ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..:ಅಖ್ತರ್ ಹೇಳಿಕೆ.

ಮುಂಬೈ: ಸದಾ ಒಂದಲ್ಲ ಒಂದು ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇದೀಗ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಬ್ಯಾಟರ್ ಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಐಸಿಸಿಯ ಇತ್ತೀಚಿನ ನಿಯಮಗಳ ವಿರುದ್ಧ ಅಖ್ತರ್ ಕಿಡಿಕಾರಿದ್ದಾರೆ.ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಜೊತೆ ವಿಡಿಯೋ ಚಾಟ್ ನಲ್ಲಿ ಮಾತನಾಡಿದ ಅಖ್ತರ್ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಡುತ್ತಿದ್ದರೆ ಅವರು ಒಂದು ಲಕ್ಷ ರನ್ ಗಳಿಸುತ್ತಿದ್ದರು ಎಂದು ಅಖ್ತರ್ ಹೇಳಿದ್ದಾರೆ.”ಈಗ ಎರಡು ಹೊಸ ಚೆಂಡುಗಳನ್ನು ನೀಡಲಾಗುತ್ತಿದೆ. ನಿಯಮಗಳನ್ನು ಕಠಿಣ ಮಾಡಲಾಗುತ್ತದೆ. ಈಗಿನ ನಿಯಮಗಳು ಬ್ಯಾಟರ್ ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ಈಗ ಬ್ಯಾಟರ್ ಗೆ ಮೂರು ರಿವೀವ್ ಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಸಚಿನ್ ತೆಂಡೂಲ್ಕರ್ ಆಡುವ ಸಮಯದಲ್ಲಿ ಮೂರು ರಿವೀವ್ ಅವಕಾಶವಿದ್ದರೆ ಅವರು ಒಂದು ಲಕ್ಷ ರನ್ ಗಳಿಸುತ್ತಿದ್ದರು” ಎಂದು ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.”ಸಚಿನ್ ಆರಂಭದಲ್ಲಿ ವಾಸಿಮ್ ಅಕ್ರಮ್, ವಾಖರ್ ಯೂನಸ್, ಶೇನ್ ವಾರ್ನೆ, ಬ್ರೆಟ್ ಲೀ, ಶೋಯೆಬ್ ಅಖ್ತರ್, ಮತ್ತು ನಂತರದ ಪೀಳಿಗೆಯ ಬೌಲರ್ ಗಳನ್ನು ಅವರು ಎದುರಿಸಿದರು. ಹೀಗಾಗಿ ಸಚಿನ್ ಒಬ್ಬ ಕಠಿಣ ಬ್ಯಾಟ್ಸಮನ್ ಎಂದು ನಾನು ಕರೆಯುತ್ತೇನೆ” ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಬೆಂಗಳೂರಿನಲ್ಲಿ ಇಂದು ಒಂದೇ ದಿನ 15,199 ಜನರಿಗೆ ಕೊವಿಡ್-19 ಸೋಂಕು,50 ಮಂದಿ ಸಾವು;

Sat Jan 29 , 2022
ಬೆಂಗಳೂರಿನಲ್ಲಿ ಇಂದು ಒಂದೇ ದಿನ 15,199 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 16,81,674 ಕ್ಕೆ ಏರಿಕೆಯಾಗಿದೆ. 16,81,674 ಸೋಂಕಿತರ ಪೈಕಿ 15,04,941 ಜನರು ಗುಣಮುಖರಾಗಿದ್ದಾರೆ. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು  ಹೊಸದಾಗಿ 31,198 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 33,96,093 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. […]

Advertisement

Wordpress Social Share Plugin powered by Ultimatelysocial