ಕಡಲೆ ಹೆಟ್ಟು ಕೂದಲಿಗೂ ಹಚ್ಚಬಹುದು.

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ ಕೇಳಿರುತ್ತೀರಿ. ಆದರೆ ಈಗ ಕಡಲೆ ಹಿಟ್ಟಿನಿಂದ ಕೂದಲ ಬೆಳವಣಿಗೆ ಸಾಧ್ಯ ಎಂಬುದರ ಬಗ್ಗೆ ತಿಳಿಯೋಣ.ನಿಮ್ಮ ಕೂದಲು ವಿಪರೀತ ಒಣಗಿದ್ದರೆ ಮತ್ತು ಉದುರುತ್ತಿದ್ದರೆ ಕಡಲೆ ಹಿಟ್ಟು ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು. ಕಡಲೆ ಹಿಟ್ಟಿಗೆ ಒಂದು ಚಮಚ ತೆಂಗಿನೆಣ್ಣೆ, ಬಾದಾಮಿ ಪುಡಿ, ಆಲಿವ್ ಆಯಿಲ್, ವಿಟಮಿನ್ ಇ ಕ್ಯಾಪ್ಸೂಲ್ ಬೆರೆಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಹೊಳಪು ಪಡೆಯುವುದು ಮಾತ್ರವಲ್ಲ, ಉದುರುವುದು ಕಡಿಮೆಯಾಗುತ್ತದೆ.ಇದನ್ನು ವಾರಕ್ಕೆರಡು ಬಾರಿ ನೀವು ಪ್ರಯತ್ನಿಸಬಹುದು. ಇದರಿಂದ ಕೂದಲಿಗೆ ಪೋಷಕಾಂಶ ಸಿಗುತ್ತದೆ ಮಾತ್ರವಲ್ಲ ಕಾಂತಿಯುತವಾಗುತ್ತದೆ. ಇದನ್ನು ಹಚ್ಚುವಾಗ ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿ. ಮಾರುಕಟ್ಟೆಯಲ್ಲಿ ಕಡಲೆ ಹಿಟ್ಟಿನ ಸೋಪು, ಶಾಂಪೂ ಸಿಕ್ಕರೂ ಅದಕ್ಕಿಂತ ನೈಸರ್ಗಿಕ ಕಡಲೆ ಹಿಟ್ಟಿನ ಬಳಕೆಯೇ ಒಳ್ಳೆಯದು.ಕಡಲೆ ಹಿಟ್ಟಿಗೆ ಜೇನು, ತೆಂಗಿನೆಣ್ಣೆ ಮತ್ತು ನೀರು ಬೆರೆಸಿ. ನಿಧಾನವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡಿ. ಇದು ನಿಮಗೆ ಶಾಂಪೂವಿನ ಪ್ರಭಾವವನ್ನು ಕೊಡುತ್ತದೆ. ಕಡಲೆ ಹಿಟ್ಟು ಪೋಷಕಾಂಶ ನೀಡಿದರೆ ಜೇನು ಹಾಗು ತೆಂಗಿನೆಣ್ಣೆ ಕೂದಲನ್ನು ನಯವಾಗಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು!

Sun Jan 30 , 2022
  ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,34,281 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದೆ ವೇಳೆಯಲ್ಲಿ 893 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4,94,091 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ (ಜನವರಿ 30, 2022) ಬಿಡುಗಡೆ ಮಾಡಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 18,84,937 ಕ್ಕೆ ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ 1,19,396 ಪ್ರಕರಣಗಳ ಇಳಿಕೆ […]

Advertisement

Wordpress Social Share Plugin powered by Ultimatelysocial