ಇಲ್ಲಿದೆ ಸುಖ ನಿದ್ರೆಗೆ ಸುಲಭ ಪ್ರಯೊಗ

ಮನೆಯಲ್ಲಿ ಎಸಿ ಇಲ್ಲ. ಫ್ಯಾನ್ ಗಾಳಿ ಸಾಕಾಗಲ್ಲ. ಹಾಗಾಗಿ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ ಎನ್ನುವವರು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕೆಲ ಪದಾರ್ಥಗಳ ಸೇವನೆಯಿಂದ ಬೇಸಿಗೆ ಝಳದಲ್ಲೂ ನೀವು ಆರಾಮವಾಗಿ ನಿದ್ರೆ ಮಾಡಬಹುದು.ಬೇಸಿಗೆಗೆ ಸೋರೆ ಕಾಯಿ ಹೇಳಿ ಮಾಡಿಸಿದ ತರಕಾರಿ.ಸೋರೆಕಾಯಿಯಲ್ಲಿ ನೀರಿನ ಅಂಶ ಜಾಸ್ತಿ ಇರುತ್ತದೆ. ಹಾಗೆ ಅದ್ರ ಸೇವನೆಯಿಂದ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ಆರೋಗ್ಯಕ್ಕೂ ಒಳ್ಳೆಯದು.ರಾತ್ರಿ ಸೌತೆಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದ್ರಲ್ಲಿ ಹೆಚ್ಚಿಗೆ ನೀರಿನಂಶ ಇರುವುದರಿಂದ ದೇಹ ಡಿಹೈಡ್ರೇಷನ್ ಆಗದಂತೆ ಇದು ತಡೆಯುತ್ತದೆ. ಜೊತೆಗೆ ದೇಹವನ್ನು ಕೂಲಾಗಿರಿಸುತ್ತದೆ. ಆದ್ರೆ ರಾತ್ರಿ ಹೆಚ್ಚು ಸೌತೆಕಾಯಿ ಸೇವನೆ ಮಾಡುವುದೂ ಒಳ್ಳೆಯದಲ್ಲ.ಕುಂಬಳಕಾಯಿ ತಿನ್ನುವುದರಿಂದಲೂ ಒಳ್ಳೆಯ ನಿದ್ರೆ ಬರುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕಡಿಮೆ ಮಸಾಲೆ ಹಾಕಿ ಮಾಡಿದ ಇದ್ರ ಪಲ್ಯ ರೊಟ್ಟಿಯ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಪಾಯಸದ ರೂಪದಲ್ಲಿಯೂ ಸೇವನೆ ಮಾಡಬಹುದು.ನಿದ್ರೆ ಸಮಸ್ಯೆ ಇರುವವರು ಹುರಿದ ಅಥವಾ ಬೇಯಿಸಿದ ಆಲೂಗಡ್ಡೆ ಸೇವನೆ ಮಾಡಬೇಕು. ಆಲೂಗಡ್ಡೆಯಲ್ಲಿ ಹೆಚ್ಚಿಗೆ ಕಾರ್ಬೋಹೈಡ್ರೇಟ್ ಇದ್ದು, ಅದು ನಿದ್ರೆ ಬರಲು ನೆರವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭೋಪಾಲ್ : ಲಂಚ ಕೊಡಲು ಹಣ ಇಲ್ಲದ್ದಕ್ಕೆ ಹೊಟ್ಟೆಯಲ್ಲಿಯೇ ಸತ್ತ ಮಗು!

Tue Feb 1 , 2022
ಭೋಪಾಲ್ : ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಆಗದಿರುವುದಕ್ಕೆ ಮಹಿಲೆಯಬ್ಬರು ಹೊಟ್ಟೆಯಲ್ಲಿ ಸಾವನ್ನಪ್ಪಿದ ಮಗುವಿಗೆ ಜನ್ಮ ನೀಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಈ ಘಟನೆ ಮಧ್ಯಪ್ರದೇಶದ ಭಿಂಡ್‌ ನ ಜಿಲ್ಲಾಸ್ಪತ್ರೆ ಹತ್ತಿರ ನಡೆದಿದೆ.ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿದೆ.ಭಿಂಡ್‌ ನ ರಾಜುಪುರ ಗ್ರಾಮದ ನಿವಾಸಿ ಆರು ತಿಂಗಳ ಗರ್ಭಿಣಿ ಕಲ್ಲೋ ಅವರು ತಡರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಪತಿ ಹಾಗೂ ಪತ್ತೆ ಅವರನ್ನು ಆಸ್ಪತ್ರೆಗೆ […]

Advertisement

Wordpress Social Share Plugin powered by Ultimatelysocial