ಕೊರೊನಾ ಸೋಂಕಿತರನ್ನ ಅಪರಾಧಿಗಳಂತೆ ನೊಡಬೇಡಿ

ಇತ್ತೀಚೆಗಷ್ಟೇ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ನಟಿ, ಸಂಸದೆ ಸುಮಲತಾ ಅಂಬರೀಶ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದ ಅವರು, ‘ನಾನು ಕರೊನಾದಿಂದ ಗುಣಮುಖ ಆಗಿದ್ದೇನೆ ಎನ್ನುವ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ, ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ಬಳಿಕವೇ ತಿಳಿಯುವುದು. ಸದ್ಯಕ್ಕೆ ಔಷಧಿ ಹಾಗೂ ಸುಶ್ರುಷೆ ಮುಂದುವರೆದಿದೆ. ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ. ಇನ್ನು ಕೆಲವೇ ದಿನಗಳಲ್ಲಿ ಗುಣಮುಖ ಆಗುವ ಭರವಸೆ ಇದೆ’ ಎಂದಿದ್ದಾರೆ.’ಕರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಕರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಎಂದು ಸೋಷಿಯಲ್​ ಮೀಡಿಯಾದಲ್ಲಿ ಸುಮಲತಾ ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಾಧಿಕಾರಿಯನ್ನು ಅಧಿಕಾರದಿಂದ ತೆಗೆಯುವಂತೆ ಆಗ್ರಹ

Sat Jul 18 , 2020
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ದೇವೆಂದ್ರಪ್ಪ ಹೆಗಡೆ ವಿರುದ್ಧ ಪುರಸಭೆ ಸದಸ್ಯರು ಕೆಂಡ ಮಂಡಲವಾಗಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿಯನ್ನು ಅಧಿಕಾರದಿಂದ ತೆಗೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಇವರಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂಬ ಗಂಭೀರ ಆರೋಪ ಮತ್ತು ಒಂದು ವರ್ಷವಾದರೂ ಯಾವುದೇ ಸಾಮಾನ್ಯ ಸಭೆಯಾಗಲಿ ತುರ್ತು ಸಭೆಯಾಗಲಿ ಕರೆದಿಲ್ಲ. ಕೂಡಲೇ ಇವರನ್ನು ತೆಗೆದುಹಾಕುವಂತೆ ಪುರಸಭೆಯ ಸರ್ವ ಸದಸ್ಯರ ಆಗ್ರಹ ಮಾಡಿದ್ದಾರೆ. ಒಂದು ವೇಳೆ ಇವರನ್ನು ತೆಗೆದು […]

Advertisement

Wordpress Social Share Plugin powered by Ultimatelysocial