ಕವಿತಾಗೆ ಗೌಡಗೆ ಮಿಸ್ ಆಯ್ತು ಚಾನ್ಸ್

ಕೊರೊನಾದಿಂದ ಚಿತ್ರೋದ್ಯಮ ಸ್ಥಗಿತಗೊಂಡಿದ್ದು, ನಟಿ ಕವಿತಾ ಗೌಡನಿಗೂ ಕೆಲವು ಚಾನ್ಸ್ ಮಿಸ್ ಆಗಿವೆ. ಕಳೆದ ವರ್ಷ ಗುಬ್ಬಿ ಮೇಲೆ ಬ್ರಹ್ಮಾಸ್ತç ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಆ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎಲ್ಲಾ ಅಂದುಕೊAಡAತೆ ಆಗಿದ್ರೆ ಕವಿತಾ ಅವರ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದ್ದವು. ಲಾಕ್‌ಡೌನ್‌ನಿಂದ ಅಪರೂಪದ ಅವಕಾಶ ಮೀಸ್ ಆಗಿದೆಯಂತೆ.
ದಿಗಂತ ಅಭಿನಯದ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಸುಮಂತ್ ಶೈಲೆಂದ್ರ ಅಭಿನಯದ ಗೋವಿಂದ ಗೋವಿಂದ ಚಿತ್ರಗಳಲ್ಲಿ ಕವಿತಾ ನಟಿಸಿದ್ದು, ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗುತ್ತವೆ ಎಂಬ ಉತ್ಸಾಹದಲ್ಲಿದ್ದರು ಆದರೆ ಕೊರೊನಾ ಅದನ್ನು ಕಿತ್ತುಕೊಂಡಿದೆ.  ಹುಟ್ಟುಹಬ್ಬದ ಶುಭಾಶಯಗಳು ಚಿತ್ರವನ್ನು ನಾಗರಾಜ್ ಬೇತೂರ್ ನಿರ್ದೇಶನ ಮಾಡುತ್ತಿದ್ದು, ಗೋವಿಂದ ಗೋವಿಂದ ಚಿತ್ರಕ್ಕೆ ತಿಲಕ್ ನಿರ್ದೇಶನವಿದೆ. ಭಾವನಾ ಮೆನನ್ ಸಹ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.

Please follow and like us:

Leave a Reply

Your email address will not be published. Required fields are marked *

Next Post

ಮಹೇಶ್ ಬಾಬು ಸಿನಿಮಾದಲ್ಲಿ ರಾಮ್ ಚರಣ್

Fri May 1 , 2020
ಟಾಲಿವುಡ್ ನಟ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್ ಟಾಲಿವುಡ್‌ನಲ್ಲಿ ಹರಿದಾಡಿತ್ತು. ಆದರೆ ಆ ಪಾತ್ರಕ್ಕೆ ಚಿರಂಜೀವಿ ಮಗ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ಖಚಿತವಾಗಿದೆ. ಆದರೆ ಟಾಲಿವುಡ್‌ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಮಹೇಶ್ ಬಾಬು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರದಲ್ಲಿ ರಾಮ್ ಚರಣ್ ನಾಯಕರಾಗಿ ನಟಿಸಲಿದ್ದಾರೆ. ನಿರ್ದೇಶಕ ವಂಶಿ ಪೈದಿಪಳ್ಳಿ ಕಥೆಯೊಂದನ್ನು […]

Advertisement

Wordpress Social Share Plugin powered by Ultimatelysocial