ಐಎಂಡಿಬಿ ರೇಟಿಂಗ್‌ನಲ್ಲಿ ದಿಲ್ ಬೇಚಾರ ದಾಖಲೆ

ಸುಶಾಂತ್  ಸಿಂಗ್ ನಟನೆಯ ದಿಲ್ ಬೇಚಾರ ಸಿನಿಮಾ ಐಎಂಡಿಬಿ ರೇಟಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ  ದಿಲ್ ಬೇಚಾರ ಚಿತ್ರಕ್ಕೆ 8.9 ಅಂಕಗಳನ್ನು ನೀಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಸಿನಿಮಾ ಇದಾಗಿದ್ದು, ಜುಲೈ 24ರಂದು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೆ ಅಲ್ಲದೆ ಸಿನಿಮಾ ಆಸಕ್ತರಿಂದ ಹೆಚ್ಚಿನ ಮೆಚ್ಚುಗೆಗೆ  ಪಾತ್ರವಾಗಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕಮಲ್ ಹಾಸನ್ ಅಭಿನಯದ 2003ರಲ್ಲಿ  ತೆರೆಗೆ  ಬಂದಿದ್ದ  ‘ಅನ್ಬೆ ಶಿವಮ್’  ಚಿತ್ರದ ರೇಟಿಂಗ್ ಅನ್ನು ಕೂಡ ದಿಲ್ ಬೇಚಾರ ಚಿತ್ರ  ಹಿಂದಿಕ್ಕಿದೆ.  ಸುಂದರ್  ಸಿ  ನಿರ್ದೇಶನದ,  ಕಮಲ್ ಹಾಸನ್ ಮತ್ತು ಮಾಧವನ್ ನಟಿಸಿದ್ದ ಅನ್ಬೆ ಶಿವಮ್  ಈವೆರೆಗೂ  8.5 ಅಂಕಗಳೊಂದಿಗೆ  ಮೊದಲ ಸ್ಥಾನದಲ್ಲಿತ್ತು. ಆದರೆ ಆ ಚಿತ್ರವನ್ನು ಹಿಂದಿಕ್ಕಿ ದಿಲ್ ಬೇಚಾರ ಚಿತ್ರ ಮೊದಲ ಸ್ಥಾನದಲ್ಲಿದೆ.

Please follow and like us:

Leave a Reply

Your email address will not be published. Required fields are marked *

Next Post

ನಟ ವಿಶಾಲ್, ತಂದೆಗೆ ಕೊರೊನಾ ಪಾಸಿಟಿವ್

Sun Jul 26 , 2020
ದಿನದಿಂದ ದಿನಕ್ಕೆ ಚನೈನಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಕಾಲಿವುಡ್ ಸ್ಟಾರ್  ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ ರೆಡ್ಡಿ ಅವರಿಗೆ ಸಹ  ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ನಟ ವಿಶಾಲ್, ಅಪ್ಪನಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿದ್ದು, ಅವರೊಂದಿಗೆ ಇದ್ದ ನನಗೂ ಜ್ವರ, ನೆಗಡಿ ಕೆಮ್ಮು ಶುರುವಾಗಿದೆ. ಇದೇ ರೀತಿ ನನ್ನ ಮ್ಯಾನೇಜರ್ ಗೂ […]

Advertisement

Wordpress Social Share Plugin powered by Ultimatelysocial