ಕೋವಿಡ್-೧೯ ಆತಂಕದಿAದ ನಟ ದೊಡ್ಡಣ್ಣ ಹೋಮ್ ಕ್ವಾರಂಟೈನ್

ಕೋವಿಡ್ ೧೯ ಸೋಂಕಿನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಈ ಭಯ ಸ್ಯಾಂಡಲ್‌ವುಡ್ ಮಂದಿಯನ್ನೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೇ ಸಂಸದೆ ಸುಮಲತಾ ಅವರಿಗೆ ಕೋವಿಡ್ ೧೯ ಪಾಸಿಟಿವ್ ಬಂದಿದ್ದು, ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಕೂಡ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣನಿಗೂ ಕೋವಿಡ್ ೧೯ ಆತಂಕ ಶುರುವಾಗಿದೆ. ಹೌದು..! ದೊಡ್ಡಣ್ಣ ಸಹ ಸುಮಲತಾ, ಹಾಗೂ ರಾಕ್‌ಲೈನ್ ವೆಂಕಟೇಶ್ ಸಂಪರ್ಕದಲ್ಲಿದ್ದು, ಈ ಹಿಂದೆ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಅವರು ಸ್ವಯಂ ಪ್ರೇರಿತರಾಗಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಕಲಾವಿದರ ಸಂಘದ ಖಜಾಂಚಿಯಾಗಿರುವುದರಿAದ ಮನೆಯಿಂದಲೇ ಸಂಘದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಿಂದ ಬರುವ ವ್ಯಕ್ತಿಗಳ ಬಗ್ಗೆ ಮುನ್ನೆಚ್ಚರ

Thu Jul 9 , 2020
ಬೆಂಗಳೂರು ಹಾಗೂ ಹೊರ ರಾಜ್ಯದಿಂದ ದಾವಣಗೆರೆಗೆ ಬರುವ ವ್ಯಕ್ತಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಂದು ದಿನಕ್ಕೆ ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ, ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಬರುವವರ ಬಗ್ಗೆ ಆತಂಕ ಹೆಚ್ಚಾಗಿದೆ ಎಂದಿದ್ದಾರೆ. ಹಾಗೂ ಈ ಬಗ್ಗೆ ಪ್ರತಿಯೊಂದು ಹಳ್ಳಿಯಲ್ಲಿ ಡಂಗುರ ಸಾರಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ. ದಾವಣಗೆರೆಗೆ ಬೆಂಗಳೂರು ಹಾಗೂ ಹೊರ ರಾಜ್ಯದ […]

Advertisement

Wordpress Social Share Plugin powered by Ultimatelysocial