ಕೊಲೆ ಪ್ರಕರದಲ್ಲಿ ಸಾಕ್ಷಿಯಾದ ಅರಗಿಣಿ

ಅರ್ಜೆಂಟೀನಾ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಿಳಿಯ ಮಾತನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. 46 ವರ್ಷದ ಎಲಿಜಬೆತ್ ಎಂಬ ಮಹಿಳೆ 2018ರ ಡಿಸೆಂಬರ್‌ನಲ್ಲಿ ಕೊಲೆಯಾಗಿದ್ದರು. ಅಪರಾಧ ಸ್ಥಳವನ್ನು ಹುಡುಕುತ್ತಿದ್ದ ಪೊಲೀಸರಿಗೆ ಅವರ ಮನೆಯಲ್ಲಿದ್ದ ಗಿಳಿಯ ಮಾತು ಸುಳಿವೊಂದನ್ನು ನೀಡಿತ್ತು. ಗಿಳಿಯು ತನ್ನ ಮಾಲೀಕರ ಕೊನೆಯ ಮಾತುಗಳನ್ನು ಪುನರಾವರ್ತಿಸುತ್ತಿತ್ತು. ಇದನ್ನು ಪೊಲೀಸರು ನಂಬಿದ್ದಾರೆ.‌ ಜತೆಗೆ ನೆರೆ ಮನೆಯವರೂ ಸಹ ಗಿಳಿಯ ಮಾತನ್ನು ಪುನರುಚ್ಛರಿಸಿದ್ದಾರೆ. At, no, pot favour.. ಎಂದು ಗಿಳಿ ಉಲ್ಲೇಖಿಸಿತ್ತಂತೆ. ಎಲಿಜಬೆತ್ ಅವರು ತಮ್ಮ‌ಮನೆಯಲ್ಲಿ ಮೂವರಿಗೆ ಒಂದು ಕೊಠಡಿ ಬಾಡಿಗೆ ನೀಡಿದ್ದರಂತೆ.‌ ಈ ರೂಮ್ ಮೇಟ್ ಗಳನ್ನು ಪೊಲೀಸರು ಬಂಧಿಸಿದ್ದರು. ವಿಶೇಷವೆಂದರೆ ಗಿಳಿಯ ಸಾಕ್ಷ್ಯವನ್ನು ಪ್ರಕರಣದ ಕಡತದಲ್ಲಿ ಪ್ರಾಸಿಕ್ಯೂಟರ್ ದಾಖಲು ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಎಲ್ ಪಿ ಜಿ ಗ್ರಾಹಕರಿಗೆ ಸಿಹಿಸುದ್ದಿ

Wed May 27 , 2020
ಭಾರತ್ ಪೆಟ್ರೋಲಿಯಂ ಕರ‍್ಪೊರೇಶನ್ ಲಿಮಿಟೆಡ್, ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಬಿಪಿಸಿಎಲ್ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಎಲ್ಪಿಜಿ ಬುಕ್ ಮಾಡಲು ಸಾಧ್ಯವಾಗುತ್ತದೆ. ದೇಶಾದ್ಯಂತ ಇರುವ ಗ್ರಾಹಕರು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಎಲ್ಲಿಂದಲಾದರೂ ಬುಕ್ ಮಾಡಬಹುದು ಎಂದು ಬಿಪಿಸಿಎಲ್ ತಿಳಿಸಿದೆ. ಕಂಪನಿಯ ಪ್ರಕಾರ, ವಾಟ್ಸಾಪ್ ನಲ್ಲಿ ಬಿಪಿಸಿಎಲ್ ಸ್ಮರ‍್ಟ್ಲೈನ್ ಸಂಖ್ಯೆ ೧೮೦೦೨೨೪೩೪೪ ಇದರ ಮೂಲಕ ಬುಕ್ ಮಾಡಬಹುದೆಂದು […]

Advertisement

Wordpress Social Share Plugin powered by Ultimatelysocial