ಜನರ ಜೀವನಾಡಿ ಸಬರ್ಬನ್‌ ರೈಲುಗಳ ಸಂಚಾರ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು ಆದರೆ ಇದೀಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಗೊಳ್ಳುತ್ತಿದೆ,ಇದರಿಂದ ಮುಂಬೈ ನಗರದಲ್ಲಿ ಜನರ ಜೀವನಾಡಿ ಸಬರ್ಬನ್‌ ರೈಲುಗಳ ಮತ್ತೆ ಸಂಚಾರ ಆರಂಭವಾಗಿದೆ. ಮುಂಬೈ ಉಪನಗರ ರೈಲುಗಳು ಸೋಮವಾರದಿಂದ ಸಂಚಾರ ಆರಂಭಿಸಿವೆ. ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿಯೆಂದು ಸೂಚಿಸಿರುವವರು ಮಾತ್ರ ಇದರಲ್ಲಿ ಪ್ರಯಾಣಿಸಬಹುದು. ಸಾರ್ವಜನಿಕರು ರೈಲುಗಳಲ್ಲಿ ಸಂಚಾರ ನಡೆಸಲು ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ರೇಲ್ವೆ ಸ್ಟೇಷನ್​ಗಳಲ್ಲಿ ಜನಗುಂಪು ಸೇರದಂತೆ ಸೂಚನೆ ನೀಡಲಾಗಿದೆ. 15 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 5.30ರಿಂದ 11.30ರವರೆಗೆ ಮಾತ್ರ ರೈಲುಗಳು ಓಡಾಡಲಿವೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ 1200 ಪ್ರಯಾಣಿಕರನ್ನ ಕೊಂಡೊಯ್ಯಬಲ್ಲ ರೈಲುಗಳಲ್ಲಿ 700 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಎಫೆಕ್ಟ್ ಸಿಎಂ ತುರ್ತು ಸಭೆ

Mon Jun 15 , 2020
ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಿದ್ದು, ಸೋಂಕಿತರ ಸಾವು ಕೂಡ ಅಧಿಕವಾಗಿದೆ. ಈ ಹಿನ್ನಲೆಯನ್ನು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಸಿಎಂ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳತುರ್ತು ಸಭೆ ನಡೆಯಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಿದೆ. ಇದರೊಂದಿಗೆ ಕಂಟೈನ್ ಮೆಂಟ್ ಜೋನ್ ಗಳ ಸಂಖ್ಯೆಯೂ 142ಕ್ಕೆ ಏರಿಕೆಯಾಗಿದೆ. ಹೀಗಾಗಿ ಸೋಂಕು […]

Advertisement

Wordpress Social Share Plugin powered by Ultimatelysocial