ಇಲ್ಲಿನೋಡಿ ವಾಹನ ಸವಾರರಿಗೆ ಗುಡ್‌ ನ್ಯೂಸ್‌ :”ರಾಜ್ಯ ಸರ್ಕಾರದಿಂದ ಭ್ರಷ್ಠಾಚಾರ ತಡೆಗೆ ಬಿಗ್‌ ಬ್ರೇಕ್‌”: ಇನ್ಮುಂದೆ Online ಮೂಲಕವೇ LLR, DL

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ)ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸುವುದು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ವಾಹನ ಕಲಿಕಾ ಪರವಾನಿಗೆ(ಎಲ್‌ಎಲ್), ಚಾಲನಾ ಪರವಾನಿಗೆ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ    ಏನೇನು ಸೌಲಭ್ಯ ಒದಗಿಸುತ್ತದೆ ..?ಚಾಲನಾ ಪರವಾನಿಗೆ ನವೀಕರಣ, ಕಲಿಕಾ ಚಾಲನಾ ಪರವಾನಿಗೆ, ಚಾಲನಾ ಪರವಾನಿಗೆಯಲ್ಲಿನ ವಿಳಾಸ ಮತ್ತು ಹೆಸರಿನಲ್ಲಿದ್ದ ದೋಷಗಳನ್ನು ಬದಲಾವಣೆ, ನಕಲು ಚಾಲನಾ ಪರವಾನಿಗೆ ಮತ್ತು ಅಂತಾರಾಷ್ಟ್ರೀಯ ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಆನ್ಲೈನ್ ಮೂಲಕ ಒದಗಿಸಲು ತೀರ್ಮಾನಿರುವುದಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಮಾಹಿತಿ ನೀಡಿದ್ದಾರೆ.ಕೇಂದ್ರ ಹೆದ್ದಾರಿ ಪ್ರಕಾರ 2021ರ ಏಪ್ರಿಲ್ ತಿಂಗಳಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಆರ್‌ಟಿಒ ಕಚೇರಿಗಳಲ್ಲಿ ಲಭ್ಯವಾಗುತ್ತಿರುವ ಸೇವೆಗಳನ್ನು ಆಧಾರ್‌ಕಾರ್ಡ್ ಲಿಂಕ್‌ನ ಇ-ಕೆವೈಸಿ ಪ್ರಕ್ರಿಯೆಯೊಂದಿಗೆ ಆನ್ಲೈನ್ ಮೂಲಕ ಒದಗಿಸಬೇಕು ಎಂದು ಸೂಚನೆ ನಿಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಜ. 24ರಂದು ಅದಿಸೂಚನೆ ಪ್ರಕಟಿಸಿದೆ.   ಚಾಲನಾ ಪರವಾನಿಗೆ ಪಡೆಯುವ ಮುನ್ನ ಹಾಗೂ ವಾಹನಗಳ ಸಾಮರ್ಥ್ಯ ಪರೀಕ್ಷೆಗಾಗಿ(ಎಫ್‌ಸಿ) ಮಾತ್ರ ಭೌತಿಕವಾಗಿ ಸಾರಿಗೆ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ಇನ್ನುಳಿದ ಎಲ್ಲ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು ಎಂದು ಹೇಳಿದರು. ಅಲ್ಲದೆ, ಚಾಲನಾ ಪರವಾನಿಗೆ ನವೀಕರಣ ಹಾಗೂ ಪರವಾನಿಗೆಯಲ್ಲಿನ ಸಣ್ಣ ಬದಲಾವಣೆಗಳಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ. ಈವರೆಗೂ ಈ ಸೇವೆಗಳು ಭೌತಿಕವಾಗಿದ್ದರಿಂದ ವಿನಾ ಕಾರಣ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವಂತಾಗಿತ್ತು. ಜೊತೆಗೆ, ಅಧಿಕಾರಿಗಳು ವಿಳಂಬ ಮಾಡುವುದು ಹಣಕ್ಕಾಗಿ ಬೇಡಿಕೆ ಇಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಆನ್ಲೈನ್ ಸೇವೆ ಒದಗಿಸುತ್ತಿದ್ದೇವೆ.ಹೊಸ ವ್ಯವಸ್ಥೆ ಜಾರಿಗೆ ಸಾರಿಗೆ ಇಲಾಖೆಯ ಅನೇಕ ಅಧಿಕಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ, ಮುಖ್ಯಮಂತ್ರಿಗಳು ಹೆಚ್ಚು ಪ್ರೋತ್ಸಾಹ ನೀಡಿ ಭ್ರಷ್ಟಾಚಾರವಿಲ್ಲದೆ ಸೇವೆ ಒದಗಿಸುವಂತೆ ಸೂಚನೆ ನೀಡಿದ್ದರು ಎಂದು ಅವರು ಹೇಳಿದರು.ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ 23.5 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ಚಾಲನಾ ಪರವಾನಗಿ ನವೀಕರಣ, 2020-21ನೇ ಸಾಲಿನಲ್ಲಿ 17.7 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ನವೀಕರಣಕ್ಕಾಗಿ ಅರ್ಜಿಗಳು ಬಂದಿದ್ದವು. ಇಷ್ಟುಮಂದಿ ಕಚೇರಿಗೆ ಅಲೆದಾಡಿದ್ದರು. ಆದರೆ ಇದಕ್ಕೆ ಕೊನೆ ಹಾಡಲು ಮುಂಬರುವ ದಿನಗಳಲ್ಲಿ ಮನೆಯಲ್ಲೇ ಕುಳಿತು ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು..

ಚಾಲನ ಪರವಾನಿಗೆಯಲ್ಲಿನ ಅಕ್ರಮಗಳ ತಡೆಗೆ ಕ್ರಮ: ಆರ್‌ಟಿಒ ಕಚೇರಿಗಳಲ್ಲಿ ಒಂದೇ ದಿನದಲ್ಲಿ ನೂರಾರ ಜನರಿಗೆ ಚಾಲನಾ ಪರವಾನಿಗೆ ನೀಡಲಾಗುತ್ತಿದೆ. ಸರಿಯಾಗಿ ಚಾಲನೆ ಮಾಡದಿದ್ದರೂ ದೂರದಲ್ಲಿ ಕುಳಿತು ಹಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ ನೀಡುವ ಮುನ್ನ ನಡೆಯುವ ಪರೀಕ್ಷೆಗಳನ್ನು ಮತ್ತಷ್ಟು ಕಠಿಣ ಮಾಡಿ ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಂದ್ರಕುಮಾರ್ ಕಟಾರಿಯಾ ವಿವರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುದ್ದೀಕರಣವನ್ನು ಸಾಧಿಸಲು ಭಾರತೀಯ ರೈಲ್ವೇ ವೇಗವಾಗಿ ಚಲಿಸುತ್ತಿದೆ: ರಾಷ್ಟ್ರಪತಿ ಕೋವಿಂದ್

Mon Jan 31 , 2022
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 2021-22 ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ಮೊದಲು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, ಸರ್ಕಾರವು ಭಾರತೀಯ ರೈಲ್ವೇಯನ್ನು ತ್ವರಿತ ಗತಿಯಲ್ಲಿ ಆಧುನೀಕರಿಸುತ್ತಿದೆ ಎಂದು ಹೇಳಿದರು. ಕಳೆದ ಏಳು ವರ್ಷಗಳಲ್ಲಿ 24,000 ಕಿ.ಮೀ ರೈಲ್ವೆ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ. ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ […]

Advertisement

Wordpress Social Share Plugin powered by Ultimatelysocial