ಗ್ರಾಮಪಂಚಾಯಿತಿ ಸ್ಥಳಾಂತರಿಸುವುದು ಬೇಡ

ಮಧುಗಿರಿ ತಾಲ್ಲೂಕಿನ ಚಿನಕವಜ್ರ ಗ್ರಾಮಪಂಚಾಯಿತಿ ಕಾರ್ಯಲಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಸಾರ್ವಜನಿಕರು  ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿಯ 14 ಜನ ಸದಸ್ಯರಿದ್ದು 3 ಜನ ಸದಸ್ಯರು ಸ್ಥಳಾಂತರಿಸುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೆಲವು ಸದಸ್ಯರು ಕಾರ್ಯಾಲಯ ಬದಲಾಯಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸಾರ್ವಜನಿಕರು ಒಪ್ಪುವುದಿಲ್ಲ ಎಂದು ಸ್ಥಳಿಯ ನಿವಾಸಿ  ಮಂಜುಳಾ ಮಾತಾನಡಿ  ಯಾವುದೇ ಕಾರಣಕ್ಕೂ ಕೂಡ ಪಂಚಾಯತಿ ಸ್ಥಳಾಂತರ ಮಾಡುವುದು ಬೇಡ  ಸ್ಥಳಾಂತರಿಸುವ ಜಾಗವು ಊರಿನ ಹೊರಭಾಗದಲ್ಲಿದ್ದು, ಹುಡುಗಿಯರು ಹಾಗೂ ವೃದ್ಧರು ಓಡಾಡಲು ಕಷ್ಟವಾಗುತ್ತದೆ. ಸುಮಾರು 3 ವರ್ಷಗಳ ಹಿಂದೆ ಇದೆ ಬದಯಾಯಿಸುತ್ತಿರುವ ಪಂಚಾಯಿತಿ ಜಾಗದಲ್ಲಿ  ಊರಿನ ಗ್ರಾಮಸ್ಥೆ ಹುಡುಗಿಗೆ ತೊಂದರೆ ಯಾಗಿದ್ದು, ಯಾವುದೇ ಕಾರಣಕ್ಕೂ ಬದಲಾಯಿಸಲು ಬಿಡುವುದಿಲ್ಲ ಎಂದಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದರು.

 

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದಲ್ಲಿ ೩ ಕೊರೊನಾ ಪಾಸಿಟಿವ್

Wed Jul 1 , 2020
ಕೋಲಾರ ಜಿಲೆಯಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ದೃಡವಾಗಿದೆ. ಕೆಜಿಎಫ್ 1, ಬಂಗಾರಪೇಟೆ 1,  ಕೋಲಾರದಲ್ಲಿ ಒಬ್ಬರಲ್ಲಿ ಕರೋನಾ ಪಾಸಿಟಿವ್, ಸೋಂಕಿತರಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮತ್ತೊಬ್ಬರಿಗೆ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ , ಸೋಂಕಿತರ ಏರಿಯಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಜೋನ್ ಘೋಷಣೆ. ಸೋಂಕಿತರ ಸಂರ್ಪಕದಲ್ಲಿದ್ದವರಿಗೆ ಕ್ವಾರಂಟೈನ್  ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ 122ಕ್ಕೆ ಏರಿಕೆಯಾದ ಕೊರೊನಾ  ಸೊಂಕಿತರು, ಒಟ್ಟು ಸಕ್ರಿಯ ಪ್ರಕರಣಗಳು  63, ಈ ಪೈಕಿ ಒಟ್ಟು […]

Advertisement

Wordpress Social Share Plugin powered by Ultimatelysocial