ಕೊರೊನಾ ಹಾವಳಿ ನಡುವೆ ಫ್ಯಾಂಟಮ್ ಶುರು

ಚಿತ್ರರಂಗದ ಮಂದಿ, ಆಕ್ಷನ್ ಎಂಬ ಪದ ಕೇಳಿ ಅದೆಷ್ಟು ದಿನಗಳಾಗಿದ್ದವೋ ಗೊತ್ತಿಲ್ಲ. ಹೀಗೆ ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ಡೌನ್ ಆಗಿದ್ದ ಸಿನಿಮಾದವರಿಗೆ, ಚಿತ್ರೀಕರಣ ಮಾಡಿ ಎಂದು ಸರ್ಕಾರ ಅನುಮತಿ ನೀಡಿ ಒಂದು ತಿಂಗಳ ಮೇಲಾಗಿದೆ. ಆದರೂ ಕರೊನಾ ಹಾವಳಿಯಿಂದಾಗಿ ಬಹಳಷ್ಟು ಜನ ಚಿತ್ರೀಕರಣ ಮುಂದೆ ಬರುತ್ತಿಲ್ಲ. ಒಂದು ದೊಡ್ಡ ಚಿತ್ರದ ತಂಡದವರು ಧೈರ್ಯದಿಂದ ಮುಂದೆ ಬಂದು, ಕೆಲಸ ಪ್ರಾರಂಭಿಸಿದರೆ ಬೇರೆಯವರು ಸಹ ಶುರು ಮಾಡಬಹುದು ಎಂದು ಚಿತ್ರರಂಗ ಕಾಯುತ್ತಿದ್ದರೂ. ಇದೀಗ ಸುದೀಪ್, ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ. ‘ಫ್ಯಾಂಟಮ್ ಚಿತ್ರೀಕರಣ ಫೆಬ್ರವರಿಯಲ್ಲೇ ಹೈದರಾಬಾದ್​ನಲ್ಲಿ ಪ್ರಾರಂಭವಾಗಿತ್ತು. ಲಾಕ್​ಡೌನ್ ಘೋಷಣೆಯಾದ ಹಿನ್ನೆಲೆಯಲ್ಲೇ ಚಿತ್ರತಂಡದವರೆಲ್ಲಾ, ಬೆಂಗಳೂರಿಗೆ ವಾಪಸ್ಸಾಗಿದ್ದರು. ಈಗ ಚಿತ್ರತಂಡದವರು ಗುರುವಾರದಿಂದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ, ಚಿತ್ರಕ್ಕಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಮೂರು ಫ್ಲೋರ್​ಗಳನ್ನು ಕಾಯ್ದಿರಿಸಿ, ಅಲ್ಲಿ ಕಾಡಿನ ಸೆಟ್ ನಿರ್ವಿುಸಿ ಚಿತ್ರೀಕರಣ ಮಾಡಲಾಗುತ್ತಿದೆ. ಬರೀ ಕಾಡಷ್ಟೇ ಅಲ್ಲ, ಜಲಪಾತ, ಸೇತುವೆ, ಗುಡಿಸಲುಗಳನ್ನು ಸಹ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.

Please follow and like us:

Leave a Reply

Your email address will not be published. Required fields are marked *

Next Post

ವಂದೇ ಭಾರತ್ ಮಿಷನ್‌ನಡಿ ೬.೮೧ಲಕ್ಷ ಜನ ತಾಯ್ನಾಡಿಗೆ

Fri Jul 17 , 2020
ಕೊರೊನಾ ಮಾಹಾಮಾರಿ ವೈರಸ್ ಕಾಟದಿಂದ ವಿದೇಶಗಳಲ್ಲಿ ಸಿಲುಕಿಕೂಂಡಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇ ಮಿಷನ್ ಕೈಕೂಂಡಿತ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಬರೋಬ್ಬರಿ ೬.೮೭ಲಕ್ಷ ಮಂದಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನಾಲ್ಕು ಹಂತಗಳಲ್ಲಿ ವಿದೇಶದಲ್ಲಿ ಸಿಲುಕಿಕೂಂಡಿದ್ದವರನ್ನ ವಾಪಸ್ ಕರೆದುಕೂಂಡು ಬರಲಾಗುತ್ತಿದೆ. ಮೊದಲ ಹಂತz ಮೇ ೭ ರಿಂದ ೧೫ರವರೆಗೆ ನಡೆದಿತ್ತು. ಎರಡನೇ ಬಾರಿ ಮೇ ೧೭ ರಿಂದ ೨೨ರವರೆಗೆ,ಹಾಗೂ ಜೂನ್ ೧೧ರಿಂದ […]

Advertisement

Wordpress Social Share Plugin powered by Ultimatelysocial