ಗ್ಲಾಮರಸ್ ನಟಿ ನಿಧಿ ಕ್ರಿಕೆಟಿಗನ ಜೊತೆ ಡೇಟಿಂಗ್?

ಸಿನಿಮಾಗಳಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ನಟಿ ಲಾಕ್‌ಡೌನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಟೈಂ ಪಾಸ್ ಮಾಡ್ತಿದಾರೆ. ಈ ವೇಳೆ ತಮ್ಮ ವ್ಯಯಕ್ತಿಕ ವಿಷಯಗಳ ಬಗ್ಗೆಯೂ ತುಟಿ ಬಿಚ್ಚಿದ್ದಾರೆ.
ತಮ್ಮ ಹಾಟ್‌ಪೋಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುವ ನಿಧಿ ಇನ್ಸಾ÷್ಟಗ್ರಾಂನಲ್ಲಿ ೫ಮಿಲಿಯನ್ ಫಾಲೋವರ್ಸ್ನ್ನು ಹೊಂದಿದ್ದಾರೆ. ಅಷ್ಟೊಂದು ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಗ್ಲಾಮರಸ್ ನಟಿ ಕ್ರಿಕೆಟಿಗ ಕೆ.ಎಲ್. ರಾಹುಲ್ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಅನ್ನೋ ರೂಮರ್ ಹಬ್ಬಿತ್ತು.  ಆ ಪ್ರಶ್ನೆಗೆ ಉತ್ತರಿಸಿದ ನಿಧಿ ‘ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಡೇಟಿಂಗ್ ವಿಷಯದ ಬಗ್ಗೆ ಈ ಇಬ್ಬರೂ ಸೆಲೆಬ್ರಿಟಿಗಳು ಅಲ್ಲಗಳೆದಿದ್ದು ಅದು ಗಾಳಿಸುದ್ದಿ ಅದಕ್ಕೆ ಕಿವಿಗೋಡಬೇಡಿ ಎಂದು ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.  ಸದ್ಯ ಕನ್ನಡ ಜೇಮ್ಸ್ ಸಿನಿಮಾದಲ್ಲಿ ನಟಿಸುತ್ತಿರುವ ನಿಧಿ, ತೆಲುಗಿನಲ್ಲಿ ರಮೇಶ್ ವರ್ಮಾ ಹಾಗೂ ಅಶೋಕ್ ಗಲ್ಲಾ ನಿರ್ದೇಶನದ ರವಿತೇಜ ಅವರ ಮುಂದಿನ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ವಿರುದ್ಧ ಸಚಿವ ಡಾ.ಸುಧಾಕರ್ ಕಿಡಿ

Tue May 5 , 2020
ಬೆಂಗಳೂರು : ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಟ್ವೀಟ್  ಮಾಡಿರುವ ಅವರು, “ಕಾಂಗ್ರೆಸ್ ನವು ಕಾರ್ಮಿಕರ ಬಸ್ ಚಾರ್ಜ್ , ಟ್ರೈನ್ ಚಾರ್ಜ್ ಕೊಡ್ತೀವಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಜಾಹೀರಾತನ್ನೂ ಸಹ ಕೊಟ್ಟಿದ್ದಾರೆ. ಜಾಹೀರಾತು ನೋಡಿದ್ರೆ ಇದು ಬಯಲುನಾಟಕ ಎಂದೆನಿಸುತ್ತದೆ. ಯಾರಿಗೆ ಕೊಡಬೇಕೋ ಅವರಿಗೆ ಹಣ ಕೊಡಲಿ. ಅದು ಬಿಟ್ಟು ಊರೆಲ್ಲಾ […]

Advertisement

Wordpress Social Share Plugin powered by Ultimatelysocial