ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು:ಡಿ ಕೆ ಶಿ

ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು ಸರ್ಕಾರ ಹೇಗೆ ನಡೆಯುತ್ತದೆ? ವ್ಯವಸ್ಥೆ ಹೇಗಿರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ದಾಸ್ತಾನು ಇರಿಸಿದ್ದ ಅಕ್ಕಿ ಎನ್ನುವ ಗೋಪಾಲಯ್ಯ ಮೊದಲೇ ಏಕೆ ದಾಸ್ತಾನು ಇರಿಸಿದ್ದ ಬಗ್ಗೆ ಘೋಷಣೆ ಮಾಡಿಲ್ಲ. ನನಗೆ ಎಲ್ಲವೂ ಗೊತ್ತಿದೆ ಬಿಡಿ ಎಂದರು.ಇನ್ನೂ ಮಂಡ್ಯದಲ್ಲಿ ಶಾಸಕ ಶ್ರೀಕಂಠೇ ಗೌಡ ದಾದಾಗಿರಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು, ಸರಕಾರದವರು ಒಬ್ಬರಿಗೊಂದು ಮಾಡಬೇಡಿ. ಭರತ್ ಶೆಟ್ಟಿಗೊಂದು ನ್ಯಾಯ, ರೇಣುಕಾಚಾರ್ಯಗೆ ಒಂದು, ಶ್ರೀಕಂಠೆ ಗೌಡರಿಗೊಂದು ನ್ಯಾಯ ಬೇಡ. ಎಲ್ಲರಿಗೂ ಸರ್ಕಾರ ಒಂದೇ ರೀತಿ ನೋಡಲಿ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗಲಿ. ನಮ್ಮವರು, ಅವರ ಕಡೆಯವರು ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕೊರೋನಾ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆ

Sun Apr 26 , 2020
ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 1 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊರೋನಾ ಸೋಂಕಿನ ಪ್ರಕರಣ ಸಂಬಂಧ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 47 ವರ್ಷದ ಮಹಿಳೆಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial