ಇಂದು ಕ್ಯಾಪ್ಟನ್ ಕೊಹ್ಲಿ Vs ಕ್ಯಾಪ್ಟನ್ ಕೇನ್

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಅಬುಧಾಬಿ ಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಸೆಣಸಾಡಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈಗಾಗಲೆ ಪ್ಲೇ ಆಫ್ ಗೆ ಕಾಲಿಟ್ಟಿದ್ದು, ಅಂಕ ಪಟ್ಟಿಯಲ್ಲಿ ಎರಡನೆ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದೆ. ತಂಡದ ರನ್‌ ರೇಟ್‌ ಇನ್ನು ಮೈನಸ್‌ ನಲ್ಲಿರುವುದರಿಂದ ಅರ್.ಸಿ.ಬಿ ಗೆ ಇದು ಕಠಿಣ ಸವಾಲಾಗಿದೆ. ಆದರೆ ಪ್ಲೇ ಆಫ್ ಗೂ ಮುಂಚೆ ಇನ್ನುಳಿದ ಹೈದರಾಬಾದ್‌ ಹಾಗು ದೆಹಲಿ ವಿರುಧ್ದದ ಪಂದ್ಯಗಳಲ್ಲಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದರೆ ಇದು ಅಸಾಧ್ಯವೇನು ಅಲ್ಲ.

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಬಾರಿ ಎಷ್ಟೆ ಪ್ರಯತ್ನ ಪಟ್ಟರು ಅದೃಷ್ಟ ಕೈ ಹಿಡಿದಿಲ್ಲ. ಎಷ್ಟೆ ಆಟಗಾರರು, ನಾಯಕತ್ವ ಬದಲಿಸಿ ತಂತ್ರ ರೂಪಿಸಿದರು ಸೋಲನುಭವಿಸಿ 2021 ರ ಐ.ಪಿ.ಎಲ್‌ ಕೂಟದಿಂದ ಹೊರಗುಳಿದಿದೆ. ಹಾಗಾಗಿ ಬೆಂಗಳೂರು ವಿರುಧ್ದದ ಈ ಪಂದ್ಯ ಹೈದರಾಬಾದ್ ಪಾಲಿಗೆ ಕೇವಲ ಔಪಚಾರಿಕ ಪಂದ್ಯವಾಗಿದೆ. ಆದರೆ ಎಲಿಮಿನೇಟರ್‌ ಪಂದ್ಯವನ್ನ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗೊದಕ್ಕೆ ಆರ್‌ಸಿಬಿ ಪಾಲಿಗೆ ಇದು ಮಹತ್ವದ ಪಂದ್ಯವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಆರಂಭವಾಗುತ್ತಿದೆ ಪ್ರೊ ಕಬಡ್ಡಿ

Wed Oct 6 , 2021
ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿ ಡಿಸೆಂಬರ್ 22 ರಿಂದ ಮತ್ತೆ ಆರಂಭವಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲ ಆಟಗಳನ್ನ ಒಂದೆ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಎಲ್ಲಾ ಆಟಗಳು ಬೆಂಗಳೂರಿನ ಕಂಠಿರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕ್ರೀಡಾಕೂಟದ ಆಯೋಜಕರಾದ ಮಾಶಾಲ್ ಸ್ಪೋರ್ಟ್ಸ್ ತಿಳಿಸಿದೆ. ಆದರೆ ಕೊರೊನಾ ಅಲೆಯ ಭೀತಿ ಇದ್ದು, ಆಟಗಾರರು ಮತ್ತು ಎಲ್ಲಾ ಪಾಲುದಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗೃತಾ ಕ್ರಮವಾಗಿ, ಪಂದ್ಯಗಳು ಕ್ರೀಡಾಂಗಣದಲ್ಲಿ ಯಾವುದೇ […]

Advertisement

Wordpress Social Share Plugin powered by Ultimatelysocial