ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮ ತೆಗೆದುಕೊಳ್ಳಿ:ಸಿಎಂ

ನೆರೆಯ ರಾಜ್ಯ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಸಂಭವಿಸಿರುವ ಭೀಕರ ವಿಷಾನಿಲ ಸೋರಿಕೆ ಹಿನ್ನೆಲೆ ರಾಜ್ಯದಲ್ಲೂ ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಖಾತರಿ ಪಡಿಸುವಂತೆ ಕೈಗಾರಿಕಾ ಘಟಕಗಳ ವ್ಯವಸ್ಥಾಪಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಿಶಾಖಪಟ್ಟಣದ ವಿಷಾನಿಲ ಸೋರಿಕೆಯ ದುರಂತ ಘಟನೆ ದುರದೃಷ್ಟಕರ . ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು.

 

 

 

ಈ ಹಿನ್ನೆಲೆ, ಎರಡು ತಿಂಗಳ ನಂತರ ತಮ್ಮ ಕೈಗಾರಿಕೆಗಳನ್ನು ಆರಂಭಿಸುತ್ತಿರುವ ವ್ಯವಸ್ಥಾಪಕರು, ಈ ದುರಂತದ ಘಟನೆಯನ್ನು ಎಚ್ಚರಿಕೆಯ ಪಾಠವಾಗಿ ತೆಗೆದುಕೊಳ್ಳಬೇಕು.  ಹಾಗಾಗಿ, ಎಲ್ಲ ಸುರಕ್ಷಿತ ಮುಂಜಾಗರೂಕತಾ ಕ್ರಮಗಳನ್ನು ಖಾತರಿಪಡಿಸಿಕೊಂಡ ಮೇಲೆ ಉತ್ಪಾದನೆ ಆರಂಭಿಸಬೇಕೆಂದು’ ವಿನಂತಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್​ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ:ಬೊಮ್ಮಾಯಿ

Thu May 7 , 2020
ಕಾಂಗ್ರೆಸ್​ ವಲಸೆ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ನಾವು ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳಿಸಲು ಅಲ್ಲಿನ ಸರ್ಕಾರಗಳಿಂದ ಅನುಮತಿ ಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ, ನಾವ್ಯಾರು ವಲಸೆ ಕಾರ್ಮಿಕರನ್ನು ಇಲ್ಲೇ ಬಲವಂತವಾಗಿ ಇಟ್ಟುಕೊಂಡಿಲ್ಲ. ಆದರೀಗ ಕೆಲವು ರಾಜ್ಯಗಳಿಂದ ಇದಕ್ಕೆ ಅನುಮತಿ ಸಿಕ್ಕಿಲ್ಲ. ಹಾಗಾಗಿ ನಾವು ಆಯಾ ರಾಜ್ಯಗಳ ವಲಸೆ ಕಾರ್ಮಿಕರನ್ನು ಕಳಿಸಲು […]

Advertisement

Wordpress Social Share Plugin powered by Ultimatelysocial