‘ಕ್ಷೀರಭಾಗ್ಯ’ ಎನ್ನುವ ಬದಲು ‘ಶೀಲಭಾಗ್ಯ’ ನೀಡಿದ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್

 

ಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಜಾಧ್ವನಿ  ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಜಮೀರ್​​ ಅಹ್ಮದ್, ಸಿದ್ದರಾಮಯ್ಯ  ಅವರ ಸರ್ಕಾರ ಭಾಗ್ಯಗಳನ್ನು ಸ್ಮರಿಸುವ ಸಮಯದಲ್ಲಿ ಎಡವಟ್ಟು ಮಾಡಿದ್ದಾರೆ.

‘ಕ್ಷೀರಭಾಗ್ಯ’  ಎನ್ನುವ ಬದಲು ‘ಶೀಲಭಾಗ್ಯ’ ನೀಡಿದ ಸಿದ್ದರಾಮಯ್ಯ ಎಂದು ಜಮೀರ್ ಹೇಳಿದ್ದು, ಶಾಸಕರ ಹೇಳಿಕೆ ಕಂಡ ಕಾಂಗ್ರೆಸ್ ​ ಕಾರ್ಯರ್ತರು ಹಾಗೂ ವೇದಿಕೆ ಮೇಲಿದ್ದ ಮುಖಂಡರು ಕ್ಷಣ ಕಾಲ ಕಕ್ಕಾಬಿಕ್ಕಿಯಾಗಿದ್ದಾರೆ.

ನಾವು ಮಾಡಿದ ಕೆಲಸದ ಮೇಲೆ ಮತ ಕೇಳುತ್ತೇವೆ

ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಕಲಬುರಗಿ ಜನರಿಗೆ ಜನರಿಗೆ ಬಂದು ಕಡಿಮೆ ಅನಿಸುತ್ತಿದೆ. ಅದು ನಮ್ಮ ನಾಯಕ್ ಖಮರ್ ಉಲ್ ಇಸ್ಲಾಂ ಅವರ ಕೊರತೆ ಇವತ್ತು ನಮಗೆ ಕಾಣುತ್ತಿದೆ. ಬಿಜೆಪಿ ಅವರು ಯಾವತ್ತೂ ಅಭಿವೃದ್ದಿ ಬಗ್ಗೆ ಮಾತಾಡಲ್ಲ, ನಾವು ಮಾಡಿದ ಕೆಲಸದ ಮೇಲೆ ಮತ ಕೇಳುತ್ತೇವೆ. ಅವರು ಮಾತ್ರ ಭಾವನೆಗಳ ಮೇಲೆ ಮತ ಕೇಳುತ್ತಾರೆ.

ಪ್ರಧಾನಿ ಮೋದಿ ಆಚೆ ದಿನ್ ಆಯೆಂಗೆ ಅಂತಾರೆ, ಆದರೆ ಇಲ್ಲಿವರೆಗೂ ಅದು ಯಾವುದು ಬಂದಿಲ್ಲ. ಬಾರಿ ಬೆಲೆ ಏರಿಕೆ ಬರೆ ಕೊಟ್ಟಿದ್ದಾರೆ. ನಮಗೆ ನಿಮ್ಮ ಅಚೆ ದಿನ್ ಬೇಡ ಸ್ವಾಮಿ, ನಮಗೆ ಮೊದಲಿನ ಅಚೇ ದಿನ್ ಸಾಕು ಎಂದು ವಾಗ್ದಾಳಿ ನಡೆಸಿದರು.

ಇನ್ನು ಸಿದ್ದರಾಮಯ್ಯ ಅವರು ಮಾತನಾಡಿ, ಎರಡನೇ ಹಂತಹ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ. ಶರಣರ ನಾಡು ಬಸವಕಲ್ಯಾಣದಿಂದ ಆರಂಭ ಮಾಡಿದ್ದೇವೆ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಬಸವಾದಿ ಶರಣರು ನುಡಿದಂತೆ ನಡೆದರು.

ಅದರಂತೆ ಕಾಂಗ್ರೆಸ್ ಪಕ್ಷ ಕೂಡ ನುಡಿದಂತೆ ನಡೆದ ಪಕ್ಷ. ಅದರಂತೆ ನಮಗೆ ಈ ಹಿಂದೆ ಅವಕಾಶ ಕೊಟ್ಟಿದ್ದರು. ಹಾಗಾಗಿ 5 ವರ್ಷ ಅವಕಾಶ ಸಿಕ್ಕಿದ್ದು ದೇವರಾಜ್ ಅರಸರ ನಂತರ ನನಗೆ ಅವಕಾಶ ಸಿಕ್ಕಿತ್ತು. ಅವಕಾಶ ಸಿಕ್ಕಾಗ ಕೊಟ್ಟ ಎಲ್ಲಾ ಭರವಸೆ ಇಡೆರಿಸಿದ್ದೇವೆ. ಕೊಟ್ಟ ಭರವಸೆ ಇಡೇರಿಸದಿದ್ದರೆ ಜನರಿಗೆ ದ್ರೋಹ ಮಾಡಿದಂತೆ ಎಂದರು.

ರಾಜ್ಯಪಾಲರ ಕೈಯಲ್ಲಿ ಬಿಜೆಪಿ ಸುಳ್ಳು ಭಾಷಣ ಮಾಡಿಸಿದೆ

ಬಿಜೆಪಿ ಅವರು ಹೇಳೋದು ಒಂದು ಮಾಡೋದು ಒಂದು. ಯಾವತ್ತೂ ಅವರು ನುಡಿದಂತೆ ನಡೆದಿಲ್ಲ. ಯಡಿಯೂರಪ್ಪ ಅವರು 600 ಭರವಸೆ ಕೊಟ್ಟಿದ್ದರು. ಆದರೆ ಅದರಲ್ಲಿ ಈಡೇರಿಸಿದ್ದು, ಕೇವಲ 50 ಭರವಸೆ ಅಷ್ಟೇ. ಬಿಜೆಪಿ ಅವರು ವಚನ ಭ್ರಷ್ಟರು, ಬಿಜೆಪಿ ಅವರು ರಾಜ್ಯಪಾಲರು ಬಜೆಟ್ ಬಗ್ಗೆ ಭಾಷಣ ಮಾಡಿದ್ದರು.

ರಾಜ್ಯಪಾಲರು ಬಿಜೆಪಿ ಬರೆದುಕೊಟ್ಟ ಭಾಷಣ ದ್ದಾರೆ. ರಾಜ್ಯಪಾಲರ ಬಾಯಲ್ಲಿ ಬಿಜೆಪಿ ಅವರು ಬರೀ ಸುಳ್ಳು ಹೇಳಿಸಿದ್ದಾರೆ. ಒಂದೇ ಒಂದು ಇವರು ಬಡವರಿಗೆ ಮನೆ ಕೊಟ್ಟಿಲ್ಲ. ನಾವು ಕೊಟ್ಟಿದ್ದ ಮನೆಗಳ ಬಿಲ್ ಕೊಟ್ಟಿಲ್ಲ. ರಾಜ್ಯಪಾಲರ ಬಾಯಲ್ಲಿ ಮನೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದರು.

ಇನ್ನು, ಕಲಬುರಗಿಯ ಲ್ಲಿ ಕಾಂಗ್ರೆಸ್ ಸಮಾವೇಶ ಆರಂಭವಾಗಿ ಮುಗಿಯುವ ಸಮಯದ ಬಂದರೂ ಕಾರ್ಯಕರ್ತರು ಸಿದ್ದರಾಮಯ್ಯ ಬೃಹತ್ ಕಟೌಟ್​ ನಿಲ್ಲಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು. ಕಲಬುರಗಿಯ ಏನ್ ವಿ ಮೈದಾನದಲ್ಲಿ ಇಂದಿನ ಪ್ರಜಾಧ್ವನಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಿಮೆಂಟ್ ದರ ಶೇಕಡ 10 ರಷ್ಟು ಕಡಿಮೆಯಾಗಲಿದೆ.

Sat Feb 11 , 2023
    ನವದೆಹಲಿ: ಜಿ.ಎಸ್‌.ಟಿ. ಮಂಡಳಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು, ಸಿಮೆಂಟ್ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ. ಮಂಡಳಿಯ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡಲ್ಲಿ ಸಿಮೆಂಟ್ ದರ ಶೇಕಡ 10 ರಷ್ಟು ಕಡಿಮೆಯಾಗಲಿದೆ. ಪ್ರತಿ ಚೀಲಕ್ಕೆ 35 ರಿಂದ 40 ರೂಪಾಯಿ ಕಡಿಮೆ ಆಗಬಹುದು ಎಂದು ಹೇಳಲಾಗಿದೆ. ಅತ್ಯಂತ ಗರಿಷ್ಠ ಜಿ.ಎಸ್.ಟಿ. ತೆರಿಗೆ ಸ್ಲ್ಯಾಬ್ ಶೇಕಡ 28ರ ದರದ ಸರಕುಗಳ ಪಟ್ಟಿಯಲ್ಲಿ […]

Advertisement

Wordpress Social Share Plugin powered by Ultimatelysocial