ಕ್ರಿಕೆಟ್‌ನಲ್ಲಿ 12ನೇ ವಸಂತ ಪೂರೈಸಿದ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ 1000ನೇ ಪೋಸ್ಟ್ ಅನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 12 ವರ್ಷಗಳ ಕಾಲ ಆಡುತ್ತ ಕಲಿತಿರುವೆ ಎಂದು   ಅವರು ಈ ಪೋಸ್ಟ್ ಮೂಲಕ ತಿಳಿಸಿದ್ದು, ತಮ್ಮೊಂದಿಗೆ ತಾವೇ ಬ್ಯಾಟಿಂಗ್ ಮಾಡುತ್ತಿರುವ ರೀತಿಯಲ್ಲಿ ತಮ್ಮದೇ 2 ಚಿತ್ರಗಳು ಎಡಿಟ್ ಮಾಡಿ ಪ್ರಕಟಿಸುವ ಮೂಲಕ ಗಮನಸೆಳೆದಿದ್ದಾರೆ. ‘2008-2020ರ  ಈ ದಾರಿಯಲ್ಲಿ ಸಾಕಷ್ಟು ಕಲಿತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಇದು ನನ್ನ 1000ನೇ ಪೋಸ್ಟ್​’ ಎಂದು ವಿರಾಟ್​ ಕೊಹ್ಲಿ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಇದರಲ್ಲಿ ಅವರು 2008ರಲ್ಲಿ ತಾವು ಪದಾರ್ಪಣೆ ಮಾಡಿದ ಸಮಯದ ಬ್ಯಾಟಿಂಗ್​ ಚಿತ್ರ ಮತ್ತು ಈಗ ಟೀಮ್​ ಇಂಡಿಯಾ ನಾಯಕರಾಗಿರುವ ಸಮಯದ ಬ್ಯಾಟಿಂಗ್​ ಚಿತ್ರಗಳನ್ನು ವಿಲೀನ ಮಾಡಿದ್ದಾರೆ. ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಸರ್ವಾಧಿಕ 69.4 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಭಾರತೀಯರಾಗಿದ್ದಾರೆ. ಇನ್ ಸ್ಟಾಗ್ರಾಂನ ವಾಣಿಜ್ಯ ಪೋಸ್ಟ್ ಗಳ ಮೂಲಕ ಅತ್ಯಧಿಕ ಹಣ ಸಂಪಾದನೆ ಮಾಡುತ್ತಿರುವ ವಿಶ್ವ ಅಗ್ರ 10 ಕ್ರೀಡಾಪಟುಗಳ ಪಟ್ಟಿಯಲ್ಲಿ ಅವರು ಏಕೈಕ ಕ್ರಿಕೆಟಿಗರಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ ಚೀನಾ

Thu Jul 23 , 2020
ಪದೇ ಪದೇ ಚೀನಾ ಗಡಿಯಲ್ಲಿ ಖ್ಯಾತೆ ತಗೆಯುವ ಹುನ್ನಾರವನ್ನ ನಡೆಸುತ್ತಲೇ ಇದೆ. ಭೀಕರ ಸಂಘರ್ಷದ ನಂತರ ಉಭಯ ಸೇನಾ ಪಡೆಗಳು ನಿಯಂತ್ರಣ ರೇಖೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು ಚೀನಾ ಇನ್ನು ಸಹ ರೇಖೆಯಿಂದ ದೂರ ಸರಿದಿಲ್ಲ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಸುಮಾರು ೪೦ ಸಾವಿರ ಚೀನಿ ಸೈನಿಕರು ಲಡಾಖ್‌ನ ಪೂರ್ವಭಾಗದಲ್ಲಿದ್ದಾರೆ ಎನ್ನಲಾಗ್ತಾಯಿದ್ದು, ಅವರ ಬಳಿ ಅಪಾರ ಪ್ರಮಾಣದ ಶಸ್ತಾçಸ್ತçಗಳಿವೆ ಎಂದು ತಿಳಿದಿದೆ. Please follow and like […]

Advertisement

Wordpress Social Share Plugin powered by Ultimatelysocial