ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ, ಸೇವಾ ಭದ್ರತೆಗೆ ಸಿಎಂ ಬೊಮ್ಮಾಯಿ ಭರವಸೆ:

 

 

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಹಾಗೂ 60 ವರ್ಷದವರೆಗೂ ಸೇವಾ ಭದ್ರತೆ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಗೌರವಾಧ್ಯಕ್ಷ ಆಯನೂರು ಮಂಜುನಾಥ ಧನ್ಯವಾದ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಆರೋಗ್ಯ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ KSHCOEA ಸಂಘವು ಹಲವಾರು ವರ್ಷಗಳಿಂದ, ಹಲವು ಹಂತಗಳಲ್ಲಿ ಹೋರಾಟದ ಫಲವಾಗಿ, ಸರ್ಕಾರದಿಂದ ದಿನಾಂಕ 09.02.2023 ರಂದು ನಿಗದಿಯಂತೆ ರಾತ್ರಿ 8.30 ಕ್ಕೆ ಭಾರತೀಯ ಮಜ್ದೂರ್ ಸಂಘ ಹಾಗೂ KSHCOEA ರಾಜ್ಯ ಸಮಿತಿಯು ನಿಯೋಗದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಒಪ್ಪಿದಂತೆ. ತಾವುಗಳು ಪ್ರಥಮ ಆದ್ಯತೆಯಾಗಿ 15% ವೇತನ ಹೆಚ್ಚಳವನ್ನು ವರದಿ ಆಧಾರದ ಮೇಲೆ ಆದೇಶ ನೀಡಿ ನಂತರ ಹಂತ ಹಂತವಾಗಿ ಸಮಾನ ವೇತನ ನೀಡುವುದಾಗಿ ಮತ್ತು ಎರಡನೆಯದಾಗಿ ಅಸ್ಸಾಂ ಮಾದರಿ ಅಥವಾ ತಮ್ಮ ವಿವೇಚನೆಯಲ್ಲಿ 60 ವರ್ಷದ ವರೆಗೆ ಸೇವಾ ಭದ್ರತೆ ನೀಡಲು ಸಹಮತ ಸೂಚಿಸಿ ಸ್ಪಷ್ಟ ಭರವಸೆ ನೀಡಿರುತ್ತೀರಿ. ನನ್ನ ಆಗ್ರಹಕ್ಕೆ ಮನ್ನಿಸಿ ಕರೊನಾ ಸಮಯದಲ್ಲಿ ಶ್ರಮಿಸಿದ ನೌಕರರ ದಶಕಗಳ ಸಮಸ್ಯೆಗಳಿಗೆ ಒಂದೊಂದಾಗಿ ದಿಟ್ಟ ನಿರ್ಧಾರ ಕೈಗೊಂಡು ಕಾರ್ಮಿಕ ವಲಯದಲ್ಲಿ ನ್ಯಾಯ ಒದಗಿಸುತ್ತಿರುವ ಸರಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 30,000 ಕ್ಕೂ ಹೆಚ್ಚು ವಿವಿಧ ವರ್ಗಿಯ ಹುದ್ದೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸರ್ಕಾರಿ ನೌಕರರಂತೆ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿರುವ, ಸದರಿ ನೌಕರರಿಗೆ ಮಾನ್ಯ ಆರೋಗ್ಯ ಸಚಿವರ ಹಾಗೂ ಇಲಾಖೆಗೆ ಬಾಕಿ ಇರುವ ಬೇಡಿಕೆಗಳ ಆದೇಶ ನಿಡುವಂತೆ ಮಾನ್ಯ ಶಾಸಕರು ಹಾಗೂ ಸಂಘದ (KSHCOEA) ಗೌರವಾಧ್ಯಕ್ಷರಾದ ರಾಜ್ಯಾಧ್ಯಕ್ಷರಾದ ಆಯನೂರು ಮಂಜುನಾಥ ಸರ್ಕಾರಕ್ಕೆ ಆಗ್ರಹಿಸಿದರು.

ಸಚಿವರು ಹಾಗೂ ಅಧಿಕಾರಿಗಳ ಮಟ್ಟದಲ್ಲಿ ವಿಮೆ, ವರ್ಗಾವಣೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಯ ಆದೇಶಗಳನ್ನು ಕೂಡಲೇ ಹೊರಡಿಸುವ ವಿಶ್ವಾಸದ ಮೇರೆಗೆ ತಾತ್ಕಾಲಕವಾಗಿ ಮುಷ್ಕರ ಹಿಂದಕ್ಕೆ ತೀರ್ಮಾನಿಸಲಾಗಿದೆ. KSHCOEA ಆಗ್ರಹಿಸುವ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಆದೇಶಗಳನ್ನು ಹೊರಡಿಸಲು 20.02.2023 ರವರೆಗೆ ಗಡುವು ನೀಡಿ ಸರಕಾರಕ್ಕೆ ಅಧಿಕೃತವಾಗಿ (ವಿವರವಾದ ಮಾಹಿತಿ ಲಗತ್ತಿಸಿದೆ) ತಿಳಿಸಲಾಗಿದೆ ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ.

ಸತತ 04 ವರ್ಷಗಳ ಶಿಸ್ತುಬದ್ಧ ಸಂಘಟನೆಯಿಂದ ಸತ್ಯ, ನಿರಂತರ ಛಲದಿಂದ ಹೋರಾಟ ಸಾದ್ಯ. KSHCOEA (ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ) ಸಂಘಟನೆಯ ತಾಳ್ಮೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾದ್ಯ. ಈಗಾಗಲೇ 6 ರಿಂದ 7 ಬೇಡಿಕೆಗಳ ಈಡೇರಿಕೆಗೆ ಸ್ಪಷ್ಟ ಭರವಸೆ ಇದ್ದು ಮತ್ತು ಹಲವು ಬೇಡಿಕೆಗಳು KSHCOEA ಸಂಘದಿಂದ ಈಡೇರಿಸಿಕೊಡಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೋಟರ್ ಐಡಿ ಕಳೆದು/ಹರಿದಿದ್ದರೆ ಹೊಸದಾಗಿ ಪಡೆಯುವುದು ಹೇಗೆ?

Wed Feb 15 , 2023
  ಬೆಂಗಳೂರು, ಫೆಬ್ರವರಿ 14: ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಗುರುತಿನ (Voter ID) ಚೀಟಿ ಕಳೆದು ಹೋಗಿದ್ದರೆ, ಅಥವಾ ತುಂಬಾ ಹಳೆಯದಾಗಿ ಬಳಸಲು ಯೋಗ್ಯವಾಗಿರದಿದ್ದಲ್ಲಿ ಹೊಸ ಚೀಟಿ ಪಡಯಲು ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2023ರ ಕಾರ್ಯ ಚಟುವಟಿಕೆಗಳು, ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಸೇರಿದಂತೆ ಅಗತ್ಯ ಎಲ್ಲ ಸಿದ್ಧತೆಗಳು ಒಂದೊಂದಾಗೆ ನಡೆಯುತ್ತಿವೆ. ಅದೇ ರೀತಿ ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) 243 ವಾರ್ಡ್‌ಗಳಲ್ಲಿ […]

Advertisement

Wordpress Social Share Plugin powered by Ultimatelysocial