ಜಿ.ಟಿ.ದೇವೇಗೌಡ.

 

ಜಿ.ಟಿ.ದೇವೇಗೌಡ. ವಯಸ್ಸು 73 ವರ್ಷ. ಜನತಾ ಪರಿವಾರದ ಹಳೆಯ ಮುಖ. 1970ರ ದಶಕದಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಆರಂಭಿಸಿದ್ದ ಅವರು ನಂತರದ ದಿನಗಳಲ್ಲಿ ಜೆಡಿಎಸ್ ಸೇರಿದ್ದರು. ಮೈಸೂರು ಜಿಲ್ಲೆಯ ಜನಪ್ರಿಯ ನಾಯಕ.

ಮೈತ್ರಿ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು ಮತ್ತು ಅದಕ್ಕಾಗಿ ಅವರಿಗೆ ಬೇಸರವೂ ಆಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಿ ಗೆದ್ದ ಹೆಗ್ಗಳಿಕೆ. ಜೆಡಿಎಸ್ ತೊರೆಯಲಿದ್ದಾರೆ ಎಂಬ ವದಂತಿಗೆ ಇತ್ತೀಚಿನ ಬೆಳವಣಿಗೆಗಳಿಂದ ತೆರೆ ಬಿದ್ದಿದೆ.

ದೇವೇಗೌಡರ ಮ್ಯಾಜಿಕ್ ಬಳಿಕ ರಂಗೇರುತ್ತಿದೆಯೆ ಚಾಮುಂಡೇಶ್ವರಿ ಕ್ಷೇತ್ರ?

ಜೆಡಿಎಸ್ ಮೇಲಿನ ಮುನಿಸು ಮರೆತ ಜಿ.ಟಿ.ಡಿ.ಗೆ ಇನ್ನಾರು ಎದುರಾಳಿಗಳು?

ಚಾಮುಂಡೇಶ್ವರಿ ಕ್ಷೇತ್ರ

ಹೆಚ್ಚಲ್ಲ, ನಾಲ್ಕು ತಿಂಗಳುಗಳ ಹಿಂದಿನ ವಿಚಾರ. ಜಿ.ಟಿ.ದೇವೇಗೌಡರು ಜೆಡಿಎಸ್ ತೊರೆಯುತ್ತಾರೆ ಎಂಬ ವದಂತಿಗಳಿದ್ದಾಗಲೇ ಇದ್ದಕ್ಕಿದ್ದಂತೆ ಜೆಡಿಎಸ್ ವೆಬ್‌ಸೈಟ್‌ನಿಂದ ಜಿ.ಟಿ.ದೇವೇಗೌಡರ ಹೆಸರನ್ನೂ ಅವರ ಫೊಟೋವನ್ನೂ ತೆಗೆದುಹಾಕಲಾಯಿತು. ಪಕ್ಷದ ಹಾಲಿ ಶಾಸಕರಾಗಿದ್ದರೂ ಅವರ ಬಗ್ಗೆ ನಾಲ್ಕು ಸಾಲಿನ ಮಾಹಿತಿಯೂ ಇರದಂತೆ ಮಾಡಲಾಯಿತು. ಮಾತ್ರವಲ್ಲ, ಪಕ್ಷದ ಎಲ್ಲಾ ಪೋಸ್ಟರ್‌ಗಳಿಂದಲೂ ಅವರ ಚಿತ್ರವನ್ನು ತೆಗೆದುಹಾಕುವುದೂ ಶುರುವಾಗಿತ್ತು. ಇದು ಅವರ ಬೆಂಬಲಿಗರ ತೀವ್ರ ಬೇಸರಕ್ಕೆ ಎಡೆಮಾಡಿಕೊಟ್ಟ ಬೆಳವಣಿಗೆಯಾಗಿತ್ತು. ಕುಮಾರಸ್ವಾಮಿಯವರ ಮೇಲಿನ ಕೋಪವೂ ಸೇರಿದಂತೆ ಪಕ್ಷದ ಮೇಲೆ ಬೇರೆ ಬೇರೆ ಕಾರಣಗಳಿಗಾಗಿ ಬೇಸರಗೊಂಡಿದ್ದ ಜಿಟಿಡಿ, ಪಕ್ಷ ಬಿಡಬೇಕೆಂದುಕೊಂಡಿದ್ದರೂ ಆ ಬಗ್ಗೆ ಅರೆಮನಸ್ಕರಾಗಿಯೇ ಇದ್ದರು. ಆದರೆ ಈ ಬೆಳವಣಿಗೆ ಅವರನ್ನು ಇನ್ನಷ್ಟು ಕುಗ್ಗಿಸಿತ್ತು.ಇದಾದ ಬಳಿಕ ಅಕ್ಟೋಬರ್ ಮಧ್ಯದಲ್ಲಿ ಸ್ವತಃ ಎಚ್.ಡಿ ದೇವೇಗೌಡರೇ ಜೆಡಿಎಸ್ ಪರಿವಾರ ಸಮೇತರಾಗಿ ಮೈಸೂರಿನ ವಿವಿ ಮೊಹಲ್ಲಾದ ಜಿಟಿಡಿ ಮನೆಗೇ ಹೋಗಿ, ಊಟ ಮಾಡಿ, ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು, ಮಾಧ್ಯಮದವರೆದುರು ಅವರನ್ನು ಮರೀಗೌಡರೆಂದು ಕರೆದುಮ್ಯಾಜಿಕ್ಕನ್ನೇ ಮಾಡಿದರು. ದೇವೇಗೌಡರ ಈ ಪ್ರೀತಿಗೆ ಜಿ.ಟಿ. ದೇವೇಗೌಡರ ಮೂರೂವರೆ ವರ್ಷಗಳ ಮುನಿಸು ಕರಗಿಹೋಗಿತ್ತು. ಯಾವ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ ಎಂದರು. ಅಲ್ಲಿಗೆ ಎಲ್ಲ ಊಹಾಪೂಹಗಳಿಗೂ ತೆರೆಬಿದ್ದಂತಾಯಿತು. ಮತ್ತು ಜೆಡಿಎಸ್‌ನಿಂದ ಜಿಟಿಡಿಯವರೇ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಎಂಬುದು ಖಾತ್ರಿಯಾಯಿತು.ಇಲ್ಲಿಂದಲೇ ನಿಜವಾಗಿಯೂ ಈ ಸಲದ ಚುನಾವಣೆ ತಲೆಬಿಸಿ ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಶುರು. ಜಿಟಿಡಿ ಜೆಡಿಎಸ್ ಜೊತೆಗೇ ಇರುವುದರೊಂದಿಗೆ ಹಳೇ ಮೈಸೂರು ಭಾಗದಲ್ಲಿ ದಳಬಲ ಹೆಚ್ಚಿದೆ ಮತ್ತು ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಬಯಸಿದ್ದ ಕಾಂಗ್ರೆಸ್‌ಗೂ ಬಿಜೆಪಿಗೂ ಈಗ ಜಿಟಿಡಿ ಎದುರು ಯಾರನ್ನು ಎದುರಾಳಿಯಾಗಿಸುವುದು ಎಂಬ ಚಿಂತೆ ಕಾಡತೊಡಗಿದೆ.ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು 30 ಸಾವಿರ ಮತಗಳಿಗೂ ಹೆಚ್ಚಿನ ಅಂತರದಿಂದ ಸೋಲಿಸಿದ್ದ ಜಿಟಿಡಿ, ಒಕ್ಕಲಿಗರ ಪ್ರಾಬಲ್ಯದ ಈ ಅಖಾಡದಲ್ಲಿ ಹ್ಯಾಟ್ರಿಕ್ ಗೆಲುವನ್ನು ಕಾಣುವ ಆತ್ಮವಿಶ್ವಾಸವೂ ಜಿಟಿಡಿ ಅವರಿಗೆ ಇದೆ. ಕಳೆದ ಚುನಾವಣೆಯಲ್ಲಿನ ಜಿಟಿಡಿ ರಾಜಕೀಯ ಶಕ್ತಿ ಪ್ರದರ್ಶನದ ಅರಿವಿದ್ದುದರಿಂದಲೇ ದೇವೇಗೌಡರು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿರುವುದು. ಜಿಟಿಡಿ ಜೆಡಿಎಸ್ ತೊರೆದರೆ ಖಂಡಿತವಾಗಿಯೂ ಮೈಸೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆ ಎಂದು ಗ್ರಹಿಸಿಯೇ, ಅವರು ಜೆಡಿಎಸ್‌ನಲ್ಲಿಯೇ ನಿಲ್ಲುವಂತೆ ಮಾಡಿದ್ದಾರೆ.ಒಂದು ಕುತೂಹಲದ ಸಂಗತಿಯೆಂದರೆ, ಜೆಡಿಎಸ್‌ನಲ್ಲಿಯೇ ಜಿಟಿಡಿ ಇರುವಂತಾಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮಾತ್ರವಲ್ಲ, ಸ್ವತಃ ಜೆಡಿಎಸ್‌ಗೊಳಗೂ ತಳಮಳ ಹುಟ್ಟುಹಾಕಿದೆ. ಜಿಟಿಡಿ ಜೆಡಿಎಸ್‌ನಲ್ಲಿ ಉಳಿದಿರುವುದು ಸ್ವಪಕ್ಷದ ಕೆಲವು ನಾಯಕರಿಗೇ ಅಸಹನೀಯವೆನ್ನಿಸಿದೆ ಎಂಬ ಮಾತುಗಳಿವೆ. ಪಕ್ಷದಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡತೊಡಗಿದೆ. ಇನ್ನೊಂದೆಡೆ ಅವರನ್ನು ಹೇಗಾದರೂ ಸೋಲಿಸಿಯೇ ತೀರಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹಠಕ್ಕೆ ಬಿದ್ದು, ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿವೆ.ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು 30 ಸಾವಿರ ಮತಗಳಿಗೂ ಹೆಚ್ಚಿನ ಅಂತರದಿಂದ ಸೋಲಿಸಿದ್ದ ಜಿಟಿಡಿ, ಒಕ್ಕಲಿಗರ ಪ್ರಾಬಲ್ಯದ ಈ ಅಖಾಡದಲ್ಲಿ ಹ್ಯಾಟ್ರಿಕ್ ಗೆಲುವನ್ನು ಕಾಣುವ ಆತ್ಮವಿಶ್ವಾಸವೂ ಜಿಟಿಡಿ ಅವರಿಗೆ ಇದೆ. ಕಳೆದ ಚುನಾವಣೆಯಲ್ಲಿನ ಜಿಟಿಡಿ ರಾಜಕೀಯ ಶಕ್ತಿ ಪ್ರದರ್ಶನದ ಅರಿವಿದ್ದುದರಿಂದಲೇ ದೇವೇಗೌಡರು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿರುವುದು. ಜಿಟಿಡಿ ಜೆಡಿಎಸ್ ತೊರೆದರೆ ಖಂಡಿತವಾಗಿಯೂ ಮೈಸೂರು ಜಿಲ್ಲೆಯ ಗ್ರಾಮೀಣ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆ ಎಂದು ಗ್ರಹಿಸಿಯೇ, ಅವರು ಜೆಡಿಎಸ್‌ನಲ್ಲಿಯೇ ನಿಲ್ಲುವಂತೆ ಮಾಡಿದ್ದಾರೆ.ಒಂದು ಕುತೂಹಲದ ಸಂಗತಿಯೆಂದರೆ, ಜೆಡಿಎಸ್‌ನಲ್ಲಿಯೇ ಜಿಟಿಡಿ ಇರುವಂತಾಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮಾತ್ರವಲ್ಲ, ಸ್ವತಃ ಜೆಡಿಎಸ್‌ಗೊಳಗೂ ತಳಮಳ ಹುಟ್ಟುಹಾಕಿದೆ. ಜಿಟಿಡಿ ಜೆಡಿಎಸ್‌ನಲ್ಲಿ ಉಳಿದಿರುವುದು ಸ್ವಪಕ್ಷದ ಕೆಲವು ನಾಯಕರಿಗೇ ಅಸಹನೀಯವೆನ್ನಿಸಿದೆ ಎಂಬ ಮಾತುಗಳಿವೆ. ಪಕ್ಷದಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡತೊಡಗಿದೆ. ಇನ್ನೊಂದೆಡೆ ಅವರನ್ನು ಹೇಗಾದರೂ ಸೋಲಿಸಿಯೇ ತೀರಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹಠಕ್ಕೆ ಬಿದ್ದು, ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿವೆ.ಜೆಡಿಎಸ್ ಮೇಲೆ ಮುನಿಸಿಕೊಂಡಿದ್ದ ಅವರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಯೋಚಿಸಿತ್ತು. ಅವರನ್ನು ಪಕ್ಷಕ್ಕೆ ಕರೆದುಕೊಂಡರೆ ಹೇಗೂ ಚಾಮುಂಡೇಶ್ವರಿ ಕ್ಷೇತ್ರವನ್ನು ಅನಾಯಾಸವಾಗಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಹಳೇ ಮೈಸೂರು ಭಾಗದಲ್ಲಿ ಪ್ರಬಲ ನಾಯಕರ ಶೋಧದಲ್ಲಿದ್ದ ಬಿಜೆಪಿ ಕೂಡ, ಜಿಟಿಡಿ ಬರಬಹುದು, ತನಗೆ ಬಲವಾಗಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ ದೇವೇಗೌಡರು ಒಂದು ಊಟದಲ್ಲೇ ಆಟ ಮುಗಿಸಿಬಿಡುತ್ತಾರೆಂಬುದು ಮಾತ್ರ ಇವರಾರ ಎಣಿಕೆಗೂ ನಿಲುಕಿರಲಿಲ್ಲ.ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದಲೂ ಹಲವು ಹೆಸರುಗಳು ಜಿಟಿಡಿ ವಿರುದ್ಧ ಸ್ಪರ್ಧಿಸುವ ವಿಚಾರವಾಗಿ ಕೇಳಿಬರುತ್ತಿವೆ. ಎಲ್ಲರೂ ಸ್ಥಳೀಯ ನಾಯಕರುಗಳೇ. ಆದರೆ ಸಿದ್ದರಾಮಯ್ಯರಂಥವರನ್ನೇ ಸೋಲಿಸಿರುವ ಜಿಟಿಡಿ ಎದುರು ಅವರು ಸಮಬಲರೇ ಎಂಬ ಪ್ರಶ್ನೆಯೂ ಕಾಡದೇ ಇಲ್ಲ. ಹೀಗಾಗಿ ಒಂದೆಡೆ ಸ್ಥಳೀಯ ನಾಯಕರ ತಾಕತ್ತು ಅಳೆದೂ ತೂಗಿ ಮಾಡುತ್ತಲೇ, ಗೆಲ್ಲುವ ಹುರಿಯಾಳುವನ್ನು ಹೊರಗಿನಿಂದ ಕರೆತಂದು ನಿಲ್ಲಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನಲಾಗುತ್ತಿದೆ. ಬಿಜೆಪಿಯ ಮಟ್ಟಿಗೆ ಅಂಥ ಒಂದು ಅಚ್ಚರಿಯಾಗಿ ಹೆಸರಾಗಿ ನಟ ಶಶಿಕುಮಾರ್ ಹೆಸರು ಕೇಳಿಬರುತ್ತಿರುವುದೂ ಹೌದು.ಜೆಪಿಯಂತೂ ಇಲ್ಲಿ ಈ ಬಾರಿ ಗೆದ್ದೇ ತೀರಬೇಕೆಂಬ ಛಲಕ್ಕೆ ಬಿದ್ದಂತಿದೆ. ಯಾಕೆಂದರೆ ಈವರೆಗೂ ಅದಕ್ಕೆ ಈ ಕ್ಷೇತ್ರದಲ್ಲಿ ಗೆಲ್ಲಲಾಗಿಲ್ಲ. ಇಲ್ಲಿ ನಡೆದ 12 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ, ಜನತಾದಳದ ಅಭ್ಯರ್ಥಿಗಳು 2 ಬಾರಿ, ಜೆಡಿಎಸ್ ಅಭ್ಯರ್ಥಿಗಳು 3 ಬಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಈ ಕ್ಷೇತ್ರವನ್ನು ಗೆಲ್ಲುವುದು ಸಾಧ್ಯವಾಗಿಯೇ ಇಲ್ಲ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಲ್ಲಿ ಶೇ.60ರಷ್ಟು ಮತಗಳು ಒಕ್ಕಲಿಗರದ್ದೇ ಆಗಿವೆ. ಹೀಗಾಗಿ, ಕಳೆದೆರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಜಿಟಿಡಿ ಪ್ರಾಬಲ್ಯ ಸಹಜವಾಗಿಯೇ ಇದೆ. ಇಲ್ಲಿ 1967 ಮತ್ತು 1972ರಲ್ಲಿ ಕೆ.ಪುಟ್ಟಸ್ವಾಮಿ ಕಾಂಗ್ರೆಸ್‌ನಿಂದ ಗೆದ್ದಿದ್ದರೆ, 1978ರಲ್ಲಿ ದೇವರಾಜ ಅರಸು ಕಾಂಗ್ರೆಸ್(ಐ)ನಿಂದ ಗೆದ್ದಿದ್ದರು. 1983ರಲ್ಲಿ ಸಿದ್ದರಾಮಯ್ಯ ಪಕ್ಷೇತರರಾಗಿಗೆದ್ದಿದ್ದರು. 1985ರಲ್ಲಿ ಮತ್ತೆ ಸಿದ್ದರಾಮಯ್ಯನವರೇ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. 1989ರಲ್ಲಿ ಎಂ.ರಾಜಶೇಖರಮೂರ್ತಿ ಕಾಂಸ್‌ನಿಂದ ಗೆದ್ದರು. 1994ರಲ್ಲಿ ಸಿದ್ದರಾಮಯ್ಯ ಜನತಾದಳದಿಂದ ಗೆಲುವು ಸಾಧಿಸಿದ್ದರು. 1999ರಲ್ಲಿ ಎ.ಎಸ್.ಗುರುಸ್ವಾಮಿ ಕಾಂಗ್ರೆಸ್‌ನಿ ಗೆದ್ದರೆ, 2004ರಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಿಂದ ಗೆದ್ದರು. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಪಡೆದರು. 2008ರಲ್ಲಿ ಎಂ.ಸತ್ಯನಾರಾಯಣ ಅವರು ಕಾಂಗ್ರೆಸ್‌ನಿಂದ ಗೆದ್ದರು. 2013 ಮತ್ತು 2018ರಲ್ಲಿ ಜಿ.ಟಿ.ದೇವೇಗೌಡ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಇದುವರೆಗೆ 5 ಗೆಲುವನ್ನು ಕಂಡಿದ್ದ ಸಿದ್ದರಾಮಯ್ಯನವರನ್ನು ಸೋಲಿಸಿದ ಜಿಟಿಡಿ ಪಾಲಿಗೆ ಆ ಗೆಲುವೇ ಅರ್ಧದಷ್ಟು ರಕ್ಷಣೆಯನ್ನು ಕೊಡುತ್ತದೆಂಬುದೂ ಒಂದು ಲೆಕ್ಕ. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದ ಕದನ ಕುತೂಹಲಕಾರಿಯಾಗಿಯೇ ಇರಲಿದೆ.ಸೋಲುಣಿಸಿದ ಕ್ಷೇತ್ರ ಎಂಬ ನೋವು ಸಿದ್ದರಾಮಯ್ಯನವರಲ್ಲಿ ಇದ್ದರೂ, ತನ್ನ ಸೋಲಿಗೆ ಕಾರಣ ಜನರಲ್ಲ, ಪಕ್ಷದ ಕಾರ್ಯಕರ್ತರು ಎಂಬ ಅಸಮಾಧಾನವನ್ನೂ ಅವರು ಮತ್ತೆ ಮತ್ತೆ ವ್ಯಕ್ತಪಡಿಸಿದ್ದುಂಟು. ಈಗ ಹೊಸ ಕ್ಷೇತ್ರದ ಹುಡುಕಾಟದಲ್ಲಿರುವ ಅವರು ಅಕಸ್ಮಾತ್ ಕಡೇ ಗಳಿಗೆಯಲ್ಲಿ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸುವ ಮನಸ್ಸು ಮಾಡುವರೆ ಎಂಬ ಕುತೂಹಲವೂ ಇಲ್ಲದೆ ಇಲ್ಲ.ಜಿಟಿಡಿಯನ್ನು ಪಕ್ಷದೊಳಗೇ ಕಟ್ಟಿಹಾಕುವಲ್ಲಿ ದೇವೇಗೌಡರು ಗೆದ್ದಿದ್ದಾಗಿದೆ. ಇನ್ನು ಚಾಮುಂಡೇಶ್ವರಿ ಕಣದಲ್ಲಿ ಜೆಡಿಎಸ್‌ನ ಈ ಸರದಾರನನ್ನು ಕಟ್ಟಿಹಾಕುವ ತಾಕತ್ತು ಯಾರಿಗಿದೆ? ಗೆಲ್ಲುವ ಲೆಕ್ಕದಲ್ಲಿ ಜೆಡಿಎಸ್ ಇದ್ದರೆ, ಸೋಲಿಸುವ ಲೆಕ್ಕಾಚಾರದಲ್ಲಿ ಎದುರಾಳಿಗಳಿದ್ದಾರೆ. ಯಾರ ಲೆಕ್ಕ ಗೆಲ್ಲುವುದೊ ನೋಡಬೇಕಷ್ಟೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಟ ದರ್ಶನ್​ ಮೇಲೆ ಚಪ್ಪಲಿ ಎಸೆತ!

Mon Dec 19 , 2022
ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳು ಚಪ್ಪಲಿ ಕಂಡು ಶಾಕ್ ಆದ ರಚಿತಾ ರಾಮ್. ನಟ ದರ್ಶನ್​ ಮೇಲೆ ಚಪ್ಪಲಿ ಎಸೆತ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial