ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ

ಕೋವಿಡ್-೧೯ ಸೋಂಕು ಕಾರಣದಿಂದ ಸ್ಥಬ್ಧವಾಗಿದ್ದ ಕ್ರಿಕೆಟ್ ಎಚ್ಚೆತ್ತಿದೆ. ಆದರೆ ವಿಶ್ವ ಕ್ರಿಕೆಟ್ ಕಾತರದಿಂದ ಕಾಯುತ್ತಿದ್ದ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಇಂಗ್ಲೆAಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೇವಲ ೧೭.೪ ಓವರ್ ಗೆ ಸೀಮಿತವಾಯಿತು. ಸೌಥಂಪ್ಟನ್ ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲೇ ಮಳೆ ಆರಂಭವಾಗಿತ್ತು. ಸ್ವಲ್ಪ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆAಡ್ ಮೊದಲು ಬ್ಯಾಟಿಂಗ್ ನಡೆಸಲು ತೀರ್ಮಾನಿಸಿತು. ಪರ್ಯಾಯ ನಾಯಕ ಬೆನ್ ಸ್ಟೋಕ್ಸ್ ರ ಬ್ಯಾಟಿಂಗ್ ಮಾಡುವ ತೀರ್ಮಾನಕ್ಕೆ ಮೊದಲ ಶಾಕ್ ನೀಡಿದ್ದು ವಿಂಡೀಸ್ ಬೌಲರ್ ಶೆನಾನ್ ಗ್ಯಾಬ್ರಿಯಲ್. ಪಂದ್ಯದ ಎರಡನೇ ಓವರ್ ನಲ್ಲೇ ಡೊಮಿನಿಕ್ ಸಿಬ್ಲೆ ಅವರನ್ನು ಬೌಲ್ಡ್ ಮಾಡಿದರು. ಆದರೆ ೧೭.೪ ಓವರ್ ಮುಗಿಯುತ್ತಿದ್ದಂತೆ ಮತ್ತೆ ಬಂದ ಮಳೆಯಿಂದ ಪಂದ್ಯಕ್ಕೆ ತಡೆಯಾಯಿತು. ರೋರಿ ಬರ್ನ್ಸ್ ೨೦ ರನ್, ಜೋ ಡೆನ್ಲಿ ೧೪ ರನ್ ಗಳಿಸಿ ಆಡುತ್ತಿದ್ದಾರೆ. ಇಂಗ್ಲೆAಡ್ ಒಂದು ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-೧೯ ಆತಂಕದಿAದ ನಟ ದೊಡ್ಡಣ್ಣ ಹೋಮ್ ಕ್ವಾರಂಟೈನ್

Thu Jul 9 , 2020
ಕೋವಿಡ್ ೧೯ ಸೋಂಕಿನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಈ ಭಯ ಸ್ಯಾಂಡಲ್‌ವುಡ್ ಮಂದಿಯನ್ನೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೇ ಸಂಸದೆ ಸುಮಲತಾ ಅವರಿಗೆ ಕೋವಿಡ್ ೧೯ ಪಾಸಿಟಿವ್ ಬಂದಿದ್ದು, ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಕೂಡ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣನಿಗೂ ಕೋವಿಡ್ ೧೯ ಆತಂಕ ಶುರುವಾಗಿದೆ. ಹೌದು..! ದೊಡ್ಡಣ್ಣ […]

Advertisement

Wordpress Social Share Plugin powered by Ultimatelysocial