ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವವರಿಗೆ ಸಿಹಿ ಸುದ್ದಿ: ಕೋವಿಡ್‌ನಿಂದ ಹೇರಲಾಗಿದ್ದ ಸೇವೆಗಳ ನಿರ್ಬಂಧ ತೆರವು

ಮಂಗಳೂರು: ಕುಕ್ಕೆ ಸುಬ್ರಮಣ್ಯದಲ್ಲಿ ಕೋವಿಡ್‌ನಿಂದ ಹೇರಲಾಗಿದ್ದ ಸೇವೆಗಳ ನಿರ್ಬಂಧ ತೆರವು ಮಾಡಲಾಗಿದ್ದು, ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.ಹೌದು, ರಾಜ್ಯದಲ್ಲಿ ಇದೀಗ ಸೋಂಕು ತಗ್ಗಿದ ಹಿನ್ನೆಲೆ ದೇವಾಲಯದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ತೆಗೆಯಲಾಗಿದೆ.ಇದೇ ವೇಳೆ ಆದೇಶ ಪತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಹಿಂದಿನಂತೆ, ಭಕ್ತಾದಿಗಳು ಸೇವೆಗಳನ್ನು ನೇರವೇರಿಸಲು ಅವಕಾಶ ಮಾಡಿಕೊಡಲಾಗಿದೆ ಅಂತ ಹೇಳಿದೆ.ಆದೇಶದಲ್ಲಿ ಇರೋದು ಏನು?ರಾಜ್ಯ ಸರ್ಕಾರದ ನಡವಳಿ ಸಂಖ್ಯೆ ಆರ್. ಡಿ 158 ಟಿ.ಯನ್.ಆರ್ 2020, ದಿನಾಂಕ 29-01-2022 ರ ಆದೇಶದ ಮೇರೆಗೆ, ಕೋವಿಡ್-19 ರ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿಕೊಂಡು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ದಿನಾಂಕ 01/02/2022 ರಿಂದ, ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ, ಎಲ್ಲಾ ಸೇವೆಗಳನ್ನು ನೆರವೇರಿಸಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಸೇವಾಕರ್ತರು ಕನಿಷ್ಠ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ವರದಿ ಹಾಜರಿ ಪಡಿಸುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಸೇರಿಸುವ 8 ಅದ್ಭುತ ಪ್ರಯೋಜನ;

Tue Feb 1 , 2022
ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸಲು ಗೋಯಲ್ ನಿಮಗೆ 8 ಕಾರಣಗಳನ್ನು ನೀಡುತ್ತಾರೆ; ಕಣ್ಣಿನ ಆರೋಗ್ಯ ಕ್ಯಾರೆಟ್ ಸೇವನೆಯು ಉತ್ತಮ ಕಣ್ಣಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನೀವು ಕೇಳಿರಬೇಕು. ಇದು ವಿಟಮಿನ್ ಎ ಯ ಸಕ್ರಿಯ ಸಂಯುಕ್ತವಾದ ಬೀಟಾ-ಕ್ಯಾರೋಟಿನ್ ಇರುವಿಕೆಯ ಕಾರಣದಿಂದಾಗಿರುತ್ತದೆ. ಜೊತೆಗೆ, ಕ್ಯಾರೊಟಿನಾಯ್ಡ್‌ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಿಮ್ಮ ಕಣ್ಣಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಕಣ್ಣಿನ ಪೊರೆ ಮತ್ತು ದೃಷ್ಟಿ ನಷ್ಟದಂತಹ ಕ್ಷೀಣಗೊಳ್ಳುವ ಕಾಯಿಲೆಗಳನ್ನು […]

Advertisement

Wordpress Social Share Plugin powered by Ultimatelysocial