮು ಕಾಶ್ಮೀರವನ್ನು, ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಕೌನ್ಸಿಲ್ ಎನ್‌ಸಿಇಆರ್‌ಟಿ, ೧೨ನೇ ತರಗತಿಯ ಸಮಾಜ ಪಠ್ಯದಲ್ಲಿರುವ “Politics in India since Independence’’ಎಂಬ ಪಾಠವನ್ನು ಪರಿಷ್ಕರಣೆಗೊಳಿಸಿದೆ. ಅದರಲ್ಲಿ, ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆಯಲು ಕಾರಣವಾದ ಸಂವಿಧಾನದ ೩೭೦ನೇ ಕಲಂ ರದ್ದು ವಿಷಯವನ್ನು […]

Advertisement

Wordpress Social Share Plugin powered by Ultimatelysocial