ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ಬಿಡುಗಡೆ

ನವದೆಹಲಿ : ಇಂದು ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ನ್ನು ಬಿಡುಗಡೆಗೊಳಿಸಿದರು.ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಗ್ರಾಮ ಪಂಚಾಯತ್ ಗಳ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದರು. ಇದೇ ವೇಳೆ, ಗ್ರಾಮಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿದ್ದಪಡಿಸಿರುವ ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ಹಾಗೂ ಸ್ವಮಿತ್ವ ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮರ್ ಸಾಥ್ ನೀಡಿದರು.

 

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಮಧ್ಯೆಯೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿ

Fri Apr 24 , 2020
ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಮಧ್ಯೆಯೂ ೧.೭೬ ಲಕ್ಷ ಕೂಲಿ ಕಾರ್ಮಿಕರು ನರೇಗಾ ಮತ್ತಿತರ ಯೋಜನೆಯಡಿ ಕೆಲಸ ಮಾಡಿದ್ದರಿಂದ ಕಾರ್ಮಿಕರ ಖಾತೆಗೆ ಪಾವತಿಸಬೇಕಾದ ಹಣವನ್ನು ಇನ್ನೂ ೧೫ ದಿನಗಳಲ್ಲಿ ಬ್ಯಾಂಕ್ ಮೂಲಕವೇ ಪಾವತಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೂಲಿಗಾಗಿ ರೂ.೧೦೩೯ ಕೋಟಿ ಮತ್ತು ಸಾಮಾಗ್ರಿಗಳಿಗಾಗಿ ರೂ. ೮೨೧ ಕೋಟಿ ಸೇರಿ ಒಟ್ಟು ೧೮೬೧ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. […]

Advertisement

Wordpress Social Share Plugin powered by Ultimatelysocial