ಆಯನೂರು ಮಂಜುನಾಥ್ ಅವರನ್ನು ಕೊಳಚೆ ನೀರಿಗೆ ಹೋಲಿಸಿದ ಬಿ.ಎಲ್. ಸಂತೋಷ್

 

 

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಪ್ರಚಾರದ ಅಬ್ಬರ ಜೋರಾಗ ತೊಡಗಿದ್ದು, ಎದುರಾಳಿಗಳ ವಿರುದ್ಧ ರಾಜಕೀಯ ನಾಯಕರು ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ.

ಶಿವಮೊಗ್ಗದಲ್ಲಿ ಭಾನುವಾರದಂದು ಆಯೋಜಿಸಿದ್ದ ಸಾಮರಸ್ಯ ಸಮಾವೇಶದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.

ಸಂತೋಷ್, ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಬಳಿಕ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್ ವಿರುದ್ಧ ಕಿಡಿ ಕಾರಿದ್ದಾರೆ.

ನದಿಯಲ್ಲಿ ಹರಿಯುವ ಶುದ್ಧ ನೀರು ಬಳಿಕ ಸಮುದ್ರಕ್ಕೆ ಸೇರಿಕೊಂಡು ಆವಿಯಾಗಿ ಮತ್ತೆ ಮಳೆಯಾಗಿ ಬರುತ್ತದೆ. ಆದರೆ ಕೊಳಚೆ ನೀರು ಅಲ್ಲಲ್ಲಿ ಕಟ್ಟಿಕೊಂಡು ಕಲುಷಿತ ವಾತಾವರಣ ಸೃಷ್ಟಿಸುತ್ತದೆ. ಅದೇ ರೀತಿ ಕೆಲವರು ಟೀಕೆ ಮಾಡಿ ಪಕ್ಷದಿಂದ ಹೊರ ಹೋಗಿದ್ದಾರೆ ಎಂದು ಆಯನೂರು ಮಂಜುನಾಥ್ ರನ್ನು ಟೀಕಿಸಿದ್ದಾರೆ.

ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ನಾಲ್ಕೂ ಸದನಗಳನ್ನು ಪ್ರವೇಶ ಮಾಡಿದ್ದ ಅವರು, ಈಗ ಪಕ್ಷಕ್ಕೆ ಬೈಯುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ವಿರುದ್ಧ ಕಿಡಿ ಕಾರಿದ ಬಿ.ಎಲ್. ಸಂತೋಷ್, ಕೇವಲ ತಿನ್ನುವುದನ್ನು ಜಾಯಮಾನ ಮಾಡಿಕೊಂಡವರಿಂದ ಸಮಾಜಕ್ಕೆ ಯಾವುದೇ ಕೊಡುಗೆ ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ಪ್ರತಿದಿನ ಕಲ್ಲಂಗಡಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು...?

Mon May 1 , 2023
  ಬೇಸಿಗೆಯಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನಗಳಲ್ಲಿ ರಸಭರಿತವಾದ ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ ಸಿ ಮತ್ತು ಎ ಅಂಶವು ಕಲ್ಲಂಗಡಿಯಲ್ಲಿ ಕಂಡುಬರುತ್ತದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಬಯಸುವವರು, ಕಲ್ಲಂಗಡಿ ತಿನ್ನಬೇಕು. ಏಕೆಂದರೆ ಇದು ಬಹಳಷ್ಟು ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಹಸಿವನ್ನು ನಿಗ್ರಹಿಸುತ್ತದೆ ಮತ್ತು ಪೌಷ್ಟಿಕಾಂಶವನ್ನು ನೀಡುತ್ತದೆ. ಹಾಗಾದರೆ ಕಲ್ಲಂಗಡಿ […]

Advertisement

Wordpress Social Share Plugin powered by Ultimatelysocial