ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆ ಇಲ್ಲ-ಸಚಿವ ಡಾ.ಕೆ. ಸುಧಾಕರ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ತಂದಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳಲ್ಲಿ ಶೇ ೯೦ಕ್ಕೂ ಹೆಚ್ಚು ಮಂದಿಯಲ್ಲಿ ರೋಗದ ಲಕ್ಷಣಗಳೇ ಕಾಣಿಸುತ್ತಿಲ್ಲ. ಆದರೆ ತೀವ್ರತರವಾದ ದುಷ್ಪರಿಣಾಮ ಬೀರದೇ ಇರುವುದೇ ಸದ್ಯಕ್ಕೆ ಸಮಾಧಾನಕರವಾದ ವಿಚಾರವಾಗಿದೆ. ಹಿರಿಯರನ್ನು ಈ ಸಮಯದಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ರಾಜ್ಯ ರ‍್ಕಾರದಿಂದ ಕೆಲವು ಹೊಸ ಮರ‍್ಗಸೂಚಿಗಳನ್ನು ಕೊಡುತ್ತಿದ್ದೇವೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕೊವಿಡ್ ಕೇರ್ ಸೆಂಟರ್‌ನ್ನು ತೆರೆಯಲಾಗುತ್ತಿದೆ. ಭಾರತ ಶಾಂತಿಯನ್ನು ಬಯಸುವ ದೇಶ. ನಾವಾಗಿ ಬೇರೆಯವರ ಮೇಲೆ ಹೋಗಿದ್ದು ಇತಿಹಾಸದಲ್ಲಿಲ್ಲ. ನಮ್ಮ ಗಡಿಭಾಗದಲ್ಲಿ ಭೂ ಆಕ್ರಮಣ ಮಾಡಿರುವುದು ಖಂಡನೀಯ. ಪ್ರಧಾನಿ ಮೋದಿ ದಿಟ್ಟ ನಾಯಕ. ಅವರು ಸ್ಪಷ್ಟ ಸಂದೇಶ ಕಳಿಸಿದ್ದಾರೆ. ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆ ಇಲ್ಲ. ಹುತಾತ್ಮರ ಕುಟುಂಬಗಳಿಗೆ ಭಗವಂತ ನೈತಿಕ ಸ್ಥೆöರ‍್ಯ ನೀಡಲಿ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಪತಿ ನೇಮಕ

Sat Jun 20 , 2020
ಹಾಲಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಜೂನ್ ೧೯ರಂದು ನಿವೃತ್ತಿಯಾಗುತ್ತಿದ್ದು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ಓಂಕಾರ ಕಾಕಡೆ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜುಬಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ಈ ನೇಮಕ ಮಾಡಲಾಗಿದೆ. ಇವರ ಅಧಿಕಾರ ಅವಧಿ ೨೦-೬-೨೦೨೦ರಿಂದ ೧೩-೧೨-೨೦೨೦ರವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನೂ ರಾಜ್ಯಪಾಲರ […]

Advertisement

Wordpress Social Share Plugin powered by Ultimatelysocial