“ಕೈ” ಮತ್ತು “ದಳ” ಅಹಿಂದ ಮತ ಮಂತ್ರ- 2023ರ ಚುನಾವಣೆಯಲ್ಲಿ ಮತ ಸೆಳೆಯಲು “ಕೈ ಮತ್ತು ದಳ” ಭರ್ಜರಿ ಫೈಟ್‌

ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದ್ಯಂತ ವಿಧಾನಸಭೆ ಚುನಾವಾಣೆಯಲ್ಲಿ ಹೇಗಾದರು ಮಾಡಿ ಗದ್ದುಗೆ ಯನ್ನು ಏರಲೇ ಬೇಕು ಎಂದು ಕಾಂಗ್ರೆಸ್‌ ಮತ್ತು ಜನತಾ ದಳ ಪಕ್ಷವೂ ಪೈಪೋಟಿ ಈಗಿನಿಂದಲೇ ಶುರುವಾಗಿದೆ. 2023ರಲ್ಲಿ ಅಧಿಕಾರವನ್ನು ಹಿಡಿಯಲೇ ಬೇಕು ಎಂದು ಕಾಂಗ್ರೆಸ್‌ ಒಂದು ಕಡೆ ಪ್ಲಾನ್‌ ಮಾಡಿದರೆ ಮತ್ತೊಂದು ಕಡೆ ಜೆಡಿಎಸ್‌ ಪಕ್ಷವು ಕಾರ್ಯಗಾರ ಸರಣಿ ಸಭೆಗಳಿಂದ ಅಹಿಂದ ಮತಗಳನ್ನು ಸೆಳೆಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.ಹಾಗಾದ್ರೆ ಈ ಎರೆಡೂ ಪಕ್ಷಗಳು ಯಾವ ರೀಯಲ್ಲಿ ಮತಗಳನ್ನು ಸೆಳೆಯಲು ಸಜ್ಜಾಗಿವೆ ಎಂಬುದು ಮುಂದೆ ತಿಳಿಯೋಣ. ಅಹಿಂದ  ಮೇಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಣ್ಣು  ಬಿದ್ದಿದೆ.. ಹೌದು ಜನತಾ ದಳ ಮತ್ತು ಕೈ ನಾಯಕರ  ಮೇನ್‌ ಟಾರ್ಗೆಟ್‌ ಅಂದ್ರೆ ಅದು 2023ರ ಚುನಾವಣೆಯ ಮೇಲೆಯೇ ಹಾಗಾಗಿ 2023ರ ಚುನಾವಣೆ ದೃಷ್ಟಿಯಿಂದ ಈಗಿನಿಂದಲೇ  ಜೆಡಿಸ್‌ ಮತ್ತು ಕಾಂಗ್ರೆಸ್‌ ನಲ್ಲಿ ಅಹಿಂದ ಮತಗಳನ್ನು ಸೆಳೆಯೋದಕ್ಕೆ ಭರ್ಜರಿ  ಫೈಟ್‌ ಶುರುವಾಗಿದೆ.. ಕಾರ್ಯಗಾರ ನೆಪದಲ್ಲಿ ಮತ ಸೆಳೆಯುವ ತಂತ್ರಗಾರಿಕೆ ಒಂದು ಕಡೆಯಾದ್ರೆ  ಎರೆಡೂ ಪಕ್ಷದಲ್ಲಿ ಕೂಡ ಅಂದ್ರೆ ಕಾಂಗ್ರೆಸ್‌ ಮತ್ತು ಜೆಡಿಸ್‌ ನಿಂದ ಸರಣಿ ಸಭೆಗಳು ಕಾರ್ಯಗಾರಗಳು ಒಂದು ರೀತಿಯಲ್ಲಿ ಪೈಪೋಟಿಗೆ ಬಿದ್ದರಂತೆ ನಡೆಸುತ್ತಿದ್ದೆ….

ಒಟ್ಟಾರೆಯಾಗಿ ಇವರೆಲ್ಲ ಟಾರ್ಗೆಟ್‌ ಮಾತ್ರ 2023ರ ಸಾರ್ವತ್ರಿಕ ಚುನಾವಣೆ ಮೇಲೆ ಹಾಗಾಗಿ ಅಹಿಂತ ಮತಗಳನ್ನು ಸೆಳೇಯೋ ನಿಟ್ಟಿನಲ್ಲಿ ಒಂದಾದ ನಂತರ ಒಂದು ಸಭೆ,ಕಾರ್ಯಗಾರವನ್ನು ನಡೆಸಲು ಎರೆಡೂ ಪಕ್ಷಗಳು ಸಜ್ಜಾಗಿವೆ…ಎರೆಡೂ ಪಕ್ಷಗಳು  ಸ್ಪೇಷಲಿ ಅಲ್ಪ ಸಂಖ್ಯಾತ ,ದಲಿತ,ಹಿಂದುಳಿದ ಸಮುದಾಯಗಳ ಸಭೆಯನ್ನು ಆಯೋಜಿಸುವ ಮೂಲಕ ಅಹಿಂದ ಮತಗಳನ್ನು ಸೆಳೆಯುವ ತಂತ್ರನ್ನು ಮಾಡಿದ್ದಾರೆ ̤ ಇತ್ತೀಚಿನ ದಿನಗಳಲ್ಲಿ  ಕಾಂಗ್ರೆಸ್‌ ಪಕ್ಷವು ಅಹಿಂದ ಒಟ್‌ ಬ್ಯಾಂಕ್‌ ಇರೊದರಿಂದ ಅದನ್ನು ಹಾಗೆ ಉಳಿಸಿಕಳ್ಳಲು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಕಾರ್ಯಗಾರ ಸಭೆಗಳನ್ನು ನಡೆಸುತ್ತಿದ್ದಾರೆ.ಈ ಒಂದು ನಿಟ್ಟಿನಲ್ಲಿ ಜೆಡಿಸ್‌ ಕೂಡ ಅಹಿಂದ ಮತಗಳ ಮೇಲೆ ಕಣ್ನಿದೆ.ಇನ್ನು ಅಹಿಂದ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು  ಈ ಎರೆಡೂ ಪಕ್ಷಗಳು ರಣ ತಂತ್ರವನ್ನು ಎಸಗುತ್ತಿವೆ…ಜೆಡಿಎಸ್‌ ಸಹ ಕಾರ್ಯಗಾರಗಳನ್ನು ನಡೆಸಿ ಅಲ್ಪಸಂಖ್ಯಾತ,ದಲಿತ,ವರ್ಗಗಳ ಕಾರ್ಗಾರಗಳನ್ನು ನಡೆಸುತ್ತಿದೆ. ಈ ಎರೆಡೂ ಪಕ್ಷಗಳ ಮೂಲ ಉದ್ದೇಶವು ಒಂದೇ ಆಗಿದೆ ಅಹಿಂತ ಮತಗಳನ್ನು ಸೆಳೆಯುವುದು.

ಇದೀಷ್ಟು ಅಹಿಂದ ಮತಗಳನ್ನು ಸೆಳೆಯಲು ಎರೆಡೂ ಪಕ್ಷಗಳು ಸೆಣಸಾಡಿದರೆ ಈಗ ಜೆಡಿಸ್‌ ನ ಕುಮಾರಣ್ಣ ಇನ್ನೊಂದು ಪ್ಲಾನ್‌ ಮಾಡಿದ್ದಾರೆ.. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 30-35 ಸ್ಥಾನವನ್ನು ಮಹಿಳೆಯರಿಗೆ ಮೀಸಲು ಇಡುವುದಾಗಿ ಕಾರ್ಯಗಾರ ಸಭೆಯಲ್ಲಿ ತಿಳಿಸಿದ್ದಾರೆ..ಈ ಬಾರಿ ಮಹಿಳಾ ಅಭ್ಯಾರ್ಥಗಳಿಗೆ ಮನ್ನಣೆಯನ್ನು ನೀಡಲಾಗುವುದು ಈಗಾಗಲೇ ಮೊದಲ ಹಂತದಲ್ಲಿ 7-8 ಜ ಅಭ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಮಹಿಳೆಯರಿಗೆ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಕೊಡಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಹ್ವತದ ಘೋಷಣೆಯನ್ನು ಮಾಡಿದ್ದರು. ಒಂದು ಕಡೆ ಕುಮಾರಣ್ಣ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದರೆ ಮತ್ತೊಂದು ಕಡೆ ಕಾಂಗ್ರೆಸ್‌ ಪಕ್ಷದವರು ಗಾನಿಗ ಸಮುದಾಯಗಳಿಗೆ ಭೇಟಿ ನೀಡಿ ಮಾತುಕತೆಗಳನ್ನು ನಡೆಸಿದ್ದಾರೆ..ಶ್ರಮದ ಸಂಸ್ಕೃತಿಯ ಪ್ರತಿಕವೇ ಗಾನಿಗ ಸಮುದಾಯ ಹಾಗಾಗಿ ನಾವು ಯಾರೂ ಕೂಡ ಇಂತಹ ಸಮುದಾಯದಲ್ಲೇ ಹುಟ್ಟಬೇಕು ಎಂದು ಕೇಳಿರುವುದಿಲ್ಲ ಎಂದು ಗಾನಿಗೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ…ಒಟ್ಟಾರೆಯಾಗಿ ಈ ಎರಡೂ ಪಕ್ಷಗಳು ಜಿದ್ದಾ ಜಿದ್ದಿಗೆ ಬಿದ್ದು ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಹಿಡಿಯಲು ಸೆಣಸಾಡುತ್ತಿವೆ.. ಮುಂದಿನ ದಿನಗಳಲ್ಲಿ ಯಾರು ಶಾಸಿಸಲಿದ್ದಾರೆ ಕರ್ನಾಟಕವನ್ನು ಎಂಬುದು ಕಾದು ನೋಡಬೇಕಿದೆ.

 

Please follow and like us:

Leave a Reply

Your email address will not be published. Required fields are marked *

Next Post

ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕ...!

Tue Oct 5 , 2021
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ಏರುಪೇರಾಗಿದ್ದು. ಕೆಲವು ವರ್ಷಗಳಿಂದ ಆರೋಗ್ಯ ಸರಿಯಿರಲಿಲ್ಲ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು.ಈ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ತೆಗೆಯಲಾಗಿತ್ತು. ಆ ನಂತರವೂ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಬಾಧಿಸುತ್ತಲೇ ಇದ್ದವು. 72 ವರ್ಷದ ಸತ್ಯಜಿತ್‌ ಕೆಲವು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಬಳಿಕ ಅವಕಾಶಗಳು ಇಲ್ಲವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾರೆ. ಸತ್ಯಜಿತ್‌ […]

Advertisement

Wordpress Social Share Plugin powered by Ultimatelysocial