ಒನ್ ಡೌನ್ ನಲ್ಲಿ ಆಡ್ತಾರ ಬೂಮ್ರಾ…!?

ಭಾರತದ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ತಮ್ಮ ನೆಚ್ಚಿನ ಇಲೆವೆನ್​ ತಂಡವನ್ನು ಆಯ್ಕೆ ಮಾಡಿದ್ದು, ಅದರಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾರನ್ನು ಕೈಬಿಟ್ಟು ವೇಗಿ ಜಸ್ಪ್ರೀತ್​ ಬುಮ್ರಾರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 4 ಶತಕ ಸಿಡಿಸಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್​ ಆಗಿರುವ ರೋಹಿತ್​ ಶರ್ಮಾ ಹಾಗೂ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿರುವ ಕೊಹ್ಲಿಗೆ ಅವಕಾಶ ನೀಡದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಒಂದು ದೇಶದಿಂದ ಒಬ್ಬ ಆಟಗಾರನನ್ನು ಆಯ್ಕೆ ಮಾಡಬೇಕು ಎಂದಿದ್ದರಿಂದ ಆಕಾಶ್​ ವೇಗಿ ಬುಮ್ರಾರಿಗೆ ಮಣೆ ಹಾಕಿದ್ದಾರೆ. ಆಕಾಶ್​ ಚೋಪ್ರಾ ಆರಂಭಿಕರಾಗಿ ಆಸೀಸ್​ನ ವಾರ್ನರ್​ ಹಾಗೂ ಇಂಗ್ಲೆಂಡ್​ನ ಜೋಸ್​ ಬಟ್ಲರ್​ರನ್ನು ಆಯ್ಕೆ ಮಾಡಿದ್ರೆ, 3ನೇ ಕ್ರಮಾಂಕದಲ್ಲಿ ಕಿವೀಸ್​ನ ಕಾಲಿನ್​ ಮನ್ರೊ, 4ನೇ ಕ್ರಮಾಂಕದಲ್ಲಿ ಬಾಬರ್​ ಅಜಮ್​, 5ನೇ ಕ್ರಮಾಂಕಕ್ಕೆ ಎಬಿಡಿ ವಿಲಿಯರ್ಸ್​,ಆಲ್​ರೌಂಡರ್​ ಕೋಟಾದಲ್ಲಿ ಬಾಂಗ್ಲಾದ ಶಕಿಬ್ ಅಲ್​ ಹಸನ್ ಹಾಗೂ ವಿಂಡೀಸ್​ನ ಆಲ್​ರೌಂಡರ್​ ಆ್ಯಂಡ್ರೆ ರೆಸೆಲ್​​ ಆಯ್ಕೆ ಮಾಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಪಾಲ್ಘರ್ ಹತ್ಯೆ ಪ್ರಕರಣದ ಆರೋಪಿಗೆ ಕೊರೋನ ಸೋಂಕು

Sat May 2 , 2020
ಮುಂಬೈ: ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ಪಾಲ್ಘರ್ ಗುಂಪು ಥಳಿತ ಪ್ರಕರಣದ ಆರೋಪಿಗಳಲ್ಲೊಬ್ಬನಿಗೆ ಕೊರೋನ ಸೋಂಕು ದೃಢಪಟ್ಟಿದೆ. ಆತನನ್ನು ಆರಂಭದಲ್ಲಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಯ ಐಸೊಲೇಶನ್ ವಾಡ್ರಲ್ಲಿರಿಸಲಾಗಿತ್ತಾದರೂ ನಂತರ ಜೆ ಜೆ ಆಸ್ಪತ್ರೆಯ ಕೈದಿಗಳ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಇಬ್ಬರು ಸಾಧುಗಳು ಮತ್ತವರ ಕಾರು ಚಾಲಕನ ಹತ್ಯೆಗೆ ಕಾರಣವಾದ ಪಾಲ್ಘರ್ ಘಟನೆ ಸಂಬಂಧ ಪೊಲೀಸರು ಬಂಧಿಸಿದ್ದ ಒಂಬತ್ತು ಅಪ್ರಾಪ್ತರು ಸೇರಿದಂತೆ ೧೧೫ ಮಂದಿಯಲ್ಲಿ ಈ ಆರೋಪಿಯೂ ಸೇರಿದ್ದಾನೆ. ಅಪ್ರಾಪ್ತರನ್ನು […]

Advertisement

Wordpress Social Share Plugin powered by Ultimatelysocial