ಐಸಿಸಿ ಹುದ್ದೆ ಪೂರೈಸಿದ ಶಶಾಂಕ್ ಮನೋಹರ್

ಭಾರತದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಎರಡು ವರ್ಷಗಳ ಎರಡು ಅವಧಿಗಳಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದ್ದರು. ಆದರೆ ಇದರ ಕಾರ್ಯಾವಧಿ ಮುಗಿಯಿತು. ನೂತನ ಅಧ್ಯಕ್ಷರು ಚುನಾಯಿತರಾಗುವ ತನಕ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಅವರೇ ಉಸ್ತುವಾರಿ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಐಸಿಸಿ ನಿಯಮದಂತೆ ಎರಡು ವರ್ಷಗಳ ೩ ಅವಧಿಗಳ ತನಕ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ಸಿದ್ಧತೆ ಆರಂಭಗೊAಡಿರುವ ಕಾರಣ ಶಶಾಂಕ್ ಮನೋಹರ್ ಮುಂದುವರಿಯುವ ಯಾವುದೇ ಸಾಧ್ಯತೆ ಇಲ್ಲ. ಮುಂದಿನ ವಾರ ಐಸಿಸಿ ಮಂಡಳಿ ಚುನಾವಣೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಹೆಸರು ಕೂಡ ಕೇಳಿಬರುತ್ತಿದೆ. ಐಸಿಸಿ ಹಾಗೂ ಇಡೀ ಕ್ರಿಕೆಟ್ ಕುಟುಂಬದ ಪರವಾಗಿ ಶಶಾಂಕ್ ಮನೋಹರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಜಿವಿಕೆ ಗ್ರೂಪ್ ವಿರುದ್ಧ ಸಿಬಿಐ ಪ್ರಕರಣ ದಾಖಲು

Thu Jul 2 , 2020
ವಿಮಾನನಿಲ್ದಾಣ ಉನ್ನತೀಕರಣ, ನಿರ್ವಹಣೆ ಕುರಿತು ನಡೆದ  705 ಕೋಟಿ ಅವ್ಯವಹಾರ ಸಂಬಂಧ ಜಿವಿಕೆ ಗ್ರೂಪ್‍ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಉನ್ನತೀಕರಣ ಮತ್ತು ಮೇಲ್ವಿಚಾರಣೆ ಸಂಬಂಧ ಜಿವಿಕೆ ಗ್ರೂಪ್‍ ಭಾಗವಾಗಿರುವ ಜಿವಿ‌ಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್‍ ಜೊತೆಗೆ ಜಂಟಿ ಉದ್ಯಮ ಸ್ಥಾಪಿಸಿತ್ತು. ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಪುತ್ರ ಜಿ.ವಿ.ಸಂಜಯ್ ರೆಡ್ಡಿ ಮುಂಬೈ […]

Advertisement

Wordpress Social Share Plugin powered by Ultimatelysocial