ಕನ್ನಡದ ನಟಿಯ ತೆಲುಗು ಸಿನಿಮಾ 100 ಕೋಟಿ ಕಲೆಕ್ಷನ್!

 

ಇತ್ತೀಚಿನ ಆಕ್ಷನ್ ಎಂಟರ್‌ಟೈನರ್ ಧಮಾಕಾ ಸಿನಿಮಾ ರವಿತೇಜ ಅಭಿನಯದ ಸೂಪರ್ ಹಿಟ್ ಸಿನಿಮಾ.ತ್ರಿನಾಥ ರಾವ್ ನಕ್ಕಿನ ನಿರ್ದೇಶನದ ಮೂವಿಯಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಸತತ ಎರಡು ಫ್ಲಾಪ್‌ಗಳ ನಂತರ ರವಿತೇಜಗೆ ಈ ಸಿನಿಮಾ ಬ್ರೇಕ್ ಕೊಟ್ಟಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ 100 ಕೋಟಿ ಗಳಿಕೆ ಸಮೀಪಿಸಿದೆ.ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿದ್ದು, ಕನ್ನಡದ ನಟಿ ಶ್ರೀಲೀಲಾ ನಾಯಕಿ. ಭೀಮ್ ಸಿಸೆರೊಲಿಯೊ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಭಾರೀ ನಿರೀಕ್ಷೆಗಳ ನಡುವೆ ಬಂದಿರುವ ಸಿನಿಮಾ ಡಿಸೆಂಬರ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಇದರಲ್ಲಿ ಕನ್ನಡದ ನಟಿ ಹೀರೋಯಿನ್ ಎನ್ನುವುದು ವಿಶೇಷಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ರವಿತೇಜ ಡಬಲ್ ರೋಲ್ ಮಾಡಿದ್ದಾರೆ. ರವಿತೇಜ ಅವರ ಹಿಂದಿನ ಸಿನಿಮಾಗಳ ವಿಷಯಕ್ಕೆ ಬಂದರೆ, ರಮೇಶ್ ವರ್ಮಾ ನಿರ್ದೇಶನದ ಕಿಲಾಡಿಗಳು ಮತ್ತು ಶರತ್ ಮಾಂಡವ ನಿರ್ದೇಶನದ ರಾಮರಾವ್ ಅವರ ಆನ್ ಡ್ಯೂಟಿ ಕೂಡ ಫ್ಲಾಪ್ ಆಗಿದ್ದವು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡತಿ ಹೀರೋ ಮೇಲೆ ಮನಸಿದ್ಯಾ ಅಂತಾ ವರೋದಿನಿ ಕೇಳಿದ್ಯಾಕೆ?

Wed Jan 4 , 2023
ಕನ್ನಡತಿ ಧಾರಾವಾಹಿಯಲ್ಲಿ ಮೊದಲಿನಿಂದಲೂ ಹರ್ಷನ ಮೇಲೆ ವರೂದಿನಿಗೆ ಹುಚ್ಚು ಪ್ರೀತಿ ಅದು ಭುವಿಗೆ ಮದುವೆ ಸಮಯದಲ್ಲಿ ತಿಳಿದಿತ್ತು. ನಂತರ ಅವರಿಬ್ಬರಿಗೂ ತಿಳಿಯದ ಡಿವೋರ್ಸ್‌ಗೂ ಸಹ ಅಪ್ಲೈ ಮಾಡಿದ್ದಳು. ಇದರೆಲ್ಲರ ನಡುವೆ ವರೋದಿನಿ ಭುವಿಯ ಕೈಗೆ ಸಿಕ್ಕಿದ್ದಾಳೆ.ಈಗಲೂ ಸಹ ನಿನಗೆ ಹೀರೋ ಮೇಲೆ ಮನಸಿದ್ಯಾ ಎಂದು ಕೇಳಿದ್ದಕ್ಕೆ ವರೂದಿನಿ ವಿಚಲಿತಳಾಗಿ ಇಲ್ಲ ಎಂದು ಹೇಳಿ ಹೋಗಿದ್ದಾಳೆ. ಮುಂದೆ ವರೂಧಿನಿ ಏನು ಮಾಡ್ತಾಳೆ ನೋಡಬೇಕು.ಹರ್ಷ ಭುವಿ ಆಫೀಸ್‌ನಲ್ಲಿ ಇಲ್ಲದ್ದನ್ನು ಕಂಡು ಯೋಚನೆಗೊಳಗಾಗಿದ್ದ ಹರ್ಷ […]

Advertisement

Wordpress Social Share Plugin powered by Ultimatelysocial