ಕೆ.ಆರ್.ಸರ್ಕಲ್ ಬಳಿ ಮಹಿಳೆ ಗಲಾಟೆ

ನಿನ್ನೆ ಜೀವನ್ ಭೀಮಾನಗರದಲ್ಲಿ ಪೊಲೀಸರ ಜೊತೆ ಕುಡಿದು ಯುವತಿಯರು ರಂಪಾಟ ಮಾಡಿದ್ದು ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.. ಬೆಳಗ್ಗೆ ಪಾಸ್ ಇಲ್ಲದೇ ಬರುತ್ತಿದ್ದ ಮಹಿಳೆಯನ್ನು  ಪೊಲೀಸರು ಹಿಡಿದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಕೆಂಡಮಂಡಲಳಾದ ಮಹಿಳೆ ದೊಡ್ಡ ಅವಾಂತರ ಸೃಷ್ಠಿಸಿದ್ದಾಳೆ . ಪೊಲೀಸರ ಮೇಲೆ ಗಲಾಟೆ ತೆಗೆದ ಮಹಿಳೆ ಕೂಗ್ಗಾಡಿ ರಂಪಾಟ ಮಾಡಿರೋ ಘಟನೆ ಕೆ.ಆರ್. ಸರ್ಕಲ್ ನಡೆದಿದೆ…  ಪಾಸ್ ಇಲ್ಲದೇ ಆಟೋ ಕರೆದುಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಮಹಿಳೆಯನ್ನು ಪೋಲಿಸರು ಪರಿಶೀಲಿಸಿದಾಗ ನಾನು ಯಾರು ಗೊತ್ತೇ ಎಂದು ಪೋಲಿಸರಿಗೆ ಅವಾಜ್ ಹಾಕಿ .ತನಗೆ ಮಿನಿಷ್ಟರ್ ಗೊತ್ತು  ನನ್ನನ್ನು ಬಿಡಿ ಎಂದು ಪೋಲಿಸರಿಗೆ ಧಮ್ಕಿ ಹಾಕಿದ್ದಾಳೆ. ನಂತರ ಕೂಗಾಡುತ್ತಾ ನಡೆದುಕೊಂಡೇ ಹೋಗಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ಯದಿದ್ದಾರೆ.. ಹಲಸೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ ಜಿಲ್ಲೆಗೆ ಕೋವಿಡ್ ಪ್ರಯೋಗಾಲಯ ನಿರ್ಮಾಣ

Mon Apr 20 , 2020
ಬೆಂಗಳೂರು: : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಶೀಘ್ರವಾಗಿ ತಪಾಸಣೆ ನಡೆಸಲು ಈ ತಿಂಗಳ ೩೦ರ ಒಳಗಾಗಿ ಪ್ರತಿ ಜಿಲ್ಲೆಗೊಂದು ಕೋವಿಡ್ ಪ್ರಯೋಗಾಲಯ ಹಾಗೂ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ ಒದಗಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಿಯೋಗದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು ರ‍್ಕಾರವು ಕಟ್ಟಡ ಕರ‍್ಮಿಕರಿಗೆ ಸಹಾಯಧನ ಘೋಷಣೆ ಮಾಡಿದೆ. ಆದರೆ ಇತರೆ ಕರ‍್ಮಿಕರ ಬದುಕು ಸಂಕಷ್ಟದಲ್ಲಿದ್ದು ಸಂಘಟಿತ […]
suresh kumar

Advertisement

Wordpress Social Share Plugin powered by Ultimatelysocial