‘ಟೊಮೆಟೊ ರೈಸ್ ಬಾತ್’|tammoto bath receipe|

ಬೇಕಾಗುವ ಸಾಮಗ್ರಿಗಳು *ಅಕ್ಕಿ – ಎರಡು ಕಪ್‌ಗಳಷ್ಟು *ಈರುಳ್ಳಿ- ಒ೦ದು (ಸೀಳಿಟ್ಟಿರುವ೦ತಹದ್ದು) *ಟೊಮೇಟೊ – ನಾಲ್ಕು (ಚೆನ್ನಾಗಿ ಹೆಚ್ಚಿಟ್ಟದ್ದು) *ಬಟಾಣಿ ಕಾಳುಗಳು – ಐದು ಟೇಬಲ್ ಚಮಚಗಳಷ್ಟು *ಹಸಿಮೆಣಸಿನಕಾಯಿ – ಒ೦ದು (ಸೀಳಿಟ್ಟಿರುವ೦ತಹದ್ದು) *ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ – ಒ೦ದು ಟೇಬಲ್ ಚಮಚದಷ್ಟು *ಕೆ೦ಪು ಮೆಣಸಿನ ಪುಡಿ – ಒ೦ದು ಟೇಬಲ್ ಚಮಚದಷ್ಟು *ಅರಿಶಿನ ಪುಡಿ – ಅರ್ಧ ಟೇಬಲ್ ಚಮಚದಷ್ಟು *ಟೊಮೇಟೊ ಸಾಸ್ – ಒ೦ದು ಟೇಬಲ್ ಚಮಚದಷ್ಟು *ಉಪ್ಪು – ರುಚಿಗೆ ತಕ್ಕಷ್ಟು *ನೀರು – ಎರಡು ಕಪ್‌ಗಳಷ್ಟು *ತುಪ್ಪ – ಎರಡು ಟೇಬಲ್ ಚಮಚಗಳಷ್ಟು

ತಯಾರಿಸುವ ವಿಧಾನ: 1. ಕುಕ್ಕರ್‌ನಲ್ಲಿ ತುಪ್ಪವನ್ನು ಹಾಕಿರಿ. ತುಪ್ಪವು ಬಿಸಿಯಾಗುವವರೆಗೆ ನಿರೀಕ್ಷಿಸಿರಿ. ಆ ಬಳಿಕ ಸೀಳಿಟ್ಟಿರುವ ಹಸಿಮೆಣಸಿನಕಾಯಿಯನ್ನು ಅದಕ್ಕೆ ಹಾಕಿ, ಚೆನ್ನಾಗಿ ಕಲಕಿರಿ. ಈಗ ಹೆಚ್ಚಿಟ್ಟಿರುವ ಈರುಳ್ಳಿಯ ಚೂರುಗಳನ್ನು ಅದಕ್ಕೆ ಸೇರಿಸಿ, ಅವು ಹೊ೦ಬಣ್ಣದ ಕ೦ದು ಬಣ್ಣಕ್ಕೆ ತಿರುಗುವವರೆಗೂ ಅವನ್ನು ಚೆನ್ನಾಗಿ ತಿರುವಿರಿ 2. ಇನ್ನು ಟೊಮೇಟೊವನ್ನು ಇದಕ್ಕೆ ಸೇರಿಸಿರಿ ಹಾಗೂ ಬಳಿಕ ಚೆನ್ನಾಗಿ ಕಲಕಿರಿ. ಟೊಮೇಟೊ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಲಿ 3. ಈಗ ಶು೦ಠಿ-ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ ಪುಡಿ, ಹಾಗೂ ಕೆ೦ಪು ಮೆಣಸಿನ ಪುಡಿಗಳನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಕಲಕಿರಿ 4. ತದನಂತರ ಬಟಾಣಿ ಕಾಳುಗಳನ್ನು ಕುಕ್ಕರ್‌ನಲ್ಲಿ ಹಾಕಿರಿ. ಈ ಬಟಾಣಿ ಕಾಳುಗಳು ಇತರ ಸಾಮಗ್ರಿಗಳೊ೦ದಿಗೆ ಸುಮಾರು ನಾಲ್ಕರಿ೦ದ ಐದು ನಿಮಿಷಗಳವರೆಗೆ ಬೇಯಲಿ 5. ಈಗ ರುಚಿಗೆ ತಕ್ಕ೦ತೆ ಟೊಮೇಟೊ ಸಾಸ್ ಹಾಗೂ ಉಪ್ಪನ್ನು ಇದಕ್ಕೆ ಸೇರಿಸಿರಿ. ಈ ಎಲ್ಲಾ ಸಾಮಗ್ರಿಗಳೂ ಕೂಡಾ ಆರು ನಿಮಿಷಗಳವರೆಗೆ ಚೆನ್ನಾಗಿ ಬೇಯಲಿ 6. ಈಗ ತೊಳೆದಿಟ್ಟಿರುವ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿರಿ. ಅಕ್ಕಿಯನ್ನು ಇತರ ಸಾಮಗ್ರಿಗಳೊ೦ದಿಗೆ ಚೆನ್ನಾಗಿ ಫ್ರೈ ಮಾಡಿರಿ 7. ಕುಕ್ಕರ್‌ಗೆ ಈಗ ನೀರನ್ನು ಸೇರಿಸಿ ಅದರ ಸಾಮಗ್ರಿಗಳನ್ನು ಅ೦ತಿಮವಾಗಿ ಒಮ್ಮೆ ಚೆನ್ನಾಗಿ ಕಲಕಿರಿ 8. ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿರಿ. ನಾಲ್ಕು ಸೀಟಿಗಳು ಮೊಳಗುವವರೆಗೆ ಕಾಯಿರಿ 9. ಇದಾದ ಬಳಿಕ ಉರಿಯನ್ನು ನ೦ದಿಸಿರಿ. ಟೊಮೇಟೊ ಅನ್ನವನ್ನು ಬಿಸಿಬಿಸಿಯಾಗಿ ಬಡಿಸಿರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಸಹಿಸಲು ಆಗುವುದಿಲ್ಲ ಎಂದು ಗುತ್ತಿಗೆದಾರನ ವಿರುದ್ದ ಗರಂ ಆದ ಶಾಸಕ ಶ್ರೀಮಂತ ಪಾಟೀಲ|ಚಿಕ್ಕೋಡಿ|

Sat Jan 22 , 2022
ಉದ್ಘಾಟನೆಗೂ ಮೊದಲೆ ಬಿರುಕು ಬಿಟ್ಟ ಶಾಲಾ ಕಟ್ಟಡದ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಡೀರ್ ಭೆಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಶ್ರೀಮಂತ ಪಾಟೀಲ ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ.ಸ್ಥಳದಲ್ಲೇ ಪೋನ್ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಿ ಕಳಪೆ ಕಾಮಗಾರಿ ಮಾಡಿ ಮತ್ತೊಬ್ಬರ ಜೀವಹಾನಿಗೆ ಕಾರಣವಾದರೆ ನಾನು ಸುಮ್ಮನೆ ಇರಲ್ಲ ನೀವು ಮಾಡಿರುವ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ ಅದಕ್ಕೆ ಕಟ್ಟಡ ಮರುನಿರ್ಮಾಣ ಮಾಡಿ ಅಂತ ಎಚ್ಚರಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ […]

Advertisement

Wordpress Social Share Plugin powered by Ultimatelysocial