ಲಸಿಕೆ ಮತ್ತು ಔಷಧಿಯಿಂದ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಗೆಲ್ಲಬಹುದು. ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಹಾಗೂ ಔಷಧ ಉದ್ಯಮ ಸಂಸ್ಥೆಗಳು ಬಹಳ ಪ್ರಬಲವಾಗಿವೆ ಎಂದು ನೀತಿ ಆಯೋಗದ ಆರೋಗ್ಯ ವಲಯದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ ಭಾರತದಲ್ಲಿ ದೊಡ್ಡ ಉದ್ಯಮಗಳಿಂದ ಹಿಡಿದು ವೈಯಕ್ತಿಕ ಶಿಕ್ಷಣ ತಜ್ಞರವರೆಗೆ ಸುಮಾರು ೩೦ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ೩೦ ಸಂಸ್ಥೆಗಳಲ್ಲಿ ಸರಿ ಸುಮಾರು ೨೦ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿವೆ ಎಂದು ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ವಿವರಿಸಿದ್ದಾರೆ.
ಕೊರೊನಾ ಲಸಿಕೆ ಅನ್ವೇಷಣೆಯಲ್ಲಿ ೩೦ಭಾರತೀಯ ಸಂಸ್ಥೆಗಳು
Please follow and like us: