ಚಾಹಲ್ ಹೆಸರಿಗೆ ವಿಶೇಷ ದಾಖಲೆ : ದುಬೈ ಅಂಗಳದಲ್ಲಿ ದಾಖಲೆ ವೀರನಾದ ಚಾಹಲ್

ಆರ್‌ಸಿಬಿ  ತಂಡದ ಲೆಗ್ ಸ್ಪಿನ್ನರ್ ಯುಜುವೇಂದರ್‌ ಚಾಹಲ್ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ  ನಡೆದ 48ನೇ ಟಿ-20  ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚಾಹಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಪಡೆದುಕೊಂಡಿದ್ದಾರೆ., ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್ ಮತ್ತು ಶಾರುಖ್ ಖಾನ್ ವಿಕೆಟ್‌ಗಳು ಚಾಹಲ್‌ಗೆ ಲಭಿಸಿದೆ.

 

 

 

 

ಇನ್ನೂ 57 ರನ್ ಬಾರಿಸಿದ್ದ ಮಯಾಂಕ್ ಅಗರ್ವಾಲ್ 15.2ನೇ ಓವರ್‌ನಲ್ಲಿ, ನಿಕೋಲಸ್ ಪೂರನ್ 3 ರನ್‌ ಬಾರಿಸಿ 12.5ನೇ ಓವರ್‌ ಮತ್ತು 0 ರನ್‌ಗೆ ಸರ್ಫರಾಜ್ ಖಾನ್ ಅವರನ್ನು 15.5ನೇ ಓವರ್‌ನಲ್ಲಿ ಚಾಹಲ್ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಈ  ಮೂರು ವಿಕೆಟ್‌ ಮೂಲಕ ಚಾಹಲ್ ದಾಖಲೆ ಪಟ್ಟಿಗೆ ಸೇರಿದ್ದಾರೆ.

ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರು

ಯುಜುವೇಂದ್ರ ಚಾಹಲ್ – 38 *

ಜಸ್ಪ್ರೀತ್ ಬೂಮ್ರಾ – 38 *

ಕಾಗಿಸೊ ರಬಾಡ – 35 *

ಮೊಹಮ್ಮದ್ ಶಮಿ – 33 *

Please follow and like us:

Leave a Reply

Your email address will not be published. Required fields are marked *

Next Post

ಪ್ರಿಯಾಂಕ ಗಾಂಧಿ ಅರೆಸ್ಟ್..!?

Mon Oct 4 , 2021
ಪೊಲೀಸ್‌ ಮತ್ತು ಪ್ರಿಯಾಂಕ ನಡುವೆ ಮಾತಿನಿ ಚಕಮಕಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು  ವಿರೋಧಿಸಿ ಸುಮಾರು ಹತ್ತು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ನಿರಂತರ ಹೋರಟ ನಡೆಯುತ್ತಲೆ ಇದೇ… ಕೇಂದ್ರ ಸರ್ಕಾರ ರೈತರನ್ನು ಹೇಗೆ ಸಂದಾನ ಮಾಡುವುದು ಎಂದು ಯೋಚಿಸುತ್ತಿರುವಾಗಲೇ  ಇತ್ತೀಚಿಗೆ ಭಾಷಣವೊಂದರಲ್ಲಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಅಜಯ್‌ ಮಿಶ್ರಾ ನೀಡಿದ ಹೇಳಿಕೆಗೆ ರೊಚ್ಚಿಗೆದ್ದ ರೈತರು ಪ್ರತಿಭಟನೆ […]

Advertisement

Wordpress Social Share Plugin powered by Ultimatelysocial