ಕೇಂದ್ರ ಸರ್ಕಾರಕ್ಕೆ  ಮನವಿ

ನವದೆಹಲಿ: ಲಾಕ್​​ಡೌನ್ ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿವಿ, ರೇಡಿಯೋ ಮೂಲಕ ವಿವಿಧ ಅವಧಿಗಳಲ್ಲಿ ಶಿಕ್ಷಣ ಪ್ರಸಾರ ಮಾಡಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರದ ಶಿಕ್ಷಣ ಸಚಿವೆ  ಮನವಿ ಮಾಡಿದ್ದಾರೆ. ಡಿಡಿ ನ್ಯಾಷನಲ್‌ ಚಾನೆಲ್​​ನಲ್ಲಿ 12 ಗಂಟೆಗಳ ಅವಧಿ (ಸ್ಲಾಟ್) ಹಾಗೂ ರೇಡಿಯೊದಲ್ಲಿ 2 ಗಂಟೆ ಅವಧಿ (ಸ್ಲಾಟ್) ನೀಡಬೇಕೆಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕ್ರಮಬದ್ಧವಾಗಿ ಈ ರೀತಿಯ ಸ್ಲಾಟ್‌ಗಳನ್ನು ನೀಡಿದರೆ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕಾರ್ಯಗಳು ಪ್ರಾರಂಭವಾಗಿದ್ದು, ನಾವು ಈಗಾಗಲೇ 1000 ಗಂಟೆಗಳ ಅಧ್ಯಯನ ಸಾಮಗ್ರಿಯನ್ನು ಸಂಗ್ರಹಿಸಿದ್ದೇವೆ. ಮಹಾರಾಷ್ಟ್ರ ಎಸ್‌ಸಿಇಆರ್‌ಟಿ ಪ್ರಸಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

70 ವರ್ಷದ ಜೋಡಿ ಮತ್ತೆ ಒಂದಾಯಿತು.!

Sat May 30 , 2020
ಬರೋಬ್ಬರಿ 70‌ ವರ್ಷ ಎಂದಿಗೂ ಬೇರ್ಪಡದೆ ಬಾಳಬಂಡಿ ಎಳೆದಿದ್ದ ದಂಪತಿ ಕೊರೋನಾ ವೈರಸ್‌ನಿಂದ ತಿಂಗಳುಗಟ್ಟಲೆ ಬೇರ್ಪಟ್ಟಿದ್ದರು. ಆದರೀಗ ಒಬ್ಬರಿಗೊಬ್ಬರು ಸಂಧಿಸಿದ್ದು ದೊಡ್ಡ ಸುದ್ದಿಯಾಗಿದೆ.ಈ ದಂಪತಿಯ ಪುನರ್ಮಿಲನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ಮೂಲದ ಜಿಮ್ ಮತ್ತು ವಾಲ್ಟರ್ ವಿಲ್ಲರ್ಡ್ ಎಂಬುವರು ವಿವಾಹವಾಗಿ 70 ವರ್ಷ ಕಳೆದಿದ್ದರು. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುವಂತೆ ಆಗಿತ್ತು. ಕಳೆದ ವರ್ಷ ಜಿನ್ ಸೊಂಟ ಮುರಿದುಕೊಂಡು ಆರೈಕೆ ಗೃಹಕ್ಕೆ ಸ್ಥಳಾಂತರವಾಗಿದ್ದರು, […]

Advertisement

Wordpress Social Share Plugin powered by Ultimatelysocial