ಖಾಸಗಿ ಆಸ್ಪತ್ರೆಗಳ ಕೊರೊನಾ ವೈರಸ್ ಪರೀಕ್ಷಾ ದರ ಇಳಿಕೆ

ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ವೈರಸ್ ಪರೀಕ್ಷಾ ದರವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಒಂದು ಕೊರೊನಾ ಪರೀಕ್ಷೆಗೆ 4 ಸಾವಿರಕ್ಕಿಂತಲೂ ಅಧಿಕ ಹಣ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳು ಈಗ ಗರಿಷ್ಠ 3 ಸಾವಿರ ರೂ. ಪಡೆಯುವಂತೆ ಸರ್ಕಾರ ದರವನ್ನು ನಿಗದಿಪಡಿಸಿದೆ. ಸರ್ಕಾರದಿಂದ ಪರೀಕ್ಷೆಗೆ ಶಿಫಾರಸು ಪಡೆದು ಹೋದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ 2 ಸಾವಿರ ರೂ. ಮಾತ್ರ ಚಾರ್ಜ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿ ಹೊಸದಾಗಿ 16 ಆರ್ ಟಿಪಿಸಿಆರ್ ಮತ್ತು 15 ಆಟೋಮೇಟೆಡ್ ಆರ್‌ಎನ್ಎ ಎಕ್ಸ್ ಟ್ರಾಕ್ಷನ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

3 ನೇ ಹಂತದ ನಗರೋತ್ಥಾನ ಕಾಮಗಾರಿ ಚಾಲನೆ 

Wed Jul 22 , 2020
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದಲ್ಲಿ 3ನೇ ಹಂತದ ನಗರೋತ್ಥಾನ ಕಾಮಗಾರಿ ಯನ್ನ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾತಿ ದರಗಿ ಚಾಲನೆ ನೀಡಿದರು.ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಮರು ಚಾಲನೆ ನೀಡುವ ಮೂಲಕ ಸ್ವಾತಿ ದರಗಿಯವರು ದಿಟ್ಟ ಹೆಜ್ಜೆಯನ್ನಇಟ್ಟಿದ್ದಾರೆ. ರಸ್ತೆಯ ಮೇಲೆ ಒತ್ತುವರಿ ಮಾಡಿದಂತಹ ಕಟ್ಟೆ , ಕಾಂಪೋಂಡ್ ಗಳನ್ನು ತೆರವು ಗೊಳಿಸಲಾಯಿತು.ಸಾರ್ವಜನಿಕರು ಕಾಮಗಾರಿಯನ್ನು ಅಡ್ಡಿಪಡಿಸಿದಾಗ ಅವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಹಿಳಾ ಅಧಿಕಾರಿಯ ಕಾರ್ಯ ವೈಖರಿಯನ್ನು […]

Advertisement

Wordpress Social Share Plugin powered by Ultimatelysocial