ಕೊರೊನಾ ಚಿಕಿತ್ಸೆ ನಿರಾಕರಿಸಿದರೆ ಕಠಿಣ ಕ್ರಮ

ಕೋವಿಡ್ ಮತ್ತು ಕೋವಿಡ್ ಅಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಲಕ್ಷಣರಹಿತ ಮತ್ತು ಅಲ್ಪ ಲಕ್ಷಣವುಳ್ಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ ಮಾಡುವ ನಿಟ್ಟಿನಲ್ಲಿ ಸರಕಾರದ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ. ರಾಜ್ಯದಲ್ಲಿ ಇದುವರೆಗೆ ೨೧,೭೭೫ ಜನರು ಗುಣಮುಖರಾಗಿದ್ದು, ರಾಜ್ಯದಲ್ಲಿ ೨೪,೯೦೯ ಕೊರೊನಾ ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಈಗ ೮೫ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು ಮುಂದಿನ ದಿನಗಳಲ್ಲಿ ಇನ್ನೂ ೨೫ ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ ಎಂದು ಸುಧಾಕರ್ ತಿಳಿಸಿದರು. ಮುಂದಿನ ದಿನಗಳಲ್ಲಿ ೫೦,೦೦೦ ಆರ್‌ಟಿಪಿಸಿಆರ್ ಟೆಸ್ಟ್ ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ ೯.೮ ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಟೆಸ್ಟ್ ನಡೆಸಿವೆ ಎಂದು ಸಚಿವರು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ೧೦ ಲಕ್ಷ ಜನಸಂಖ್ಯೆಗೆ ೧೪೯ ಪರೀಕ್ಷೆ ನಡೆಸಬೇಕಾಗಿದ್ದು, ರಾಜ್ಯದಲ್ಲಿ ೩೦೦ ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ ೧೦ ಲಕ್ಷ ಆಂಟಿಜೆನ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ. ಟೆಸ್ಟ್ ನಡೆಸುವಲ್ಲಿ ಮೊದಲ ೧೦ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದರು.

Please follow and like us:

Leave a Reply

Your email address will not be published. Required fields are marked *

Next Post

ಜಿ.ಪಂ ಸದಸ್ಯ ಹಾಗೂ ಸಹಚರರಿಂದ ವೃದ್ಧನ ಮೇಲೆ ಹಲ್ಲೆ

Sun Jul 19 , 2020
ನೆಲಮಂಗಲ ಅಪಾರ್ಟ್ ಮೆಂಟ್  ಅಸೋಸಿಯೇಷನ್  ಸಭೆಯಲ್ಲಿ ಸಮಸ್ಯೆಗಳ  ಬಗ್ಗೆ  ಧ್ವನಿ  ಎತ್ತಿದ  ವೃದ್ಧನ ಮೇಲೆ  ಜಿಲ್ಲಾ  ಪಂಚಾಯತ್  ಸದಸ್ಯ  ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಮಾಚೋಹಳ್ಳಿಯ ಜನಪ್ರಿಯ ಟೌನ್ ಶಿಪ್  ಬಳಿ ಘಟನೆ  ನಡೆದಿದೆ. ಜನಪ್ರಿಯ ಟೌನ್ ಶಿಪ್  ಓನರ್ ಅಸೋಸಿಯೇಷನ್ ಸಭೆ ಇದೆ ಎಂದು  ಕರೆಸಿ ಕೊಳಚೆ ನೀರು ಹರಿಯುವ ಬಗ್ಗೆ ಸಭೆಯಲ್ಲಿ  ಧ್ವನಿ ಎತ್ತಿದರೆಂದು ಬಿಳಿಗಿರಿ ರಂಗಬಾಬು ಎಂಬ ವೃದ್ಧನ ಮೇಲೆ […]

Advertisement

Wordpress Social Share Plugin powered by Ultimatelysocial