ಎನ್‌ಐಟಿ ಪ್ರವೇಶ ನಿಯಮ ಸಡಿಲಿಕೆ- ರಮೇಶ್ ಪೊಖ್ರಿಯಾಲ್ ಹೇಳಿಕೆ

ಈ ವರ್ಷ ಜೆಇಇ ಮೈನ್ಸ್ ಪರೀಕ್ಷೆಯ ಮೂಲಕ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೇಂದ್ರದ ಅನುದಾನ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜೆಇಇಯಲ್ಲಿ ಉತ್ತಮ ಸಾಧನೆ ಮಾಡಿದರೂ ೧೨ನೇ ತರಗತಿಯಲ್ಲಿ ಶೇ. ೭೫ರಷ್ಟು ಅಂಕ ಪಡೆದಿರಬೇಕೆಂಬ ನಿಯಮವನ್ನು ಈ ವರ್ಷ ಕೈಬಿಡುವುದಾಗಿ ತಿಳಿಸಿದೆ.

ಕೋವಿಡ್ ೧೯ ಕಾರಣ ಸೆಂಟ್ರಲ್ ಸೀಟ್ ಅಲೋಕೇಶನ್ ಮಂಡಳಿ ಈ ತೀರ್ಮಾನ ಕೈಗೊಂಡಿದೆ. ಎನ್‌ಐಟಿ, ಸಿಎಫ್ಟಿಐಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ೧೨ನೇ ತರಗತಿ ಉತ್ತೀರ್ಣರಾದರೆ ಸಾಕು ಎಂದು ಎಚ್‌ಆರ್‌ಡಿ ಸಚಿವ ರಮೇಶ್ ಪೊಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗಾಳಿಯ ರಭಸಕ್ಕೆ ಮುಗುಚಿ ಬಿದ್ದ ದೋಣಿ

Fri Jul 24 , 2020
ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರರ ದೋಣಿ ಮುಗುಚಿ ಬಿದ್ದಿದ್ದು ಮೀನುಗಾರರೆಲ್ಲರು ಈಜಿ ದಡ ಸೇರಿದ್ದಾರೆ ಅದೃಷ್ಟವಶಾತ್ ಯಾವುದೇ ರೀತಿಯ ಸಾವು ನೋವ್ವುಗಳು ಸಂಭವಿಸಿಲ್ಲ. ಗಾಳಿಯ ರಭಸಕ್ಕೆ ದೋಣಿ ಮುಗುಚಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲುವಿನಲ್ಲಿ ಮೀನುಗಾರರಾದ ಸುಧಾಕರ್, ತಾರಾನಾಥ್, ಹೇಮನಾಥ್ ಮತ್ತಿತರರು ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದರು. ಆದರೆ, ಸಮುದ್ರ ಮಧ್ಯೆ ಹವಾಮಾನ ವೈಪರಿತ್ಯದ ಕಾರಣದಿಂದ ದೋಣಿಯು ಮಗುಚಿ ಬಿದ್ದಿದೆ. ಇದರಲ್ಲಿದ್ದ ಮೂರು ಮಂದಿ […]

Advertisement

Wordpress Social Share Plugin powered by Ultimatelysocial