ಏಷ್ಯಾದ ದೇಶಗಳ ಸ್ಥಿತಿಗತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುö್ಯಎಚ್‌ಒ) ಅಭಿಪ್ರಾಯಪಟ್ಟಿದೆ. ಆರು ತಿಂಗಳ ಹಿಂದೆ ಡಬ್ಲುö್ಯಎಚ್‌ಒ ಕೊರೊನಾ ವೈರಸ್ ಸಾಂಕ್ರಮಿಕವನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಂದಿನಿAದ ಇಂದಿನವರೆಗೆ ವಿಶ್ವದಲ್ಲಿ 6.80 ಲಕ್ಷ ಜನರು ಮೃತಪಟ್ಟಿದ್ದು, 17.5 ಮಿಲಿಯನ್ ಜನರಿಗೆ ಸೋಂಕು ತಗುಲಿದೆ. ವಿಶ್ವದ ಹೆಚ್ಚಿನ ದೇಶಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು, ವಿಶೇಷವಾಗಿ ಏಷ್ಯಾದ ದೇಶಗಳ ಸ್ಥಿತಿಗತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ದೇಶಗಳು ಭಾರಿ ಜನಸಂಖ್ಯೆ ಮತ್ತು ಅಸಮರ್ಪಕ ಆರೋಗ್ಯ ವ್ಯವಸ್ಥೆ ಹೊಂದಿವೆ ಮತ್ತು ಕಠಿಣ ನಿರ್ಬಂಧಗಳ ಹೊರತಾಗಿಯೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಡಬ್ಲುö್ಚ್‌ಒ ವೆಬ್‌ಸೈಟ್ ವರದಿ ಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ಕೇಂದ್ರದ 1500 ಗುತ್ತಿಗೆ ಕಾರ್ಮಿಕರು ವಜಾ

Mon Aug 3 , 2020
ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ ಎಂಬ ನೆಪದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸುಮಾರು 1500 ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗಿದೆ. ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರೂ ಸೇರಿದಂತೆ ಹಲವರು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. 30 ಹೆಚ್ಚು ಹಳ್ಳಿಗಳ ಕಾರ್ಮಿಕರು, ವ್ಯಾಪಾರಿಗಳು ಈ ಕಾರ್ಖಾನೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ ರಾಜ್ಯಸರ್ಕಾರವು ಇಲ್ಲಿ ವಿದ್ಯುತ್‌ ಖರೀದಿ ನಿಲ್ಲಿಸಿ, ಖಾಸಗಿಯವರಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ರಾಯಚೂರು ಶಾಖೊತ್ಪನ್ನ ವಿದ್ಯುತ್ […]

Advertisement

Wordpress Social Share Plugin powered by Ultimatelysocial