ಒಂದೇ ವರ್ಷದಲ್ಲಿ ದೇಹದ ಹೆಚ್ಚುವರಿ ತೂಕ ಇಳಿಸಿಕೊಂಡು ಸ್ಲಿಮ್ ಆದ ಪೊಲೀಸರು

 ಕೆಎಸ್‌ಆರ್‌ಪಿ (KSRP) ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಪೊಲೀಸರಿಗೆ ತೂಕ ಇಳಿಸಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಈಗ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆಯ ಎರಡು ಸಾವಿರ ಪೊಲೀಸರು (Police) ತೂಕ ಇಳಿಸಿಕೊಂಡು ತೆಳ್ಳಗೆ ಆಗಿದ್ದಾರೆ.

ಸುಮಾರು 200 ಮಂದಿ ಪೊಲೀಸರು ವ್ಯಸನ ಮುಕ್ತರಾಗಿದ್ದಾರೆ. ಕೆಎಸ್‌ಆರ್‌ಪಿ ಕಾರ್ಯ ಭಾರ ಹೊತ್ತ ಕೂಡಲೇ ಅಲೋಕ್‌ ಕುಮಾರ್‌ ಅವರು, ಪೊಲೀಸರ ಆರೋಗ್ಯದ (Health) ವಿಚಾರವಾಗಿ ಕಾಳಜಿ ವಹಿಸಿದ್ದರು. ಪ್ರತಿ ವರ್ಷ ಹಲವು ಕಾಯಿಲೆಗಳಿಗೆ (Disease) ತುತ್ತಾಗಿ ಹೆಚ್ಚಿನ ಪೊಲೀಸರು ಸಾವಿಗೀಡಾಗುತ್ತಿದ್ದರು. ಹೀಗಾಗಿ ಪೊಲೀಸರಿಗೆ ತೂಕ ಇಳಿಸಿಕೊಳ್ಳಲು ಖಡಕ್ ಸೂಚನೆ ನೀಡಿದ್ದರು. ಕೆಎಸ್‌ಆರ್‌ಪಿ ಪೊಲೀಸರ ಫಿಟ್ನೆಸ್‌ (Fitness) ಗೆ ಪ್ರಾಮುಖ್ಯತೆ ನೀಡಲಾಗಿತ್ತು.

ಒಂದು ವರ್ಷದಲ್ಲಿ ತೂಕ ಇಳಿಸಿಕೊಂಡ ಪೊಲೀಸರು

ಕೆಎಸ್‌ಆರ್‌ಪಿ ಪೊಲೀಸರಿಗೆ ತೂಕ ಇಳಿಸಿಕೊಂಡು ಸ್ಲಿಮ್ ಆಗಲು ಗಡುವು ನೀಡಲಾಗಿತ್ತು. ಒಂದು ವರ್ಷದ ಬಳಿಕ ಅದ್ಭುತ ಫಲಿತಾಂಶ ಸಿಕ್ಕಿದೆ. ಹೆಚ್ಚು ತೂಕ ಹೊಂದಿ, ಓಡಲು ಆಗದೇ ಇರುತ್ತಿದ್ದ, ಕಾಯಿಲೆಗಳಿಗೆ ತುತ್ತಾಗುತ್ತಿದ್ದ ಪೊಲೀಸರು ಈಗ ಸ್ಲಿಮ್ ಆಗಿದ್ದಾರೆ. ಈಗ ಫಿಟ್‌ ಆಗಿರುವ ಎರಡು ಸಾವಿರ ಪೊಲೀಸರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈಗ ಕೆಎಸ್‌ಆರ್‌ಪಿ ಪೊಲೀಸರ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನು ಕೆಲವು ಪೊಲೀಸರು, ರಾಜ್ಯದ ವಿವಿಧ ವ್ಯಸನ ಮುಕ್ತ ಕೇಂದ್ರದಲ್ಲಿ ವೇತನಸಹಿತ ರಜೆ ಪಡೆದು ಮೂರು ತಿಂಗಳು ಚಿಕಿತ್ಸೆ ಪಡೆದುಕೊಂಡು, 200 ಪೊಲೀಸರು ವ್ಯಸನ ಮುಕ್ತರಾಗಿದ್ದಾರೆ. ಇನ್ನು 57 ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಸಾವಿನ ಪ್ರಮಾಣದಲ್ಲಿ ಇಳಿಕೆ

ಅಧಿಕಾರಿಗಳ ಪ್ರಕಾರ, ಕೊರೊನಾ ಸಮಯದಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ ಕೆಎಸ್‌ಆರ್‌ಪಿ ಪೊಲೀಸರ ಸಾವಿನ ಪ್ರಮಾಣ 2020ಕ್ಕಿಂತ 2021ರಲ್ಲಿ ತುಂಬಾ ಕಡಿಮೆ ಆಗಿದೆ ಎಂದಿದ್ದಾರೆ. 14 ಸಾವಿರ ಮಂದಿ ಪೊಲೀಸರು, ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ತೂಕ ಇಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿತ್ತು. 2020ರಲ್ಲಿ ವಿವಿಧ ಕಾಯಿಲೆಗೆ ತುತ್ತಾಗಿ 50 ಪೊಲೀಸರು ಮೃತಪಟ್ಟಿದ್ದರು. ಆದ್ದರಿಂದ ತೂಕ ಇಳಿಕೆಗೆ ಗಡುವು ನೀಡಿ, ಸೂಚನೆ ನೀಡಲಾಗಿತ್ತು.

ಗಂಭೀರ ಕಾಯಿಲೆಗಳಿಗೆ ತುತ್ತಾದ ಸಿಬ್ಬಂದಿ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಕರ್ತವ್ಯ ನಿಯೋಜನೆಯಲ್ಲಿ ರಿಯಾಯಿತಿ ನೀಡಿ, ಮದ್ಯ ಸೇವನೆ, ಧೂಮಪಾನ, ತಂಬಾಕು ಸೇವನೆ ಮಾಡದಂತೆ ನಿಷೇಧ ಹೇರಲಾಗಿತ್ತು. ದೇಹದ ಆರೋಗ್ಯ ಮತ್ತು ತೂಕ ಇಳಿಸಿಕೊಂಡರೆ ಮಾತ್ರ ಮುಂಬಡ್ತಿ ಎಂದು ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ

KSRP ಪೊಲೀಸರ ಪ್ರತಿ ಸಿಬ್ಬಂದಿಯ ವೈದ್ಯಕೀಯ ವೆಚ್ಚವನ್ನು ಇಲಾಖೆ ಭರಿಸುತ್ತದೆ. ಪ್ರತಿ ವರ್ಷ ಆರೋಗ್ಯ ತಪಾಸಣೆ, ತೊಂದರೆಗೆ ಸಿಲುಕಿದವರಿಗೆ ಅಗತ್ಯ ಸಹಕಾರ ಮತ್ತು ಸ್ಪಂದನೆ ನೀಡಲಾಗುತ್ತಿದೆ. ಕಠಿಣ ನಿಯಮಗಳ ಜಾರಿ ಮಾಡುವ ಮೂಲಕ ಪೊಲೀಸರ ಆರೋಗ್ಯದ ಕಡೆ ಗಮನ ನೀಡಲಾಗುತ್ತಿದೆ.

ಒಟ್ಟಿನಲ್ಲಿ ಕೆಎಸ್‌ಆರ್‌ಪಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಪೊಲೀಸರಿಗೆ ತೂಕ ಇಳಿಸಿಕೊಳ್ಳಲು ಸೂಚನೆ ನೀಡಿದ್ದರ ಹಾಗೂ ಕಠಿಣ ಕ್ರಮಗಳ ಜಾರಿ ಮಾಡಿದ್ದರ ಫಲವಾಗಿ ಇಂದು ಪೊಲೀಸರು ದಢೂತಿ ದೇಹ ಮಾಯವಾಗಿದ್ದು, ಸ್ಲಿಮ್ ಆಗಿ ಫಿಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಿಗಳಿಂದ ಸರ್ಕಾರಕ್ಕೆ 500 ಕೋಟಿ ನಷ್ಟ

Tue Mar 1 , 2022
      ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಂದಾಯ ವಿಭಾಗದ ಅಧಿಕಾರಿಗಳು ಹಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ ಗಳಿಂದ ತೆರಿಗೆ ಸಂಗ್ರಹಿಸದೆ, ಕಾಮಗಾರಿ ನಡೆಸದೆ ಬಿಲ್ಲುಗಳನ್ನು ಮಂಜೂರು ಸೇರಿ ಹಲವು ಮಾರ್ಗಗಳ ಮೂಲಕ ಸರ್ಕಾರಕ್ಕೆ ಬರೋಬರಿ 500 ಕೋಟಿ ರೂ.ನಷ್ಟ ಉಂಟು ಮಾಡಿರುವುದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳ ದಾಳಿಯಲ್ಲಿ ಬಯಲಾಗಿದೆ. ಅಲ್ಲದೆ, ನಕಲಿ ದಾಖಲೆಗಳ ಮೂಲಕ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ(ಟಿಡಿಆರ್‌)ನ್ನು ವಿತರಣೆ ಮಾಡಿರುವುದು […]

Advertisement

Wordpress Social Share Plugin powered by Ultimatelysocial