ಗಡಿಭಾಗದಲ್ಲಿ ಕೊರೊನಾತಂಕ

ಕೊರೊನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅತ್ತಿಬೆಲೆ ಬಾರ್ಡರ್ ನಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ  ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಎಲ್ಲಾ ವಾಹನಗಳಿಗೆ ಅನುಮತಿ ನೀಡುವುದಿಲ್ಲ ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ವಾಹನಗಳಿಗೆ ಇ-ಪಾಸ್ ಇದ್ರೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ತುರ್ತು ಸಂಧರ್ಭಗಳಿಗೆ ಅನುಮತಿ ನೀಡಲಾಗುತ್ತದೆ. ಇನ್ನೂ ತರಕಾರಿ ವಾಹನಗಳಿಗೆ ಕಂಪನಿ ವರ್ಕರ್ಸ್ ಗಳಿಗೆ ಐಡಿ ಕಾರ್ಡ್ ಗಳು ಇದ್ದಾರೆ ಮಾತ್ರ ಅನುಮತಿ ನೀಡಲಾಗಿದೆ.ಕೆಲ ಸಾರ್ವಜನಿಕರು ನಕಲು ಐಡಿಗಳನ್ನು ಸೃಷ್ಟಿಸಿ ಸುಖಾ-ಸುಮ್ಮನೆ ಓಡಾಡುತ್ತಿದ್ದಾರೆ ಎಂದು ಈ ನಿಯಮವನ್ನು ತಂದಿರುವುದಾಗಿ ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ನಿಯಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಸಿಸ್ಟೆಂಟ್ ಕಮಿಷನರ್ ಡಾಕ್ಟರ್ ಶಿವಣ್ಣ ಭೇಟಿ ನೀಡಿದ್ದಾರೆ

 

Please follow and like us:

Leave a Reply

Your email address will not be published. Required fields are marked *

Next Post

ಕೆಂಪೇಗೌಡರಿಗೆ ದೇವೆಗೌಡರ ನಮನ

Sat Jun 27 , 2020
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಿದ್ದಾರೆ.ಕೆಂಪೇ ಗೌಡರು ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿ, ಕೋಟೆ- ಪೇಟೆಗಳನ್ನು ನಿರ್ಮಿಸಿ,ಕೆರೆಕಟ್ಟೆಗಳನ್ನು ಕಟ್ಟಿಸಿ, ನಾಡಿನ ಜನರಮಾನಸಿನಲ್ಲಿ ಸದಾ ಅಚ್ಚಳಿಯದೆ ಉಳಿದಿರುವ ಬೆಂಗಳೂರಿನ ನಿರ್ಮಾತೃ ಸಮರ ವೀರ ನಾಡಪ್ರಭು ಕೆಂಪೇಗೌಡರ ಜಯಂತಿಯಾದ ಇಂದು ಅವರಿಗೆ ನನ್ನ ಗೌರವ ನಮನವನ್ನು ಸಲ್ಲಿಸುತ್ತೇನೆ ಎಂದು ಗೌಡರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು ಕೂಡ ನಾಡಪ್ರಭು […]

Advertisement

Wordpress Social Share Plugin powered by Ultimatelysocial