ಗರ್ಭಿಣಿ ಮಹಿಳೆ ಹೊಟ್ಟೆ ನೋಡಿ ಶಾಕ್:

 

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ತಾಯಿ ಮತ್ತು ಮಗುವಿನ ನಡುವಿನ ಸಂಬಂಧವೂ ಅತ್ಯಂತ ಅಮೂಲ್ಯ ಸಂಬಂಧವಾಗಿದ್ದು, ಪ್ರತಿಯೊಬ್ಬ ತಾಯಿಯೂ ಮಗುವನ್ನ 9 ತಿಂಗಳ ಕಾಲ ಗರ್ಭದಲ್ಲಿರಿಸುತ್ತಾಳೆ ಮತ್ತು ಅನೇಕ ಅಸಹನೀಯ ನೋವುಗಳನ್ನ ಸಹಿಸುತ್ತಾಳೆ.

ಇತ್ತೀಚೆಗೆ, ಅಂತಹ ಒಬ್ಬ ತಾಯಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆಯನ್ನ ಪಡೆಯುತ್ತಿದ್ದಾರೆ. ಈ ಮಹಿಳೆ ತನ್ನ ಬೆಳೆದ ಹೊಟ್ಟೆಯ ಚಿತ್ರ ಅಂದರೆ ಬೇಬಿ ಬಂಪ್ಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರ ಮೇಲೆ ಜನ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅಂತಹ ದೊಡ್ಡ ಬೇಬಿ-ಬಂಪ್ ಕಂಡು ಅಚ್ಚರಿ ಪಟ್ಟರೇ, ಇನ್ನು ಹಲವರು ಇಷ್ಟು ದೊಡ್ಡ ಬೇಬಿ ಬಂಪ್ʼಗೆ ಕಾರಣವೇನು? ಪಾಪ ಮಹಿಳೆಗೆ ಎಷ್ಟು ತೊಂದರೆಯಾಗೋರ್ದು ಎಂದು ಅನುಕಂಪ ವ್ಯಕ್ತ ಪಡಿಸ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹೊಗಳಲ್ಪಡುತ್ತಿರುವ ಮಹಿಳೆಯ ಹೆಸರು ಮೈಕೆಲ್ಲಾ ಮಿಯರ್-ಮೊರ್ಸಿ ಅಂತಾ. ಅವ್ರು ತಮ್ಮ ಗರ್ಭಾವಸ್ಥೆಯಲ್ಲಿ ಬೇಬಿ ಬಂಪ್ʼನ ಫೋಟೋಗಳು ಮತ್ತು ವೀಡಿಯೊಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 35 ವಾರಗಳ ಕಾಲ ಗರ್ಭದಲ್ಲಿರಿಸಿ ನಂತ್ರ ಶಸ್ತ್ರಚಿಕಿತ್ಸೆಯ ಮೂಲಕ 3 ಶಿಶುಗಳಿಗೆ ಜನ್ಮ ನೀಡಿದ್ದಾರೆ.

ಅಂದ್ಹಾಗೆ, ಮಿಚೆಲಾಳ 3 ಮಕ್ಕಳಿಗೆ ಚಾರ್ಲ್ಸ್, ಥಿಯೋಡರ್ ಮತ್ತು ಗೇಬ್ರಿಯಲ್ ಎಂದು ಹೆಸರಿಡಲಾಗಿದೆ. ಆಕೆಗೆ ಈ ಮೊದಲು ಇಬ್ಬರು

ಹೆಣ್ಣುಮಕ್ಕಳಿದ್ದಾರೆ. ಗರ್ಭಧಾರಣೆಯ ಪ್ರಯಾಣದ ವೀಡಿಯೊಗಳು, ಫೋಟೋಗಳು ಮತ್ತು ಸ್ಟೋರಿಯನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಅವ್ರ ಅನುಯಾಯಿಗಳು ಸ್ಥಿರವಾಗಿ ಹೆಚ್ಚಿಸುತ್ತಿದ್ದಾರೆ. ಅದ್ರಂತೆ, ಸಧ್ಯ ಸುಮಾರು 2.67 ಮಿಲಿಯನ್ ಅನುಯಾಯಿಗಳನ್ನ ಹೊಂದಿದ್ದಾರೆ. ಕೆಲವು ಸಮಯದ ಹಿಂದೆ, ಮಿಚೆಲ್ ತನ್ನ ಮಕ್ಕಳಿಗೆ ಜನ್ಮ ನೀಡಿದ ನಂತ್ರ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಿಚೆಲ್ ತನ್ನ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡ ತಕ್ಷಣ, ಜನರ ಗಮನ ಆಕೆಯ ಹೊಟ್ಟೆಯ ಕಡೆಗೆ ಹೋಯಿತು. ಯಾಕಂದ್ರೆ, ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಹೊಟ್ಟೆಯು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಆದರೆ ಮಿಚೆಲಾಳ ಹೊಟ್ಟೆ ನೇರವಾಗಿ ಹೊರಮುಖವಾಗಿತ್ತು. ಮಿಚೆಲಾ ತನ್ನ ಶಸ್ತ್ರಚಿಕಿತ್ಸೆಗೆ ಒಂದು ದಿನ ಮೊದಲು ವೀಡಿಯೊವನ್ನ ಹಂಚಿಕೊಂಡಿದ್ದು, ಡ್ರೆಸ್ಸಿಂಗ್ ಗೌನ್ʼನಲ್ಲಿ ನಿಂತು ತನ್ನ ಬೇಬಿ ಬಂಪ್ ಹಿಡಿದಿದ್ದಳು.

ಶಸ್ತ್ರಚಿಕಿತ್ಸೆಯ 36 ಗಂಟೆಗಳು ಅತ್ಯಂತ ಕಷ್ಟದ ಸಮಯ ಎಂದು ಹೇಳಿದ ಅವ್ರು, ಈ ಕಠಿಣ ಪರಿಸ್ಥಿತಿಗಳ ವಿರುದ್ಧ ಹೋರಾಡಬೇಕಾಯ್ತು ಎನ್ನುವರು. ನಂತ್ರ ಅವರು ಮೂರೂ ಮಕ್ಕಳಿಗೆ ಜನ್ಮ ನೀಡಿದ್ದು, ಮೂವರೂ ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅವರು ಹಂಚಿಕೊಂಡ ವೀಡಿಯೊವನ್ನ 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ.ಇದರ ನಂತರ, ಮೈಕೆಲಾ ಅವರ ಈ ವೀಡಿಯೊವನ್ನ ಟಿಕ್-ಟೋಕರ್ ಸಹ ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Smart Phone:Vivo Y75 5G ಫೋನ್ ಭಾರತದಲ್ಲಿ ಬಿಡುಗಡೆ!

Thu Jan 27 , 2022
Vivo ವೈ-ಸರಣಿಯಲ್ಲಿ Vivo Y75 5G ಎಂದು ಕರೆಯಲ್ಪಡುವ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. ಸಾಧನವು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.44-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಪ್ರದರ್ಶನ ಫಲಕವು 20:9 ರ ಆಕಾರ ಅನುಪಾತವನ್ನು ಹೊಂದಿದೆ, 272PPI ನ ಪಿಕ್ಸೆಲ್ ಸಾಂದ್ರತೆ ಮತ್ತು ಪ್ರಮಾಣಿತ 60Hz ರಿಫ್ರೆಶ್ ದರವನ್ನು ಹೊಂದಿದೆ. ಕ್ವಾಲ್‌ಕಾಮ್‌ನ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 480 5G ಚಿಪ್‌ಸೆಟ್ ಅಡಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಪವರ್ ಮಾಡುವುದು. […]

Advertisement

Wordpress Social Share Plugin powered by Ultimatelysocial