ಕೋಮಾ ಸ್ಥಿತಿಯಲ್ಲೂ ದೇಹದಾನ ಮಾಡಿ ಮಾನವೀಯತೆ

ನಿಲೋಗಪುರ ಗ್ರಾಮದ ಯುವಕ ಒಂದು ವರ್ಷ ದಿಂದ ಕೋಮಾ ಸ್ಥಿತಿಯಲ್ಲಿದ್ದಾನೆ. ಹೌದು ಕೊಪ್ಪಳ ತಾಲೂಕಿನ ನಿಲೋಗಪುರ ಗ್ರಾಮದ ವೆಂಕಟೇಶ್ ಎಂಬ ಯುವಕ ಕಳೆದ ವರ್ಷ ಆಂಜನೇಯ ಜಾತ್ರೆಯ ವೇಳೆ ದೇವಸ್ಥಾನ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಜೀವನದ ಕನಸುಗಳನ್ನು ಸುಂದರಗೊಳಿಸುವ ಧಾವಂತದಲ್ಲಿರುವಾಗಲೇ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಇವತ್ತಿಗೂ ಕೋಮಾ ಸ್ಥಿತಿಯಲ್ಲಿದ್ದಾನೆ. ಇರುವ ಒಬ್ಬ ಮಗನ ಕೋಮಾ ಸ್ಥಿತಿಯಲ್ಲಿ ಕಳೆದ ಒಂದು ವರ್ಷದಿಂದ ಆರೈಕೆ ಮಾಡುತ್ತಾ ತಂದೆ ತಾಯಿ ಪ್ರತಿ ದಿನ ನೋವು ನು೦ಗಿ ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯ ಯುವಕರು ಪ್ರತಿದಿನ ಸಂಜೆ ಮನೆಗೆ ಬಂದು ವೆಂಕಟೇಶ್ ಗೆ ಮಸಾಜ್ ಮಾಡುವ ಮುಖಾಂತರ ಮಾನವೀಯತೆ ಮೆರೆಯುತ್ತಿದ್ದಾರೆ. ಈಗಾಗಲೇ ಹೊಲ ಮಾರಿ ಸರಿಸುಮಾರು ೧೬ ಲಕ್ಷದಷ್ಟು ವ್ಯಯಿಸಿದ ಇವರಿಗೆ ಇನ್ನು ಮುಂದಿನ ಚಿಕಿತ್ಸೆಗಾಗಿ ಸಹೃದಯಿ ದಾನಿಗಳ ಆಸರೆಯನ್ನು ಪಡೆಯದೆ ನಿರ್ವಾಹವಿಲ್ಲ.ರೋಗದ ಸಮರ್ಪಕವಾದ ಚಿಕಿತ್ಸೆ ನೀಡಬೇಕಾದರೆ ಇನ್ನೂ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು. ನಮ್ಮಂತೆಯೇ ಸಂತಸದಿAದ ನಲಿದಾಡಬೇಕಿದ್ದ ಯುವಕನ ಚಿಕಿತ್ಸೆಗೆ ಸಹೃದಯಿಗಳು ಮಾನವೀಯ ಹಸ್ತವನ್ನು ಚಾಚಬೇಕಾಗಿದೆ. ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಫೋನ್ ಪೇ ಅಥವಾ ಗೂಗಲ್ ಪೇ ೮೯೭೦೫೫೬೬೮೬ ಹೆಸರು ಚೈತ್ರಾ ಜಗದೀಶ್ ರಡ್ಡಿ ಅವರ ನಂಬರ್ ಗೇ ಹಣ ವರ್ಗಾಯಿಸಬಹುದು.

Please follow and like us:

Leave a Reply

Your email address will not be published. Required fields are marked *

Next Post

೫೮ನೇ ವಸಂತಕ್ಕೆ ಕಾಲಿಟ್ಟ ಕರುನಾಡ ಚಕ್ರವರ್ತಿ

Sun Jul 12 , 2020
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ೫೮ನೇ ವಸಂತಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಅವರಿಗರ ಚಿತ್ರರಂಗದ ಗಣ್ಯರು, ಹಿತೈಷಿಗಳು, ಅಭಿಮಾನಿಗಳ ಬಳಗ ಶುಭಾಷಯದ ಮಾಹಾಪೂರವನ್ನೆ ಹರಿಸಿದೆ. ಇದೆ ಸಂದAರ್ಭದಲ್ಲಿ ಭಜರಂಗಿ ೨ ಚಿತ್ರತಂಡದಿAದ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶಿವಣ್ಣನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನ ನೀಡಿದೆ. ಕೊರೋನಾ ಕಾರಣದಿಂದಾಗಿ ಶಿವರಾಜ್ ಕುಮಾರ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು ಆದ ಕಾರಣ ಮನೆಯಲ್ಲಿಯೇ ಇದ್ದು ಕುಟುಂಬದ ಜೊತೆ ಸರಲವಾಗಿ […]

Advertisement

Wordpress Social Share Plugin powered by Ultimatelysocial