ಆಸ್ಪತ್ರೆಗೆ ಹೋಗುವವರ ಗತಿ ಅದೋಗತಿ

ಕೊರೊನಾದಿಂದ ಜನರು ತತ್ತರಿಸಿಹೋಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಬಡವರ ಕರುಳನ್ನ ಕಿತ್ತು ತಿನ್ನುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ಸಂಪೂರ್ಣ ಲಂಚಾವತಾರದ ಕೇಂದ್ರವಾಗಿ ಪರಿಣಮಿಸಿದ್ದರೂ ಕೂಡ ಯಾರೂ ಈ ಬಗ್ಗೆ ಕ್ಯಾರೆ ಅನ್ನುತ್ತಿಲ್ಲ. ಹೆರಿಗೆ ಮಾಡಲು ಹಣ ಪಡೆಯಲಾಗುತ್ತಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ಅವರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಣ ಕೊಡದೆ ಇದ್ದರೆ ಹೆರಿಗೆ ಮಾಡದೆ ಬೇರೆ ಆಸ್ಪತ್ರೆಗಳಿಗೆ ರವಾನಿಸುವದು ಮತ್ತು ಉತ್ತಮ ಚಿಕಿತ್ಸೆಯ ಭರವಸೆ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಕಳಿಸುವ ಕಮೀಷನ್ ಧಂಧೆಯನ್ನು ಆಸ್ಪತ್ರೆ ಮಾಡತ್ತಿದೆ. ಒಟ್ಟಾರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ವೈದ್ಯಕೀಯ ಅಧಿಕಾರಿಗಳ ನಡುವೆಯೂ ಸಮನ್ವಯದ ಕೊರತೆ ಇದ್ದು, ಹುಚ್ಚನ ಮದುವೆಲಿ ಉಂಡೋಣೆ ಜಾಣ ಅನ್ನುವ ಹಾಗೆ ಹಲವು ವಿಭಾಗಗಳಲ್ಲಿನ ಸಿಬ್ಬಂದಿ ಬಡವರಿಂದ ಚಿಕಿತ್ಸೆಗಾಗಿ ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿಜಯ ಸೇನೆ ಅಧ್ಯಕ್ಷ ಚಿದಾನಂದ ಶೇಗುಣಸಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಲಂಚಪಡೆಯುತ್ತಿರುವದು ನಿಜಾವಿದ್ದು ತಾವು ಕೂಡ ಅನಿವಾರ್ಯವಾಗಿ ಹಣ ನೀಡಬೇಕಾಯಿತು.ಈ ಬಗ್ಗೆ ವಿಚಾರಿಸಿದರೆ ಮೇಲಾಧಿಕಾರಿಗಳು ಉಡಾಫೆಯ ಉತ್ತರ ಕೊಡುತ್ತಿದ್ದಾರೆ ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ,ಪ್ರತಿಭಟನೆ

Tue Jun 30 , 2020
ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ, ದೇವದುರ್ಗದಲ್ಲಿ ಪ್ರತಿಭಟನೆ ನಡೆಸಲಾಯ್ತು. ದೇವದುರ್ಗ ತಾಲೂಕಿನ ಜಾಲಹಳ್ಳಿ ಅಂಬೇಡ್ಕರ್ ಪ್ರತಿಮೆ ಬಳಿ ನರೇಂದ್ರ ಮೋದಿ ಅವರ ಪರಕೃತಿ ದಹನ ಸುಡುವ ಮೂಲಕ ಸಿಪಿಐಎಂನಿAದ ಪ್ರತಿಭಟನೆ ಮಾಡಲಾಯಿತು. ದೇಶದ ಜನತೆ ಕೊರೊನಾದಿಂದ ತತ್ತರಿಸಿ ಹೋಗಿದೆ, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರೋದು ಖಂಡನೀಯ ಎಂದು ತಾಲೂಕು ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದ್ದಾರೆ. ತಕ್ಷಣವೇ ಪೆಟ್ರೋಲ್ ಡೀಸೆಲ್ ಉತ್ಪನ್ನಗಳ ಮೇಲಿನ […]

Advertisement

Wordpress Social Share Plugin powered by Ultimatelysocial